ಎಎಪಿಗೆ ಮತ್ತೊಂದು ಶಾಕ್! ಸಂಕಷ್ಟದಲ್ಲಿ ಸಿಎಂ ಕೇಜ್ರಿವಾಲ್!

NewDelhi, ಬುಧವಾರ, 10 ಮೇ 2017 (07:01 IST)

Widgets Magazine

ನವದೆಹಲಿ: ಲಂಚ ಹಗರಣದಲ್ಲಿ ಚೇತರಿಸಿಕೊಳ್ಳುವ ಮೊದಲೇ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಶಾಕ್ ಕಾದಿದೆ. ಈ ಬಾರಿ ಐಟಿ ವಿಭಾಗ ಎಎಪಿ ಪಕ್ಷದ ವಿರುದ್ಧ ನೋಟೀಸ್ ಜಾರಿ ಮಾಡಿದೆ.


 
ಕಾನೂನು ಹೋರಾಟ ಮುಂದುವರಿಸಲು ನೋಟೀಸ್ ಜಾರಿ ಮಾಡಿರುವುದಲ್ಲದೆ, ಎಎಪಿ ಪಕ್ಷದ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಇದರಿಂದ ಕೇಜ್ರಿವಾಲ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
 
ಪಕ್ಷದ ವಿರುದ್ಧ ಶೋಕಾಸ್ ನೋಟೀಸ್ ಜಾರಿ ಮಾಡಿರುವ ತೆರಿಗೆ ಇಲಾಖೆ ‘ನಿಮ್ಮ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು’ ಎಂದು ವಿವರಣೆ ಕೋರದೆ. ಅಲ್ಲದೆ ಪಕ್ಷಕ್ಕೆ ಡೊನೇಷನ್ ನೀಡಿದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಪಕ್ಷದ ಸದಸ್ಯತ್ವ ರದ್ದುಗೊಳಿಸಲು ಸೂಚಿಸಿದೆ.
 
ಇನ್ನೊಂದೆಡೆ ಸಾಮಾಜಿಕ ಹೋರಾಟಗಾರ ಹಾಗೂ ಕೇಜ್ರಿವಾಲ್ ರಾಜಕೀಯ ಗುರು ಅಣ್ಣಾ ಹಜಾರೆ ದೆಹಲಿ ಸಿಎಂ ವಿರುದ್ಧ ಆರೋಪಗಳು ಸಾಬೀತಾದರೆ ಕೇಜ್ರಿವಾಲ್ ವಿರುದ್ಧವೇ ಧರಣಿ ಕೂರುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನೊಂದೆಡೆ ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಮಾಡಿದ ಭ್ರಷ್ಟಾಚಾರ ಆರೋಪವನ್ನು ತನಿಖೆ ಮಾಡಲಾಗುವುದು ಎಂದು ಸಿಬಿಐ ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮುಸ್ಲಿಂ ಮುಖಂಡರಿಗೆ ಪ್ರಧಾನಿ ಮೋದಿ ಸ್ಪೆಷಲ್ ಮನವಿ

ನವದೆಹಲಿ: ದೇಶದಲ್ಲಿ ತ್ರಿವಳಿ ತಲಾಖ್ ಬಗ್ಗೆ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮುಸ್ಲಿಂ ...

news

ಕಾಂಗ್ರೆಸ್ಸಿಗರಲ್ಲಿ ಅಸಮಾಧಾನವಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಠಿ: ಸಿಎಂ

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಸಭೆಯಲ್ಲಿ ಮುಖಂಡರು ಅಸಮಾಧಾನ ...

news

ನಿಮ್ಮ ಕೈಯಲ್ಲಿ ಕಾನೂನು ತೆಗೆದುಕೊಳ್ಳಬೇಡಿ:ಗೋವು ರಕ್ಷಕರಿಗೆ ಯೋಗಿ ಆದಿತ್ಯ.ನಾಥ್

ಮೀರತ್: ಗೋವು ರಕ್ಷಕರು ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ಇಂತಹ ಅಪರಾಧಗಳನ್ನು ...

news

ಪುತ್ರ ಡಾ. ಯತೀಂದ್ರ ವಿರುದ್ಧ ಆಧಾರ ರಹಿತವಾದ ಸುಳ್ಳು ದೂರು: ಸಿಎಂ

ಮೈಸೂರು: ಪುತ್ರ ಡಾ.ಯತೀಂದ್ರ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ಸಲ್ಲಿಸಲಾದ ದೂರು ಆಧಾರರಹಿತವಾಗಿದೆ ...

Widgets Magazine