ಚುನಾವಣಾ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಭೀಮ್ ಸೇನೆ ಮುಖ್ಯಸ್ಥನ ಬಂಧನ...

ಬೆಂಗಳೂರು, ಗುರುವಾರ, 14 ಮಾರ್ಚ್ 2019 (15:35 IST)

ಮುಜಾಫರ್ ನಗರ: ನೂರಾರು ಬೈಕ್ ಸವಾರಿಯ ಮೂಲಕ ರ್ಯಾಲಿಯನ್ನು ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಹಾಗೂ ಆತನ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್‍‌ರನ್ನು ಬಂಧಿಸುತ್ತಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಅಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಚುನಾವಣಾ ಆಯೋಗದಿಂದ ನೀತಿ ಸಂಹಿತೆ ಘೋಷಣೆಯಾಗಿದ್ದರೂ ಸಹ ಮುಜಾಫರ್ ನಗರದ ಕಡೆಗೆ ಬೈಕ್ ಮತ್ತು ಇತರ ವಾಹನಗಳಲ್ಲಿ ರ್ಯಾಲಿ ನಡೆಸಲು ಯೋಜಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉತ್ತರಪ್ರದೇಶದ ಶಹರಾನ್‍ಪುರ ಜಿಲ್ಲೆಯ ಡಿಯೋಬಾಂದ್ ಪೊಲೀಸರು ಚಂದ್ರಶೇಖರ್ ಹಾಗೂ ಆತನ ಬೆಂಬಲಿಗರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
 
ನವದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಚಂದ್ರಶೇಖರ್, ಪ್ರಧಾನಿ ಮೋದಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ವಿರುದ್ಧ ಪ್ರತಿಪಕ್ಷಗಳು ಪ್ರಬಲವಾದ ಅಭ್ಯರ್ಥಿಗಳನ್ನು ನೇಮಿಸುವಲ್ಲಿ ವಿಫಲವಾದರೆ ಭೀಮ್ ಆರ್ಮಿಯಿಂದ ಸದೃಢ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗುತ್ತದೆ ಎಂದು ಹೇಳಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಭಿನಂದನ್ ಫೋಟೋದೊಂದಿಗೆ ಪಾಕಿಸ್ತಾನ್ ಚಾಯ್‌ವಾಲಾ ... ವ್ಯಾಪಾರ ಬೊಂಬಾಟಾಗಿದೆ!

ಪಾಕಿಸ್ತಾನ್ ಸೆರೆಯಿಂದ ಬಿಡುಗಡೆಯಾದ ಐಎಎಫ್ ಪೈಲಟ್ ಅಭಿನಂದನ್ ಈಗ ಇಡೀ ದೇಶಕ್ಕೆ ಸೆಲೆಬ್ರಿಟಿಯಾಗಿದ್ದಾರೆ. ...

news

ಜಗತ್ತಿನ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದ ಶಾಸಕ

ನಾನು ದುಡ್ಡು ಪಡೆದುಕೊಂಡಿದ್ದು ನಿಜವೇ ಆಗಿದ್ದಲ್ಲಿ ಜಗತ್ತಿನ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ ...

news

ಶಾಲಾ ಮಕ್ಕಳಿದ್ದ ಬಸ್ ಹಳ್ಳಕ್ಕೆ ಬಿತ್ತು; ಮುಂದೇನಾಯ್ತು?

ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ವೊಂದು ಆಯತಪ್ಪಿ ಹಳ್ಳಕ್ಕೆ ಬಿದ್ದಿದೆ.

news

ಹೈಕೋರ್ಟ್ ವಕೀಲ ದಂಪತಿಗೆ ಮದ್ಯರಾತ್ರಿ ಥಳಿಸಿ ಆ ಮೇಲೆ ಮಾಡಿದ್ದೇನು?

ಹೈಕೋರ್ಟ್ ವಕೀಲರೊಬ್ಬರ ಮೇಲೆ ದುಷ್ಕರ್ಮಿಗಳು ಮದ್ಯರಾತ್ರಿ ಮನೆಗೆ ನುಗ್ಗಿ ಥಳಿಸಿರುವ ಘಟನೆ ನಡೆದಿದೆ.

Widgets Magazine