ಇಟಾಲಿಯನ್ ಕನ್ನಡಕ ಧರಿಸಿರುವ ರಾಹುಲ್‌ಗೆ ವ್ಯತ್ಯಾಸ ಗೋಚರಿಸುತ್ತಿಲ್ಲ

ಪಣಜಿ, ಗುರುವಾರ, 2 ಫೆಬ್ರವರಿ 2017 (14:39 IST)

Widgets Magazine

ಧರಿಸಿರುವ ರಾಹುಲ್ ಗಾಂಧಿಗೆ ದೇಶದಲ್ಲಾಗಿರುವ ಬದಲಾವಣೆ ಗೋಚರಿಸುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. 

ಗೋವಾದ ಬಿಚಿಲೋಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿರುವ ಅವರು, ಸೋನಿಯಾ-ಮನಮೋಹನ್ ಆಡಳಿತದಲ್ಲಿ ಗಡಿಗಳು ಸುರಕ್ಷಿತವಾಗಿರಲಿಲ್ಲ. ಪ್ರತಿದಿನ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ ಬರುತ್ತಿತ್ತು. ಈಗಲೂ ಸಹ ಗುಂಡಿನ ಶಬ್ಧ ಕೇಳಿ ಬರುತ್ತಿದೆ ಎಂದು ರಾಹುಲ್ ಬಾಬಾ ಹೇಳುತ್ತಿದ್ದಾರೆ. ರಾಹುಲ್ ನಿಮಗೆ ವ್ಯತ್ಯಾಸ ಅರಿವಿಗೆ ಬಾರದು, ನಿಮ್ಮ ಕಣ್ಣ ಮೇಲಂತೂ ಇಟಾಲಿಯನ್ ಕನ್ನಡಕ ಕುಳಿತಿದೆ, ಎಂದು ಶಾ ಅಣಕವಾಡಿದ್ದಾರೆ. 
 
ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಅವರು, ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಪಾಕಿಸ್ತಾನವೇ ಫೈರಿಂಗ್ ಪ್ರಾರಂಭಿಸಿ, ಪಾಕಿಸ್ತಾನವೇ ಮುಗಿಸುತ್ತಿತ್ತು. ಈಗ ಪಾಕಿಸ್ತಾನ ಗುಂಡಿನ ದಾಳಿ ಪ್ರಾರಂಭಿಸಿದರೆ ಭಾರತೀಯ ಸೇನೆ ಅದಕ್ಕೆ ಮುಕ್ತಾಯ ಹಾಡುತ್ತಾರೆ. ಮೊದಲಿನಂತೆ ನಮ್ಮ ಸೈನಿಕರ ತಲೆ ಕತ್ತರಿಸುವ ಧೈರ್ಯ ಈಗ ಯಾರಿಗೂ ಇಲ್ಲ, ಎಂದು ಶಾ ಹೇಳಿದ್ದಾರೆ. 
 
ಮೋದಿ ಏನು ಮಾಡಿದ್ದಾರೆ ಎಂದು ರಾಹುಲ್ ಪದೇ ಪದೇ ಪ್ರಶ್ನಿಸುತ್ತಾರೆ, 2019 ಬಂದಾಗ ನಮ್ಮ ಆಡಳಿತಾವಧಿಯ ಒದೊಂದು ಸೆಕೆಂಡ್, ಒಂದೊಂದು ಪೈಸೆಯ ಲೆಕ್ಕವನ್ನು ಜನರಿಗೊಪ್ಪಿಸಿ ಮತ್ತೆ ಅಧಿಕಾರಕ್ಕೇರುತ್ತೇವೆ. ಹಾಗೆಯೇ ಯುಪಿಎ ಸರ್ಕಾರದ 10 ವರ್ಷದ ಆಡಳಿತಾವಧಿಯಲ್ಲಿ ಏನನ್ನು ಮಾಡಲಾಗಿದೆ ಎಂದು ರಾಹುಲ್ ಸಹ ವರದಿಯೊಪ್ಪಿಸಲಿ ಎಂದು ಶಾ ರಾಹುಲ್ ಅವರನ್ನು ಕೆಣಕಿದ್ದಾರೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಿ.ಪರಮೇಶ್ವರ್‌ಗೆ ಮಾನಮರ್ಯಾದೆ ಇದ್ಯಾ: ವಿಶ್ವನಾಥ್ ಕಿಡಿ

'ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಮಾನಮರ್ಯಾದೆ ಇದ್ಯಾ' ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ...

news

ಆರೇಳು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಪತನ: ಕುಮಾರಸ್ವಾಮಿ ಭವಿಷ್ಯ

ಆರೇಳು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂದು ಜೆಡಿಎಸ್ ...

news

ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿಗಳೆದುರೇ ಪ್ರಿಯತಮೆಯನ್ನು ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡ ಪ್ರೇಮಿ

ಪ್ರೇಮ ಎನ್ನುವುದು ಮನುಷ್ಯರನ್ನು ಯಾವ ಮಟ್ಟಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ. ...

news

ಮೂರನೆಯ ಮಹಾಯುದ್ಧಕ್ಕೆ ಮೋದಿ ತಯಾರಿ ಮಾಡಿಕೊಳ್ಳಲಿ: ಪೂಜಾರಿ ಸಲಹೆ

ಮೂರನೆಯ ಮಹಾಯುದ್ಧವಾದರೇ ಭಾರತಕ್ಕೆ ಉಳಿಗಾಲ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಭವಿಷ್ಯ ...

Widgets Magazine