ಬಾಲಕಿಯ ಮೇಲೆ ಗ್ಯಾಂಗ್‌ರೇಪ್‌ಗೆ ನೆರವು ನೀಡಿದ ಮಹಿಳೆ ಅರೆಸ್ಟ್

ಜಹಾಂಗೀರಾಬಾದ್(ಉತ್ತರಪ್ರದೇಶ):, ಶುಕ್ರವಾರ, 17 ನವೆಂಬರ್ 2017 (12:38 IST)

ಬಾಲಕಿಯ ಮೇಲೆ ಗ್ಯಾಂಗ್‌ರೇಪ್‌ ಎಸಗಲು ಕಾಮುಕರಿಗೆ ನೆರವು ನೀಡಿದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದಾರೆ.
 
ಮಹಿಳೆಯ ನೆರವು ಪಡೆದ ನಾಲ್ವರು ಕಾಮುಕರು ಬಾಲಕಿಯ ಮೇಲೆ ಭೀಕರವಾಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ. ಗ್ಯಾಂಗ್‌ರೇಪ್ ನಂತರ ಪ್ರಜ್ಞೆ ಕಳೆದುಕೊಂಡ ಬಾಲಕಿಯನ್ನು ರಸ್ತೆಯ ಮೇಲೆ ಬಿಸಾಕಿ ಪರಾರಿಯಾಗಿದ್ದರು. ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಆರೋಪಿ ಮಹಿಳೆ ಬಾಲಕಿಗೆ ಆಮಿಷಗಳನ್ನು ಒಡ್ಡಿ ತನ್ನ ಮನೆಗೆ ಕರೆತಂದಿದ್ದಳು. ಮನೆಯಲ್ಲಿ ಅದಾಗಲೇ ಹಾಜರಿದ್ದ ನಾಲ್ವರು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಅತ್ಯಾಚಾರವೆಸಗುವಾಗ ಮಹಿಳೆ ನೋಡುತ್ತಾ ನಿಂತಿದ್ದಳು ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಬಾಲಕಿ ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳಾದ ಜ್ಞಾನೇಂದ್ರ, ಲೋಕೇಶ್ ಮತ್ತು ಲಾಲ್ ಎನ್ನುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕ್ಯಾಬ್‌ ಚಾಲಕ, ಸ್ನೇಹಿತರಿಂದ ಯುವತಿಯ ಮೇಲೆ ಗ್ಯಾಂಗ್‌ರೇಪ್

ನವದೆಹಲಿ: ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಆಕೆಯ ಬಳಿಯಿದ್ದ ಹಣ, ...

news

ಬಿಜೆಪಿ ನಾಯಕರಿಂದಲೇ ಯಡಿಯೂರಪ್ಪ, ಶೋಭಾ ಅಶ್ಲೀಲ ಫೋಟೋಗಳ ಬಿಡುಗಡೆ?: ದೂರು ದಾಖಲು

ಮಂಗಳೂರು: ಸಾಮಾಜಿಕ ಅಂತರ್ಜಾಲ ತಾಣವಾದ ವಾಟ್ಸಪ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ...

news

ಮುತಾಲಿಕ್‌ ಫೋಟೋದೊಂದಿಗೆ ಅಶ್ಲೀಲ ಫೋಟೋ: ಜೆಡಿಎಸ್ ಮುಖಂಡನ ಬಂಧನ

ಬೆಳಗಾವಿ: ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಫೋಟೋದೊಂದಿಗೆ ಅಶ್ಲೀಲ ಫೋಟೋ ಲಗತ್ತಿಸಿ ಪೋಸ್ಟ್ ...

news

ಸಿಎಂ ಸಿದ್ದರಾಮಯ್ಯಗೆ ತುರ್ತು ಕರೆ ಮಾಡಿದ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದೂ ನಾಲ್ವರು ...

Widgets Magazine
Widgets Magazine