ಮಗುವಿಗೆ ವಿಷಪೂರಿತ ಚಿಪ್ಸ್ ನೀಡಿ ಕೊಂದ ಆಶಾ ಕಾರ್ಯಕರ್ತೆ

ಆಂಧ್ರ ಪ್ರದೇಶ, ಸೋಮವಾರ, 30 ಅಕ್ಟೋಬರ್ 2017 (15:07 IST)

ಆಂಧ್ರ ಪ್ರದೇಶ: ಆಶಾ ಕಾರ್ಯಕರ್ತೆ ನೀಡಿದ ಚಿಪ್ಸ್ ಸೇವಿಸಿ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಪ್ರಕಾಶಂ ಜಿಲ್ಲೆಯ ಚೀಮಕುರ್ತಿಯಲ್ಲಿ ನಡೆದಿದೆ.


ಧನಂಜಯ್(4) ಮೃತಪಟ್ಟ ಬಾಲಕ. ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಟವಾಡಲು ಮಗುವನ್ನು ಆಶಾ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಆದರೆ ಆಶಾ ಕಾರ್ಯಕರ್ತೆ ಜ್ಯೋತಿ, ಸೇರಿಸಿ ಚಿಪ್ಸ್ ನೀಡಿದ್ದಾಳೆ. ಧನಂಜಯ್ ಕೆಟ್ಟ ವಾಸನೆ ಬರುತ್ತಿದೆ ಬೇಡ ಎಂದರೂ, ಜ್ಯೋತಿ ಒತ್ತಾಯಪೂರ್ವಕವಾಗಿ ಮಗುವಿಗೆ ಚಿಪ್ಸ್ ತಿನ್ನಿಸಿದ್ದಾಳೆ ಎಂದು ಅಲ್ಲಿದ್ದ ಮಕ್ಕಳು ಹೇಳಿದ್ದಾರೆ.

ನಮಗೂ ಚಿಪ್ಸ್ ಬೇಕು ಎಂದು ಕೇಳಿದ್ದೆವು. ಆದರೆ ಜ್ಯೋತಿ ಮೇಡಂ ನಮಗೆ ಚಿಪ್ಸ್ ನೀಡಿಲ್ಲ. ಇದನ್ನು ನೀವು ತಿನ್ನುವಂತಿಲ್ಲ ಎಂದು ಮಕ್ಕಳು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಧನಂಜಯ್ ಸೋದರ ತರುಣ್ ಕೂಡಾ ಕಳೆದ ವರ್ಷ ಇದೇ ರೀತಿ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ತರುಣ್ ಸಾವಿನಲ್ಲಿ ಜ್ಯೋತಿ ಕೈವಾಡವಿತ್ತಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಕೈಮುಗಿದು ಹೊರ ನಡೆದ ಅನುಪಮಾ ಶೆಣೈ

ಬಳ್ಳಾರಿ: ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಟ್ಟಾದ ಮಾಜಿ ಡಿವೈಎಸ್ಪಿ ಅನುಪಮಾ ಶೇಣೈ ಕೈ ಮುಗಿದು ಅರ್ಧಕ್ಕೆ ...

news

ಬಾಯ್‌ಫ್ರೆಂಡ್‌ನನ್ನು ಪತ್ತೆ ಹಚ್ಚಲು ಗ್ಯಾಂಗ್‌ರೇಪ್ ಕೇಸ್ ದಾಖಲಿಸಿದ ಯುವತಿ

ಪುಣೆ: ಫೋನ್ ಕರೆಗಳನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದ ಬಾಯ್‌ಫ್ರೆಂಡ್‌ ವಂಚನೆಯಿಂದ ಆಕ್ರೋಶಗೊಂಡ 24 ...

news

ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹನಿ ನೀರು ಸೇವಿಸದೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥ ದೇವರ ...

news

ಮಲೆಯಾಳಂ ನಟಿಗೆ ವಿವಾಹವಾಗುವಂತೆ ಮ್ಯಾಸೇಜ್ ಕಳುಹಿಸುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮಲೆಯಾಳಂ ಚಿತ್ರನಟಿಗೆ ವಿವಾಹವಾಗುವುದಾಗಿ ನಿರಂತರ ಮೊಬೈಲ್ ಸಂದೇಶಗಳನ್ನು ರವಾನಿಸಿ ಕಿರುಕುಳ ...

Widgets Magazine
Widgets Magazine