Widgets Magazine
Widgets Magazine

ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ: ಯುದ್ಧ ನಡೆದರೆ 10 ದಿನಗಳಲ್ಲಿ ಶಸ್ತ್ರಗಳು ಖಾಲಿ..

ನವದೆಹಲಿ, ಶನಿವಾರ, 22 ಜುಲೈ 2017 (14:36 IST)

Widgets Magazine

ನವದೆಹಲಿ:ಒಂದೆಡೆ ಪಾಕಿಸ್ತಾನ ಇನ್ನೊಂದೆಡೆ ಚೀನಾ ದೇಶಗಳು ಗಡಿಯಲ್ಲಿ ಯುದ್ಧೋತ್ಸಾಹದಲ್ಲಿದ್ದು, ಒಂದೊಮ್ಮೆ ಈ ಸಂದರ್ಭದಲ್ಲಿ ಯುದ್ಧವೇನಾದರೂ ನಡೆದರೆ ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ ಇದ್ದು, ಶೇ.40ರಷ್ಟು ಶಸ್ತ್ರಾಸ್ತ್ರಗಳ ಕೊರತೆ ಇದೆ ಎಂದು ಮಹಾಲೇಖಪಾಲ(ಸಿಎಜಿ) ವರದಿ ನೀಡಿದೆ.
 
ಅಂದರೆ ಅಕಸ್ಮಾತ್ ನಡೆದರೆ ಕೇವಲ ಹತ್ತೇ ದಿನದಲ್ಲಿ ಭಾರತದ ಬಳಿ ಇರುವ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತವೆ. ಭಾರತೀಯ ಸೇನೆಯ ಬಳಿ ಇರುವ ಶಸ್ತ್ರಾಸ್ತ್ರಗಳ ಬಗ್ಗೆ ಲೆಕ್ಕ ಪರಿಶೋಧನಾ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ಯುದ್ಧ ನಡೆದರೆ ಭಾರತೀಯ ಸೇನೆಗೆ 152 ವಿಧದ ಶಸ್ತ್ರಾಸ್ತ್ರಗಳು ತುರ್ತಾಗಿ  ಬೇಕಾಗುತ್ತದೆ. ಆದರೆ ಈ ಪೈಕಿ 61 ವಿಧದ ಶಸ್ತ್ರಾಸ್ತ್ರಗಳು ಸತತ 10 ದಿನ ಯುದ್ಧ ನಡೆದರೆ ಖಾಲಿಯಾಗುತ್ತವೆ. 31 ವಿಧದ ಶಸ್ತ್ರಾಸ್ತ್ರಗಳ ದಾಸ್ತಾನು ತೃಪ್ತಿದಾಯಕವಾಗಿದೆಯಾದರೂ ಉಳಿದ 60 ವಿಧದ ಶಸ್ತ್ರಾಸ್ತ್ರಗಳ ಪ್ರಮಾಣ ಕಡಿಮೆ  ಪ್ರಮಾಣದಲ್ಲಿವೆ ಎಂದು ತಿಳಿಸಿದೆ.
 
ಯಾವುದೇ ಸಂದರ್ಭದಲ್ಲಿ ಯುದ್ಧ ಘೋಷಣೆಯಾದರೆ ಕನಿಷ್ಠ 20 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ಇರಬೇಕು ಎಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆಯಾಗಿಲ್ಲ.ಅಲ್ಲದೇ ಸೈನಿಕರ ತರಬೇತಿಗೆಂದು ಕನಿಷ್ಠ 24 ವಿಧದ ಯುದ್ಧ ಸಾಮಗ್ರಿಗಳು ಬೇಕು . ಆದರೆ ಈ ಶಸ್ತ್ರಾಸ್ತ್ರಗಳೂ ಸಹ ಕೇವಲ 5 ದಿನಗಳಿಗೆ ಸಾಕಾಗುವಷ್ಟಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜ್ಯವೇ ಬೆಚ್ಚಿಬೀಳಿಸುವ ವಿಕೃತ ಕಾಮಿ ಸೆರೆ

ಹಾವೇರಿ: ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ನೀಲ್ ಆರ್ಮ್ ಸ್ಟ್ರಾಂಗ್ ತಂದಿದ್ದ ಚಂದ್ರನ ಧೂಳು ಹರಾಜು

ಮೊಟ್ಟ ಮೊದಲಬಾರಿಗೆ ಚಂದ್ರಯಾನ ಕೈಗೊಂಡಿದ್ದ ಗಗನಯಾತ್ರಿ ನೀಲ್‌ ಆರ್ಮ್ ಸ್ಟ್ರಾಂಗ್‌ ಚಂದ್ರನಿಂದ ಭೂಮಿಗೆ ...

news

ಶೋಬಾ ಕರಂದ್ಲಾಜೆ ಜವಾಬ್ದಾರಿಯಿಂದ ವರ್ತಿಸಲಿ: ಸಚಿವ ಖಾದರ್ ಕಿಡಿ

ಬೆಳಗಾವಿ: ಬಿಜೆಪಿ ನಾಯಕಿ ಮಾಜಿ ಸಚಿವ ಯಾವುದೇ ವಿಷಯದ ಬಗ್ಗೆ ಜವಾಬ್ದಾರಿಯಂದ ವರ್ತಿಸುವುದು ಸೂಕ್ತ ಎಂದು ...

news

ಸಂವಿಧಾನ ಸರಿಯಾಗಿ ಓದಲ್ಲ, ಕಾನೂನು ತಿಳಿದುಕೊಳ್ಳಲ್ಲ: ಬಿಜೆಪಿಗೆ ಸಿಎಂ ಟಾಂಗ್

ಬೆಂಗಳೂರು: ನಾಡ ಧ್ವಜ ಮಾಡಿದ್ರೆ ಅವಮಾನವಾಗುತ್ತಾ? ಐಕಾಂಟ್ ಅಂಡರ್‌ಸ್ಟ್ಯಾಂಡ್ ಎಂದು ಸಿಎಂ ಸಿದ್ದರಾಮಯ್ಯ ...

Widgets Magazine Widgets Magazine Widgets Magazine