ಕ್ಷುಲ್ಲಕ ಕಾರಣಕ್ಕೆ ಸೇನಾಧಿಕಾರಿಯನ್ನೇ ಕೊಂದ ಯೋಧ

ಶ್ರೀನಗರ, ಮಂಗಳವಾರ, 18 ಜುಲೈ 2017 (12:52 IST)

Widgets Magazine

ಶ್ರೀನಗರ: ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ ಆರಂಭವಾದ ಗಲಾಟೆಯಿಂದಾಗಿ ಸಿಟ್ಟಿಗೆದ್ದ ಭಾರತೀಯ ಸೇನೆ ಯೋಧನೊಬ್ಬ ತನ್ನ ಸೇನಾಧಿಕಾರಿಯನ್ನೇ ಗುಂಡಿಕ್ಕಿ ಹೆತ್ಯೆ ಮಾಡಿರುವ ಘಟನೆ ನಡೆದಿದೆ.
 
ಜಮ್ಮು ಮತ್ತು ಕಾಶ್ಮೀರದ ಬುಚಾರ್ ಪೋಸ್ಟ್ ನಲ್ಲಿರುವ ಸೇನಾ ಕ್ಯಾಂಪ್ ನಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. 71  ರಾಷ್ಟ್ರೀಯ ರೈಫಲ್ಸ್ ತಂಡದ ಸೇನಾಧಿಕಾರಿಯನ್ನು ಸೈನಿಕ ತನ್ನ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸೇನಾ ಮೂಲಗಳ ಪ್ರಕಾರ ಅಧಿಕಾರಿಯ ತಪಾಸಣೆ ನಡೆಸಿದಾಗ ಕರ್ತವ್ಯದಲ್ಲಿದ್ದ  ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮೇಜರ್ ಶಿಖರ್​ ಅವರು ಯೋಧನಿಂದ ಮೊಬೈಲ್ ಕಿತ್ತುಕೊಂಡು, ಕರ್ತವ್ಯದಲ್ಲಿರುವಾಗ ಫೋನ್ ಬಳಸಬೇಡ ಎಂದು ಖಡಕ್ ಆಗಿ ಹೇಳಿದ್ದಾರೆ.
 
ಇದರಿಂದ ಕ್ರೋಧಗೊಂಡ ಯೋಧ ತನ್ನ ಬಳಿಯಿದ್ದ ಎಕೆ 47 ರೈಫಲ್​ನಿಂದ ಎರಡು ಸುತ್ತು ತನ್ನ ಹಿರಿಯ ಅಧಿಕಾರಿ ಮೇಜರ್ ಶಿಖರ್​ ಅವರತ್ತ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡ ಮೇಜರ್  ಶಿಖರ್​ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಅಸುನೀಗಿದ್ದರು. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜೀನಾಮೆ ಕೊಡುತ್ತೇನೆಂದು ರಾಜ್ಯಸಭೆಯಿಂದ ಹೊರನಡೆದ ಮಾಯಾವತಿ

ಗೋರಕ್ಷಣೆ ನೆಪದಲ್ಲಿ ದಲಿತರ ಮೇಲಿನ ದೌರ್ಜನ್ಯ ಕುರಿತಂತೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ...

news

ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ: ಫಲಿಸುತ್ತಾ ರಾಜ್ಯ ಸರ್ಕಾರದ ಯತ್ನ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಧ್ವಜಕ್ಕೆ ಕಾನೂನು ಮಾನ್ಯತೆ ...

news

ಉಷಾ ಪತಿಯಾಗಿರುತ್ತೇನೆಂದಿದ್ದ ವೆಂಕಯ್ಯ ನಾಯ್ಡು ಇಂದು ಉಪರಾಷ್ಟ್ರಪತಿ ಹುದ್ದೆಗಾಗಿ ನಾಮಪತ್ರ ಸಲ್ಲಿಕೆ!

ನವದೆಹಲಿ: ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಲಿದ್ದಾರೆ ಎಂಬ ಸುದ್ದಿ ಬಂದಾಗಲೆಲ್ಲಾ ನಾನು ...

news

ಡಿಐಜಿ ರೂಪಾ ವರ್ಗಾವಣೆ: ಸರ್ಕಾರದ ನಿರ್ಧಾರ ಖಂಡಿಸಿ ಜೈಲಿನಲ್ಲಿ ಖೈದಿಗಳ ಪ್ರತಿಭಟನೆ

ಡಿಐಜಿ ರೂಪಾ ಅವರ ವರ್ಗಾವಣೆಯನ್ನು ಖಂಡಿಸಿ ಹಾಗೂ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದುಕೊಳ್ಳಬೇಕೆಂದು ...

Widgets Magazine