ಬಿಜೆಪಿಗೆ ನಿತೀಶ್ ಬೆಂಬಲ: ಇಬ್ಬಾಗವಾಗುವತ್ತ ಜೆಡಿಯು ಪಕ್ಷ

ಪಾಟ್ನಾ, ಗುರುವಾರ, 27 ಜುಲೈ 2017 (15:39 IST)

ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆಯಿಂದ ಅಸಮಾಧಾನಗೊಂಡಿರುವ ಮಾಜಿ ಜೆಡಿಯು ಅಧ್ಯಕ್ಷ ಶರದ್ ಯಾದವ್, ಸಂಜೆ 5 ಗಂಟೆಗೆ ಜೆಡಿಯು ಶಾಸಕರ ಸಭೆ ಕರೆದಿದ್ದಾರೆ.    
 
ಒಂದೆಡೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಮತ್ತೊಂದೆಡೆ ಶರದ್ ಯಾದವ್ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಅವರೊಂದಿಗೆ ಚರ್ಚೆ ನಡೆಸಿರುವುದು ಬಿಹಾರ್ ರಾಜಕೀಯಕ್ಕೆ ಮತ್ತೊಂದು ತಿರುವು ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 
 
ಪ್ರಧಾನಿ ಮೋದಿ ಸಂಪುಟದಲ್ಲಿ ಶರದ್ ಯಾದವ್‌ಗೆ ಕೇಂದ್ರ ಸಚಿವ ಸ್ಥಾನ ನೀಡಲಾಗುವುದು ಎನ್ನುವ ವರದಿಗಳಿಗೆ ಉತ್ತರಿಸದ ಶರದ್ ಯಾದವ್, ಮಹಾಮೈತ್ರಿ ಮುರಿದುಕೊಂಡಿರುವ ನಿತೀಶ್ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. 
 
ಜೆಡಿಯು ಪಕ್ಷದ ಮತ್ತೊಬ್ಬ ನಾಯಕ ರಾಜ್ಯಸಭೆ ಸದಸ್ಯ ಅಲಿ ಅನ್ವರ್, ಈಗಾಗಲೇ ನಿತೀಶ್ ವಿರುದ್ಧ ವಾಗ್ದಾಳಿ ನಡೆಸಿ ಎನ್‌ಡಿಎ ಮೈತ್ರಿಕೂಟ ಬೆಂಬಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ಇದೊಂದು ರಾಷ್ಟ್ರೀಯ ದುರಂತ. ಮಹಾಮೈತ್ರಿಕೂಟದೊಂದಿಗೆ ಮುಂದುವರಿಯಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ. ನನ್ನ ಆತ್ಮಸಾಕ್ಷಿ ಕೂಡಾ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಲು ಒಪ್ಪುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಎನ್‌ಡಿಎ ಮೈತ್ರಿಕೂಟದೊಂದಿಗೆ ಸೇರ್ಪಡೆಯಾಗುವ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪಕ್ಷದ ನಾಯಕರನ್ನು ಸಂಪರ್ಕಿಸಿಲ್ಲ. ಈ ಮೈತ್ರಿ ಬಿಜೆಪಿಗೆ ಮಾತ್ರ ಉತ್ತಮವಾಗಿದೆ. ಜುಲೈ 23 ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿತ್ತು. ಆದರೆ, ಮುಂದಿನ ಒಂದು ತಿಂಗಳವರೆಗೆ ಮುಂದೂಡಲಾಯಿತು. ನಿತೀಶ್ ತೀರ್ಮಾನದ ವಿರುದ್ಧ ನಾನು ಧ್ವನಿ ಎತ್ತುವುದನ್ನು ನಿಲ್ಲಿಸಲಾರೆ ಎಂದು ಜೆಡಿಯು ಮುಖಂಡ, ರಾಜ್ಯಸಭೆ ಸದಸ್ಯ ಅಲಿ ಅನ್ವರ್ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಶರದ್ ಯಾದವ್ ಕಾಂಗ್ರೆಸ್ ಎನ್‌ಡಿಎ ರಾಹುಲ್ ಗಾಂಧಿ ಅಲಿ ಅನ್ವರ್ ನಿತೀಶ್ ಕುಮಾರ್ Congress Nda Sharad Yadav Rahul Gandhi Ali Anwar Nitish Kumar

ಸುದ್ದಿಗಳು

news

ಧರಂ ಸಿಂಗ್ ನಿಧನ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕಂಬನಿ

ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಧರಂ ...

news

ಬಂಡಿಪೋರಾದಲ್ಲಿ ಉಗ್ರರ ಒಳನುಸುಳುವಿಕೆ ವಿಫಲ: ಮೂವರು ಭಯೋತ್ಪಾದಕರ ಹತ್ಯೆ

ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಗುರೆಜ್ ಸೆಕ್ಟರ್ ನಲ್ಲಿ ಒಳನುಸುಳಲು ...

news

ಧರ್ಮಸಿಂಗ್‌ರೊಂದಿಗಿನ ಸಮ್ಮಿಶ್ರ ಸರಕಾರ ಮೆಲಕುಹಾಕಿದ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ, ಧರ್ಮಸಿಂಗ್ ಅವರ ನಿಧನಕ್ಕೆ ಜೆಡಿಎಸ್ ...

news

ಮಿಸೈಲ್ ಮ್ಯಾನ್ ಡಾ.ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ

ಮಾಜಿ ರಾಷ್ಟ್ರಪತಿ, ಭಾರತ ರತ್ನ , 'ಮಿಸೈಲ್ ಮ್ಯಾನ್' ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಮಾರಕವನ್ನು ...

Widgets Magazine