Widgets Magazine

ಸಂಬಳ ಕೊಡದಿದ್ದಕ್ಕೆ ಮಾಲೀಕನ ಮಗಳನ್ನೇ ಹಾರಿಸಿಕೊಂಡು ಹೋದ ಯುವಕ ಅರೆಸ್ಟ್

ರಾಂಚಿ| pavithra| Last Modified ಶನಿವಾರ, 10 ನವೆಂಬರ್ 2018 (07:08 IST)
ರಾಂಚಿ : ಸರಿಯಾಗಿ ಕೊಡಲಿಲ್ಲವೆಂದು ಕಾಂಟ್ರಾಕ್ಟರ್ ಮಗಳನನ್ನೇ ಹಾರಿಸಿಕೊಂಡ ಹೋದ ಘಟನೆ ರಾಂಚಿಯಲ್ಲಿ ನಡೆದಿದೆ.


ಬೆಂಗಳೂರಿನ ಕನ್ನಹಳ್ಳಿಯಲ್ಲಿ ಮಾರ್ಬಲ್​ ಕಾಂಟ್ರಾಕ್ಟರ್​ ನೊಬ್ಬ ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಮೂಲದ ಚಂದ್ರಪಾಲ್ ಸಿಂಗ್ ಎಂಬಾತನಿಗೆ ಸರಿಯಾಗಿ ಸಂಬಳ ನೀಡದೆ ಸತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತ ಚಂದ್ರಪಾಲ್, ಕಾಂಟ್ರಾಕ್ಟರ್​ ಪುತ್ರಿಯ ಜೊತೆ ಪ್ರೀತಿಯ ನಾಟಕವಾಡಿ ನಂತರ ಆಕೆಯನ್ನು ಓಡಿಸಿಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ವಿಡಿಯೋವೊಂದನ್ನು ಕಾಂಟ್ರಾಕ್ಟರ್​ಗೆ ಕಳುಹಿಸಿ ಹಣ ಕೊಡಗಿದಿದ್ದರೆ ಇದನ್ನು ಸಾಮಾಜಿಕ ಜಾಲತಾಣದಲ್ಲೂ ಶೇರ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ.


ಈ ಸಂಬಂಧ ಕಾಂಟ್ರಾಕ್ಟರ್ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಕರ್ನಾಟಕ ಪೊಲೀಸರು, ಚಂದ್ರಪಾಲ್​ನನ್ನು ಜಾರ್ಖಂಡ್​ನ ರಾಂಚಿಯಲ್ಲಿ ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :