ಸಮಾಜವಾದಿ ಪಕ್ಷತ ನೀತಿಗೆ ವಿರುದ್ಧವಾಗಿ ತಲಾಕ್ ವಿಧೇಯಕ ಬೆಂಬಲಿಸಿದ ಅಪರ್ಣಾಯಾದವ್

ಲಕ್ನೋ, ಶನಿವಾರ, 30 ಡಿಸೆಂಬರ್ 2017 (19:13 IST)

Widgets Magazine

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್‌ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ ಪಕ್ಷದ ನಿರ್ಧಾರದ ವಿರುದ್ಧವಾಗಿ ತ್ರಿವಳಿ ತಲಾಖ್‌ ನಿಷೇಧ ವಿಧೇಯಕವನ್ನು ಬೆಂಬಲಿಸಿ ಮಾತನಾಡಿದ್ದಾರೆ.
 
ಈ ಹಿಂದೆಯೂ ಹಲವು ಬಾರಿ ಸಮಾಜವಾದಿ ಪಕ್ಷದ ನೀತಿಗೆ ವಿರುದ್ಧವಾಗಿ ಮಾತನಾಡಿರುವ ಅಪರ್ಣಾ ಯಾದವ್‌ ತ್ರಿವಳಿ ತಲಾಖ್‌ ನಿಷೇಧಿಸುವ ಕೇಂದ್ರದ ಬಿಜೆಪಿ ಸರಕಾರ ಮಂಡಿಸಿರುವ ವಿಧೇಯಕವನ್ನು ಸ್ವಾಗತಿಸಿ ಟ್ವೀಟ್‌ ಮಾಡಿದ್ದಾರೆ.
 
ಇದೊಂದು ಸ್ವಾಗತಾರ್ಹ ಬೆಳವಣಿಗೆ. ನಿರ್ದಿಷ್ಟವಾಗಿ ಮುಸ್ಲಿಂ ಮಹಿಳೆಯರಿಗಷ್ಟೇ ಅಲ್ಲ, ಸಾರ್ವತ್ರಿಕವಾಗಿ ಎಲ್ಲ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇಟ್ಟಿರುವ ದಿಟ್ಟ ಹೆಜ್ಜೆಯಿದು. ದೀರ್ಘಕಾಲದಿಂದ ದುಃಖಿತರಾಗಿದ್ದ ಮುಸ್ಲಿಂ ಮಹಿಳೆಯರ ಕಣ್ಣೊರೆಸುವ ಪ್ರಯತ್ನವಿದು ಎಂದಿದ್ದಾರೆ.
 
ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ನಿಲುವಿಗೆ ಸಂಪೂರ್ಣ ವಿರುದ್ಧ ನಿಲುವನ್ನು ತಾಳಿರುವ ಅಪರ್ಣಾ ಯಾದವ್‌ ಮುಲಾಯಂ ಸಿಂಗ್‌ ಯಾದವರ ಎರಡನೇ ಪುತ್ರ ಪ್ರತೀಕ್‌ ಯಾದವ್‌ ಪತ್ನಿಯಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಕಲಿ ಜಾಹೀರಾತುಗಳ ಹಾವಳಿ ವಿರುದ್ಧ ಕ್ರಮಕ್ಕೆ ವೆಂಕಯ್ಯನಾಯ್ಡು ಸೂಚನೆ

ತೂಕ ಇಳಿಸುವ ಗುಳಿಗೆಗಳ ಜಾಹೀರಾತು ನಂಬಿ ಮೋಸಹೋಗಿರುವ ಅನುಭವ ಹಂಚಿಕೊಂಡಿರುವ ಉಪ ರಾಷ್ಟ್ರಪತಿ ...

news

ಅನಂತ್‌ಕುಮಾರ್ ಹೆಗಡೆ ಮತಾಂಧ, ಮಹಾಮೂರ್ಖ: ಬಿಜೆಪಿ ಮುಖಂಡ

ಮೈಸೂರು: ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ ಮತ್ತು ಬಿಜೆಪಿ ನಾಯಕ ಮಧುಸೂಧನ ಮತಾಂಧರು ಮತ್ತು ಮಹಾನ್ ...

news

ಗುಜರಾತ್ ಡಿಸಿಎಂ ನಿತಿನ್ ಪಟೇಲ್‌ರಿಗೆ ಆಹ್ವಾನ ನೀಡಿದ ಹಾರ್ದಿಕ್ ಪಟೇಲ್

ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರನ್ನು ತಮ್ಮೊಡನೆ ಕೈ ಜೋಡಿಸುವಂತೆ ಪಾಟಿದರ್‌ ಹೋರಾಟಗಾರ ...

news

ಸಿದ್ದರಾಮಯ್ಯರನ್ನು ಹೊಗಳಿದ ಬಿಜೆಪಿ ಶಾಸಕ ಸುರೇಶಗೌಡ!

ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರು ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ...

Widgets Magazine