ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ

ನವದೆಹಲಿ, ಸೋಮವಾರ, 9 ಅಕ್ಟೋಬರ್ 2017 (09:06 IST)

ನವದೆಹಲಿ: ನಮ್ಮ ಸರ್ಕಾರಕ್ಕೆ ಭ್ರಷ್ಟಾಚಾರದ ಕಳಂಕವಿಲ್ಲ ಎಂದು ಎದೆತಟ್ಟಿಕೊಳ್ಳುತ್ತಿದ್ದ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವಂತಹ ಆರೋಪವೊಂದನ್ನು ವೆಬ್ ವಾಹಿನಿಯೊಂದು ಮಾಡಿದೆ.


 
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಕಂಪನಿಯ ವಹಿವಾಟು ಒಂದೇ ವರ್ಷದಲ್ಲಿ 16 ಸಾವಿರ ಪಟ್ಟು ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ. ವೆಬ್ ವಾಹಿನಿಯೊಂದು ಮಾಡಿರುವ ಆರೋಪವು ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಎಪಿ ಮತ್ತು ಸಿಪಿಐ ಕೈಗೆ ಅಸ್ತ್ರ ಸಿಕ್ಕಂತಾಗಿದೆ.
 
ನಷ್ಟದಲ್ಲಿ ಶಾ ಪುತ್ರನ ಕಂಪನಿ ಆದಾಯ ಒಂದೇ ವರ್ಷದಲ್ಲಿ ಇಷ್ಟು ಹೆಚ್ಚಾಗಿದ್ದು ಹೇಗೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಜಯ್ ಶಾ ನನ್ನ ಕಂಪನಿ ವ್ಯವಹಾರಗಳೆಲ್ಲವೂ ಕಾನೂನು ಬದ್ಧವಾಗಿದೆ. ಸುಳ್ಳು ಆರೋಪ ಹೊರಿಸಿರುವ ವೆಬ್ ವಾಹಿನಿ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅಮಿತ್ ಶಾ ಜಯ್ ಶಾ ಭ್ರಷ್ಟಾಚಾರ ರಾಷ್ಟ್ರೀಯ ಸುದ್ದಿಗಳು Amith Shah Jay Shah National News

ಸುದ್ದಿಗಳು

news

‘ನನ್ನ ವಿರುದ್ಧ ಸ್ಪರ್ಧಿಸಲು ರೇವಣ್ಣಂಗೆ ಮೀಟರ್ ಇದ್ಯಾ?’

ಬೆಂಗಳೂರು: ತಮ್ಮ ಮೇಲೆ ಹರಿಹಾಯ್ದಿರುವ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿರುವ ...

news

ಚೀನಾ ಸೈನಿಕರಿಗೆ ನಮಸ್ತೆ ಹೇಳಲು ಕಲಿಸಿಕೊಟ್ಟ ರಕ್ಷಣಾ ಸಚಿವೆ

ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭಾರತ-ಚೀನಾ ಗಡಿ ನಥೂ ಲಾ ಗೆ ಭೇಟಿ ಕೊಟ್ಟಿದ್ದು, ಚೀನಾ ...

news

ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ಸಿದ್ಧವೆಂದ ವಾಯುಸೇನೆ ಮುಖ್ಯಸ್ಥ

ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಏಕಕಾಲಕ್ಕೆ ಯುದ್ಧ ಮಾಡಲು ಸಿದ್ಧ ಎಂದು ಇತ್ತೀಚೆಗೆ ಹೇಳಿಕೆ ...

news

ಸುವರ್ಣಸೌಧದಲ್ಲಿ ನ.7ರಿಂದ ಚಳಿಗಾಲದ ಅಧಿವೇಶನ…?

ಬೆಂಗಳೂರು: ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ನವೆಂಬರ್ 7ರಿಂದ 18ರವರೆಗೆ ಬೆಳಗಾವಿಯ ಸುವರ್ಣ ...

Widgets Magazine
Widgets Magazine