ಸೇನಾಧಿಕಾರಿಯ ಹರೆಯದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ಆರ್ಮಿ ಕರ್ನಲ್ ಬಂಧನ

ಶಿಮ್ಲಾ, ಗುರುವಾರ, 23 ನವೆಂಬರ್ 2017 (15:43 IST)

ಆರ್ಮಿ ಟ್ರೈನಿಂಗ್ ಕಮಾಂಡ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ 56 ವರ್ಷ ವಯಸ್ಸಿನ ಆರ್ಮಿ ಕರ್ನಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. 
21 ವರ್ಷ ವಯಸ್ಸಿನ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಾಥಮಿಕ ತನಿಖೆಯ ನಂತರ ಕರ್ನಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
 
ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಪೊಲೀಸ್ ಸೂಪರಿಂಟೆಂಡೆಂಟ್ ಸೌಮ್ಯ ಸಾಂಬಶಿವನ್ ಮಾತನಾಡಿ, ಆರೋಪಿ ಕರ್ನಲ್ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ. ಆದರೆ, ಬಂಧಿತ ಅಧಿಕಾರಿಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 
 
ಪೊಲೀಸ್ ಅಧಿಕಾರಿಗಳು ಆರೋಪಿ ಕರ್ನಲ್‌ನ ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಎಸ್‌ಪಿ ಸೌಮ್ಯ ಸಾಂಬಶಿವನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂತಾ ಕಾಲ ಬಂತಪ್ಪಾ: 4 ವರ್ಷದ ಬಾಲಕನ ವಿರುದ್ಧ ರೇಪ್ ಕೇಸ್ ದಾಖಲು

ನವದೆಹಲಿ: ದೆಹಲಿಯ ದ್ವಾರಕಾದಲ್ಲಿರುವ ಮ್ಯಾಕ್ಸ್‌ಫೋರ್ಟ್ ಶಾಲೆಯ ಆವರಣದಲ್ಲಿ ಸಹಪಾಠಿಗೆ ಲೈಂಗಿಕ ಕಿರುಕುಳ ...

ಪಾಪ ಮಾಡಿದ್ರೆ ಕ್ಯಾನ್ಸರ್ ಬರುತ್ತೆ!

ಗುವಾಹಟಿ: 'ಪಾಪ ಮಾಡಿದ್ದರೆ ಕ್ಯಾನ್ಸರ್ ಬರುತ್ತದೆ' ಇದನ್ನು ಯಾರೋ ಜ್ಯೋತಿಷಿ ಹೇಳುತ್ತಿದ್ದಾರೆ ...

news

ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರೆವಸಗಿದ 85 ವರ್ಷದ ವೃದ್ಧ ಅರೆಸ್ಟ್

ಹೈದ್ರಾಬಾದ್: ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರೆವಸಗಿದ ಆರೋಪಿ 85 ವರ್ಷದ ವೃದ್ಧನನ್ನು ಪೊಲೀಸರು ...

ಶವವೂ ಅದಲಿ ಬದಲಿ ಆಗ್ಹೋಯ್ತು!

ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಬೇಜಾವಾಬ್ದಾರಿಯಿಂದ ಶವವನ್ನು ಅದಲು ಬದಲಾಗಿ ...

Widgets Magazine