ಬಿಜೆಪಿ, ಆರೆಸ್ಸೆಸ್ ಪ್ರೇರಣಿಯಿಂದ ನಮ್ಮ ಮೇಲೆ ದಾಳಿ: ರಾಹುಲ್ ಗಾಂಧಿ

ನವದೆಹಲಿ, ಶನಿವಾರ, 5 ಆಗಸ್ಟ್ 2017 (15:45 IST)

ಗುಜರಾತ್‌ನಲ್ಲಿ ಬೆಂಗಾವಲು ಕಾರಿನ ಮೇಲೆ ನಡೆದ ದಾಳಿ ಆರೆಸ್ಸೆಸ್, ಬಿಜೆಪಿ ಪ್ರೇರಿತವಾಗಿದೆ. ಆದರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
 
ಪ್ರವಾಹ ಪೀಡಿತ ಗುಜರಾತ್‌ನ ಬನಸ್ಕಂದ ಜಿಲ್ಲೆಗೆ ರಾಹುಲ್ ಗಾಂಧಿ ಭೇಟಿ ನೀಡಿ ವಾಪಸ್ ಮರಳುತ್ತಿರುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅವರ ಕಾರಿನ ಮೇಲೆ ನಡೆಸಿದ್ದಲ್ಲದೇ ಕಪ್ಪು ಧ್ವಜಗಳನ್ನು ತೋರಿಸಿದ್ದರು. 
 
ನಮ್ಮ ಕಾರುಗಳ ಮೇಲೆ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟ ಪ್ರಧಾನಿ ಮೋದಿಯ ರಾಜಕೀಯ ತೋರಿಸುತ್ತದೆ. ಮೋದಿಯ ಬೆಂಬಲಿಗರೇ ಇಂತಹ ಕೃತ್ಯದಲ್ಲಿ ತೊಡಗಿದ್ದರಿಂದ ಅವರು ಘಟನೆಯನ್ನು ಖಂಡಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.  
 
ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಘಟನೆಯನ್ನು ತೀವ್ರವಾಗಿ ಖಂಡಿಸಿ, ಇದೊಂದು ರಾಹುಲ್ ಗಾಂಧಿ ಹತ್ಯೆಗೆ ನಡೆಸಿದ ಪೂರ್ವ ನಿಯೋಜಿತ ಸಂಚು ಎಂದು ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಬಿಜೆಪಿ ಆರೆಸ್ಸೆಸ್ ರಾಹುಲ್ ಗಾಂಧಿ ಗುಜರಾತ್ ಕಲ್ಲು ತೂರಾಟ Congress Bjp Rss Gujarat Attack Rahul Gandhi

ಸುದ್ದಿಗಳು

news

ವಿದ್ಯಾರ್ಥಿನಿಯೊಂದಿಗಿನ ಅಶ್ಲೀಲ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ ಶಿಕ್ಷಕ

ಕಾಟ್ಟಿಚೆರ್ರಾ(ಆಸ್ಸಾಂ): ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಇತಿಹಾಸ ಹೊಂದಿರುವ ಶಿಕ್ಷಕನೊಬ್ಬ, ...

news

ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು: ಬಾಬಾ ರಾಮದೇವ್

ಹೌರಾ: ಸಿಕ್ಕಿಂನ ಡೊಕ್ಲಾಮ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ರಿಕ್ತ ನಿಲುವಿನ ...

news

ಡಿ.ಕೆ. ಶಿವಕುಮಾರ್ ಜೊತೆ ಒಗ್ಗಟ್ಟಿನ ಪ್ರದರ್ಶನ ಮಾಡಿದ ಗುಜರಾತ್ ಶಾಸಕರು

ರಾಜ್ಯಪಾಲರ ಭೇಟಿ ಬಳಿಕ ಗುಜರಾತ್`ನ 40 ಶಾಸಕರು ವಿಧಾನಸೌಧಕ್ಕೆ ತೆರಳಿದ್ದಾರೆ. ವಿಧಾನಸೌಧದ ಬಳಿ ಇರುವ ...

news

ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯ ಖಚಿತ: ಡಿ.ಕೆ.ಶಿವಕುಮಾರ್

ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಅಹ್ಮದ್ ಪಟೇಲ್ ಜಯ ಖಚಿತ ಎಂದು ಇಂಧನ ...

Widgets Magazine