ರಾಹುಲ್ ಗಾಂಧಿಗೆ ಅದ್ಯಾವಾಗ ಬುದ್ದಿ ಬರುತ್ತೋ..!: ಸಚಿವ ಅರುಣ್ ಜೇಟ್ಲಿ

ನವದೆಹಲಿ, ಗುರುವಾರ, 7 ಜೂನ್ 2018 (09:54 IST)

Widgets Magazine

ನವದೆಹಲಿ: ಪ್ರತೀ ಬಾರಿ ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ಮತ್ತು ಒಳಗೆ ಮಾತನಾಡುವುದನ್ನು ಕೇಳಿದಾಗಲೆಲ್ಲಾ ನನಗನಿಸುವುದು ಈ ಮನುಷ್ಯನಿಗೆ ಅದೇನು ತಿಳುವಳಿಕೆ ಇದೆ? ಅದ್ಯಾವಾಗ ಬುದ್ಧಿ ಬರುತ್ತದೋ ಎಂದು.. ಹೀಗಂತ ವಿದೇಶಾಂಗಗ ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.
 
ಮಧ್ಯಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಉದ್ದಿಮೆದಾರರ ಸಾಲಮನ್ನಾ ಮಾಡುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಜೇಟ್ಲಿ ತಿರುಗೇಟು ಕೊಟ್ಟಿದ್ದಾರೆ.
 
‘ರಾಹುಲ್ ಗಾಂಧಿ ಹೇಳುತ್ತಿರುವುದೆಲ್ಲವೂ ಸುಳ್ಳು. ಇದು ನಮ್ಮ ಕಾಲದಲ್ಲಲ್ಲ. ಯುಪಿಎ ಎರಡನೇ ಅವಧಿಯಲ್ಲಿ ಇಂತಹ ಎಡವಟ್ಟು ನಡೆಯುತ್ತಿತ್ತು. ರೈತರಿಗೆ ವಂಚಿಸಿ ಉದ್ಯಮಿಗಳ ಬೇಕಾಬಿಟ್ಟೆ ಹಣ ಒದಗಿಸಲಾಗುತ್ತಿತ್ತು. ನಾವು ಅದನ್ನೆಲ್ಲಾ ಹಂತ ಹಂತವಾಗಿ ನಿಲ್ಲಿಸಿದ್ದೇವೆ. ಇದೀಗ ಅದರ ವಸೂಲಾತಿ ಕೆಲಸ ಮಾಡುತ್ತಿದ್ದೇವೆ’ ಎಂದು ಜೇಟ್ಲಿ ಹೇಳಿದ್ದಾರೆ.
 
ಇನ್ನು ಇದೇ ರ್ಯಾಲಿಯಲ್ಲಿ ಚೀನಾದಲ್ಲಿ ತಯಾರಾಗುತ್ತಿರುವ ಮೊಬೈಲ್ ಗಳನ್ನು ನಾವು ಅಧಿಕಾರಕ್ಕೆ ಬಂದರೆ ಭಾರತದಲ್ಲೇ ತಯಾರಿಸುತ್ತೇವೆ ಎಂದಿದ್ದ ರಾಹುಲ್ ಮಾತನ್ನು ಲೇವಡಿ ಮಾಡಿರುವ ಜೇಟ್ಲಿ ಇದು ಅಜ್ಞಾನದ ಪರಮಾವಧಿ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪೇಜಾವರ ಶ್ರೀಗಳಿಗೆ ಶೋಭಾ, ಈಶ್ವರಪ್ಪ ಮನವರಿಕೆ ಮಾಡಬಹುದಿತ್ತು: ಬಿಜೆಪಿ ನಾಯಕ ಸೊಗಡು ಶಿವಣ್ಣ

ಬೆಂಗಳೂರು: ಉಡುಪಿ ಪೇಜಾವರ ಶ್ರೀಗಳು ಪ್ರಧಾನಿ ಮೋದಿ ವಿರುದ್ಧ ಮೊನ್ನೆ ನೀಡಿದ್ದ ಹೇಳಿಕೆ ಬಿಜೆಪಿಯಲ್ಲಿ ...

news

ಸ್ಪೀಕರ್ ರಮೇಶ್ ಕುಮಾರ್ ಗೇ ಪ್ರಮಾಣ ವಚನಕ್ಕೆ ಬಾಗಿಲು ಬಂದ್!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿನ್ನೆ ರಾಜಭವನದಲ್ಲಿ ...

news

ಭಾರತದಲ್ಲಿ ವಿವಾಹವಾಗುವ ಎನ್ಆರ್ ಐಗಳಿಗೆ ಶಾಕ್ ನೀಡಿದ ಕೇಂದ್ರ

ನವದೆಹಲಿ: ಭಾರತದಲ್ಲಿ ವಿವಾಹವಾಗುವ ಭಾರತೀಯ ಮೂಲದ ವಿದೇಶೀ ವಾಸಿಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.

news

ವಿವಾದದ ನಡುವೆಯೇ ಆರ್ ಎಸ್ಎಸ್ ಸಮಾರಂಭಕ್ಕೆ ಆಗಮಿಸಿದ ಪ್ರಣಬ್ ಮುಖರ್ಜಿ

ನವದೆಹಲಿ: ಕಾಂಗ್ರೆಸ್ ನಾಯಕರಿಂದ ತೀವ್ರ ಆಕ್ಷೇಪವಿದ್ದರೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ...

Widgets Magazine