ಗೊಡ್ಸೆ ಹಿಮ್ಮೆಟ್ಟಿಸಿ ಗಾಂಧೀಜಿ ರಕ್ಷಣೆಗೆ ನಿಂತಿದ್ಧ ಭಿಲಾರೆ ಗುರೂಜಿ ಇನ್ನಿಲ್ಲ

ಮುಂಬೈ, ಗುರುವಾರ, 20 ಜುಲೈ 2017 (12:03 IST)

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಾಥೂರಾಮ್ ಗೊಡ್ಸೆ ಮಹಾತ್ಮಾ ಗಾಂಧೀಜಿಯವರನ್ನ ಕೊಲ್ಲಲು ಬಂದಾಗ ಗೊಡ್ಸೆಯನ್ನ ಹಿಮ್ಮೆಟ್ಟಿಸಿದ್ದ ಭಿಕು ದಜಿ ಭಿಲಾರೆ ಅಲಿಯಾಸ್ ಭಿಲಾರೆ ಗುರೂಜಿ ವಿಧಿವಶರಾಗಿದ್ಧಾರೆ.


 98 ವರ್ಷದ ಭಿಲಾರೆ ಗುರೂಜಿ ಮಹಾರಾಷ್ಟ್ರದ ಭಿಲಾರ್ ಗ್ರಾಮದಲ್ಲಿ ನಿಧನರಾಗಿದ್ದಾರೆ. ಭಿಲಾರೆ ಗುರೂಜಿ ನೀಡಿರುವ ಸಂದರ್ಶನಗಳು ಸಣ್ಣ ಸಣ್ಣ ಬುಕ್ ಲೆಟ್`ಗಳಾಗಿ ಮುದ್ರಿತವಾಗಿರುವುದು ವಿಶೇಷ.

ಸಂದರ್ಶನವೊಂದರಲ್ಲಿ ಭಿಲಾರೆ ಗುರೂಜಿ ಹೇಳಿರುವ ಪ್ರಕಾರ, ಪಂಚಗನಿಯಲ್ಲಿ ಗಾಂಧೀಜಿಯವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗಿತ್ತು. ಸಹಚರರಾದ ಉಷಾ ಮೆಹ್ತಾ, ಪ್ಯಾರೆಲಾಲ್, ಅರುಣಾ ಅಸಾಫ್ ಅಲಿ ಮತ್ತಿತರರು ಹಾಜರಿದ್ದರು. ಈ ಸಂದರ್ಭ ಚಾಕು ಹಿಡಿದಿದ್ದ ಗೊಡ್ಸೆ ನನ್ನ ಬಳಿ ಕೆಲ ಪ್ರಶ್ನೆಗಳಿವೆ ಎಂದು ಹೇಳಿ ಗಾಂಧೀಜಿ ಕಡೆಗೆ ನುಗ್ಗಿದ್ದ. ಆದರೆ, ಅವನನ್ನ ನಿಲ್ಲಿಸಿದ ನಾನು ಕೈತಿರುಗಿಸಿ ಚಾಕು ಕಿತ್ತುಕೊಂಡೆ. ಆದರೆ, ಗಾಂಧಿಜಿ ಅವನನ್ನ ಬಿಡಲು ಹೇಳಿದರು ಎಂದಿದ್ಧಾರೆ. ಆದರೆ, ಕಪೂರ್ ಕಮೀಷನ್ ಅಭಿಪ್ರಾಯದ ಪ್ರಕಾರ, 1944ರ ಜುಲೈನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಸಾಬೀತಾಗಿಲ್ಲ ಎನ್ನಲಾಗಿದೆ.

ಮಾಹಿತಿ: ಟೈಮ್ಸ್ ಆಫ್ ಇಂಡಿಯಾ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗಾಂಧೀಜಿ ಭಿಲಾರೆ ಗುರೂಜಿ ಮಹಾರಾಷ್ಟ್ರ Gandhiji Maharashtra Bhilare Guruji

ಸುದ್ದಿಗಳು

news

ಮೋದಿ ಮನ್ ಕಿ ಬಾತ್ ನಿಂದ ಆಕಾಶವಣಿಗೆ ಹರಿದು ಬಂದ ಆದಾಯ ಎಷ್ಟು ಗೊತ್ತೆ...?

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಿಂದಾಗಿ ಆಕಾಶವಾಣಿಗೆ ಈವರೆಗೆ ...

news

ಕಂದಕಕ್ಕೆ ಉರುಳಿದ ಬಸ್: 20ಕ್ಕೂ ಹೆಚ್ಚು ಪ್ರಯಾಣಿಕರ ಧಾರುಣ ಸಾವು

ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರನ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 20 ಕ್ಕೂ ಹೆಚ್ಚು ...

news

ಭಾರತ ಸೇನೆ ಹಿಂಪಡೆಯದಿದ್ದರೆ ಸೆರೆ, ಇಲ್ಲವೆ ಕೊಲೆ: ಚೀನಾ ಮಾಜಿ ರಾಯಾಭಾರಿ ಧಮಕಿ

ನೆರೆಯ ಕಪಟಿ ಚೀನಾ ಕೊನೆಗೂ ಭಾರತದ ವಿರುದ್ಧ ಮುಗಿಬೀಳುವ ಸೂಚನೆ ಕೊಟ್ಟಿದೆ. ಚೀನಾದ ಮಾಜಿ ರಾಜತಾಂತ್ರಿಕ ...

news

ಹಿಂದೂ ದೇವರನ್ನು ಮದಿರೆಗೆ ಹೋಲಿಸಿದ ಸಂಸದ!

ನವದೆಹಲಿ: ಸಂಸತ್ತಿನಲ್ಲಿ ಆವೇಶಭರಿತರಾಗಿ ಮಾತನಾಡುವಾಗ ಸಂಸದರಿಗೆ ಕೆಲವೊಮ್ಮೆ ತಾವೇನು ಮಾತನಾಡುತ್ತಿದ್ದೇವೆ ...

Widgets Magazine