Widgets Magazine

ವಾಜಪೇಯಿ ನಿವಾಸಕ್ಕೆ ಅಮಿತ್ ಶಾ ಶಿಫ್ಟ್

ನವದೆಹಲಿ| Krishnaveni K| Last Modified ಶುಕ್ರವಾರ, 7 ಜೂನ್ 2019 (10:03 IST)
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ  ವಾಸವಿದ್ದ ದೆಹಲಿಯ ಕೃಷ್ಣ ಮೆನನ್ ರಸ್ತೆಯ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಫ್ಟ್ ಆಗಲಿದ್ದಾರೆ.

 
ಯಾವುದೇ ಮಾಜಿ ಪ್ರಧಾನಿಗಳ ನಿವಾಸವನ್ನು ಸ್ಮಾರಕವಾಗಿಸುವುದಿಲ್ಲ ಎಂದು ಈ ಹಿಂದೆ ಮೋದಿ ಸರ್ಕಾರ ತೀರ್ಮಾನಿಸಿತ್ತು. ಅದರಂತೆ ವಾಜಪೇಯಿ ನಿವಾಸವನ್ನೂ ಸ್ಮಾರಕವಾಗಿಸಿಲ್ಲ.
 
2004 ರಿಂದ  ತಮ್ಮ ಜೀವಿತಾವಧಿಯ ಕೊನೆಯವರೆಗೆ ವಾಜಪೇಯಿ ಇದೇ ನಿವಾಸದಲ್ಲಿದ್ದರು. ಆದರೆ ಅವರ ನಿಧನದ ನಂತರ ಕುಟುಂಬ ವರ್ಗ ಕಳೆದ ನವಂಬರ್ ನಲ್ಲಿ ಈ ನಿವಾಸವನ್ನು ಖಾಲಿ ಮಾಡಿತ್ತು.
 
ಇದೀಗ ಈ ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡಿ ಕೆಲವು ನವೀಕರಣ ಮಾಡಲು ಸೂಚಿಸಿದ್ದಾರೆ. ಈ ಮೂಲಕ ಬಿಜೆಪಿ ಮುತ್ಸುದ್ದಿಯ ವಾಸವಿದ್ದ ಮನೆಗೆ ಶಿಫ್ಟ್ ಆಗುವ ಸೂಚನೆ ನೀಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :