ಫ್ರೀಡಂ ಫೈಟರ್ ಬಾಲಗಂಗಾಧರ ತಿಲಕ್ ಮರಿಮೊಮ್ಮಗನ ವಿರುದ್ಧ ರೇಪ್ ಕೇಸ್ ದಾಖಲು

ಪುಣೆ, ಮಂಗಳವಾರ, 18 ಜುಲೈ 2017 (15:35 IST)

Widgets Magazine

ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಗಧರ ತಿಲಕ್ ಮರಿ ಮೊಮ್ಮಗ ರೋಹಿತ್ ತಿಲಕ್‌ನನ್ನು ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.  
ನಗರದ ವಿಶ್ರಾಮ್‌ಬೌಗ್ ಪೊಲೀಸ್ ಠಾಣೆಯಲ್ಲಿ ರೋಹಿತ್ ತಿಲಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
 
ಅತ್ಯಾಚಾರ ದೂರು ನೀಡಿದ 40 ವರ್ಷ ವಯಸ್ಸಿನ ಮಹಿಳೆಯ ಪ್ರಕಾರ, ಕಳೆದ ಕೆಲ ವರ್ಷಗಳಿಂದ ಪರಿಚಿತನಾದ ಆರೋಪಿ ರೋಹಿತ್ ತಮ್ಮ ಮೇಲೆ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
 
ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿ ಆರೋಪಿ ರೋಹಿತ್ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆರೋಪಿ ರೋಹಿತ್ ತಿಲಕ್ ಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಮರಿ ಮೊಮ್ಮಗ, ಕಾಂಗ್ರೆಸ್ ಸಂಸದ ದಿವಂಗತ ಜಯಂತ್ ರಾವ್ ತಿಲಕ್ ಅವರ ಮೊಮ್ಮಗ. ರೋಹಿತ್ ತಿಲಕ್ ಅವರ ತಂದೆ ಡಾ.ದೀಪಕ್ ತಿಲಕ್ ಮಹಾರಾಷ್ಟ್ರ ವಿದ್ಯಾಪೀಠದ ಉಪಕುಲಪತಿಯಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡಿಐಜಿ ರೂಪಾಗೆ ವರ್ಗಾವಣೆ ಶಿಕ್ಷೆ ಅಲ್ಲ: ಆರ್.ಕೆ.ದತ್ತಾ

ಕಾರಾಗೃಹದ ಡಿಐಜಿಯಾಗಿದ್ದ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ...

news

ವಿಶ್ವ ಕನ್ನಡ ಸಮ್ಮೇಳನ ಮುಂದೂಡುವ ಅಗತ್ಯವಿಲ್ಲ: ಚಿದಾನಂದ ಮೂರ್ತಿ

ಬೆಂಗಳೂರು: ರಾಜ್ಯದಲ್ಲಿ ಬರ ಎದುರಾಗಿದ್ದರಿಂದ ವಿಶ್ವ ಕನ್ನಡ ಸಮ್ಮೇಳನ ಮುಂದೂಡಿ ಎನ್ನುವ ಚಂಪಾ ಹೇಳಿಕೆಗೆ ...

news

10 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಚಿಕ್ಕಪ್ಪ

ನವದೆಹಲಿ: ಕಳೆದೊಂದು ವರ್ಷದಿಂದ 10 ವರ್ಷದ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೆ ಅತ್ಯಾಚಾರವೆಸಗಿದ ಹೇಯ ಘಟನೆ ...

news

ಕ್ಷುಲ್ಲಕ ಕಾರಣಕ್ಕೆ ಸೇನಾಧಿಕಾರಿಯನ್ನೇ ಕೊಂದ ಯೋಧ

ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ ಆರಂಭವಾದ ಗಲಾಟೆಯಿಂದಾಗಿ ಸಿಟ್ಟಿಗೆದ್ದ ಭಾರತೀಯ ಸೇನೆ ಯೋಧನೊಬ್ಬ ತನ್ನ ...

Widgets Magazine