ಇಂದು ಅಂತಿಮ ಹಂತದ ಮತದಾನ

ಲಖನೌ, ಬುಧವಾರ, 8 ಮಾರ್ಚ್ 2017 (08:59 IST)

Widgets Magazine

ಉತ್ತರ ಪ್ರದೇಶ ಮತ್ತು ಮಣಿಪುರ ವಿಧಾನಸಭೆಗೆ ಇಂದು ನಡೆಯುತ್ತಿದೆ. ಕೆಲವೆಡೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದ್ದು, ಇನ್ನು ಕೆಲವೆಡೆ 8 ಗಂಟೆಯಿಂದ ಜನರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಉತ್ತರಪ್ರದೇಶದಲ್ಲಿ ಈಗಾಗಲೇ 6 ಹಂತದ ಮತದಾನ ನಡೆದಿದ್ದು, ಇಂದು 7ನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದೆ.ಮಣಿಪುರದಲ್ಲಿ ಇಂದು ಎರಡನೆ ಮತ್ತು ಕೊನೆಯ ಹಂತದ ಚುನಾವಣೆ ಪ್ರಗತಿಯಲ್ಲಿದೆ.
 
ಈಶಾನ್ಯ ರಾಜ್ಯದಲ್ಲಿ 22 ಮತ್ತು ಉತ್ತರ ಪ್ರದೇಶದಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
 
404ಶಾಸಕ ಬಲದ ಉತ್ತರ ಪ್ರದೇಶ ದೇಶದಲ್ಲಿಯೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.ಇಂದು ಪ್ರಧಾನಿ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ, ಸೋನ್‌ಭದ್ರ, ಮೀರ್ಜ್‌‌ಪುರ್‌, ಚಂದೌಲಿ ಸೇರಿ 7 ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 51 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 535 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 
 
ಮಣಿಪುರದ 66 ವಿಧಾನಸಭೆ ಕ್ಷೇತ್ರಗಳಲ್ಲಿ, ಇಂದು 22 ಕ್ಷೇತ್ರಗಳಿಗೆ ಮತದಾನವಾಗುತ್ತಿದೆ.  ಒಟ್ಟು 98 ಅಭ್ಯರ್ಥಿಗಳು ಕಣದಲ್ಲಿದ್ದು. 19.46 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 1,151 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. 
 
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸಹಿತ ಅನೇಕ ದಿಗ್ಗಜ ನಾಯಕರು ಉತ್ತರ ಪ್ರದೇಶದಲ್ಲಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದರು. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನ್ಯೂಜಿಲ್ಯಾಂಡಿ‌ನಲ್ಲೂ ಭಾರತೀಯನ ಮೇಲೆ ಹಲ್ಲೆ

ಅಮೇರಿಕದಲ್ಲಿ ಭಾರತೀಯರ ಮೇಲೆ ಹಲ್ಲೆ, ಹತ್ಯೆಗಳು ಮುಂದುವರೆದಿರುವ ಬೆನ್ನಲ್ಲೇ ನ್ಯೂಜಿಲ್ಯಾಂಡ್‌ನಲ್ಲೂ ...

news

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮುಳುಗಿದ ಕೆಎಸ್ಆರ್ಟಿಸಿ ಬಸ್, ಪ್ರಯಾಣಿಕರ ರಕ್ಷಣೆ

ಬೆಂಗಳೂರಿನ ಸತತ 2ನೇ ದಿನವೂ ಮಳೆಯ ಆರ್ಭಟ ಮುಂದುವರೆದಿದೆ. ನಗರದ ಹಲವೆಡೆ ರಾತ್ರಿ 8 ಗಂಟೆ ಸುಮಾರಿಗೆ ...

news

ಪೊಲೀಸರ ಮೇಲೆ ದಾಳಿ: ರೌಡಿಶೀಟರ್ ಶಿವರಾಮ್‌ರೆಡ್ಡಿಗೆ ಗುಂಡೇಟು

ಬೆಂಗಳೂರು: ಅತ್ಯಾಚಾರಕ್ಕೆ ಯತ್ನ ಆರೋಪ ಹೊತ್ತಿರುವ ರೌಡಿಶೀಟರ್ ಶಿವರಾಮರೆಡ್ಡಿ ಮೇಲೆ ಪೊಲೀಸರು ಎರಡು ...

news

ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ?: ತಿಮ್ಮಪ್ಪ

ಬೆಂಗಳೂರು: ಕುಮಾರ್ ಬಂಗಾರಪ್ಪ ವಿರುದ್ಧ ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ ಎಂದು ...

Widgets Magazine