ನಡುರಸ್ತೆಯಲ್ಲಿ ಯೋಧನ ಮೇಲೆ ಹಲ್ಲೆ ನಡೆಸಿದ ಮಹಿಳೆ..!

ನವದೆಹಲಿ, ಶನಿವಾರ, 16 ಸೆಪ್ಟಂಬರ್ 2017 (11:17 IST)

ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಸೇನಾ ಯೋಧನಿಗೆ ಪದೇ ಪದೇ ಕಪಾಳ ಮೋಕ್ಷ ಮಾಡಿದ್ದ ಮಹಿಳೆಯನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.


ಬಂಧಿತ ಮಹಿಳೆಯನ್ನ 44 ವರ್ಷದ ಸ್ಮೃತಿ ಕುರ್ಲಾ ಎಂದು ಗುರ್ತಿಸಲಾಗಿದ್ದು, ಬಂಧನದ ದಿನವೇ ಜಾಮೀನು ಸಿಕ್ಕಿದೆ. ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ವಿಡಿಯೋದಲ್ಲಿ ಮಹಿಳೆ ಹದ್ದು ಮೀರಿ ವರ್ತಿಸಿರುವುದು ಸ್ಪಷ್ಟವಾಗಿದೆ.
 


ಬಿಳಿ ಟಾಟಾ ಇಂಡಿಕಾದಲ್ಲಿ ಬಂದ ಮಹಿಳೆ ಸೇನಾ ವಾಹನದ ಮುಂದೆ ನಿಲ್ಲಿಸಿ ಅವರ ಜೊತೆ ಮಾತಿನ ಸಮರ ಆರಂಭಿಸುತ್ತಾಳೆ. ಬಳಿಕ ಯೋಧನೊಬ್ಬನ ಮೇಲೆ ಹಲ್ಲೆ ನಡೆಸುತ್ತಾಳೆ. ಬಳಿಕ ಮಧ್ಯ ಪ್ರವೇಶಿಸಿದ ಯೋಧನ ಸಹವರ್ತಿಗಳು ರಕ್ಷಿಸಿದ್ದಾರೆ. ಆದರೆ, ಗಲಾಟೆಗೆ ಮಹಿಳೆಯ ವಾಹನ ಮತ್ತು ಸೇನಾ ವಾಹನದ ನಡುವೆ ಅಪಘಾತ ಸಂಭವಿಸಿರುವುದು ಕಾರಣವಿದ್ದಿರಬಹುದಾ? ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ಸಿಕ್ಕಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಯೋಧನ ಮೇಲೆ ಹಲ್ಲೆ ನವದೆಹಲಿ ವಸಂತ್ ಕುಂಜ್ Soldier Attacks New Delhi Vasanth Kunj

ಸುದ್ದಿಗಳು

news

ಬಿಎಸ್`ವೈಗೆ ಮತ್ತೊಂದು ಸಂಕಷ್ಟ..? ವಿಧಾನಸೌಧದ ಬಳಿ ಕಾರಿನಲ್ಲಿ ಸಿಕ್ಕ ಹಣದ ಬಗ್ಗೆ ಎಸಿಬಿ ತನಿಖೆ

ವಿಧಾನಸೌಧದಲ್ಲಿ ಕಾರಿನಲ್ಲಿ ಕೋಟಿ ಕೋಟಿ ಹಣ ಸಿಕ್ಕ ಪ್ರಕರಣ ಇದೀಗ ಮರುಜೀವ ಪಡೆದುಕೊಂಡಿದೆ. ಸಿಬಿಐ ...

news

ಡೇರಾ ಬಾಬಾನ ಮತ್ತೆರಡು ಪ್ರಕರಣಗಳು ಇಂದು ವಿಚಾರಣೆಗೆ

ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ ಸಂಘಟನೆ ಮುಖ್ಯಸ್ಥ ...

news

ಪೊಲೀಸ್ ವರಿಷ್ಠರೊಂದಿಗೆ ಸಿಎಂ ಸಿದ್ದರಾಮಯ್ಯ ರಾತ್ರಿ ಹೊತ್ತು ದಿಡೀರ್ ಸಭೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ತಮ್ಮ ನಿವಾಸದಲ್ಲಿ ರಾತ್ರಿ ...

news

ಮುಂದಿನ ತಿಂಗಳೇ ರಾಹುಲ್ ಗಾಂಧಿಗೆ ಪಟ್ಟ?

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರುವುದು ಯಾವಾಗ ಎಂಬ ...

Widgets Magazine
Widgets Magazine