ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಪಾಟ್ನಾ, ಬುಧವಾರ, 26 ಜುಲೈ 2017 (18:58 IST)

Widgets Magazine

ಬಿಹಾರದ ಜೆಡಿಯು ಮತ್ತು ಆರ್`ಜೆಡಿ ನಡುವಿನ ಮಹಾಮೈತ್ರಿ ಮುರಿದು ಬಿದ್ದಿದೆ. ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಲಾಲೂ ಪ್ರಸಾದ್ ಯಾದವ್ ಪುತ್ರ ಡಿಸಿಎಂ ತೇಜಸ್ವಿ ಯಾದವ್ ರಾಜೀನಾಮೆಗೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕಳಂಕರಹಿತ ರಾಜಕಾರಣಕ್ಕೆ ಹೆಸರಾಗಿರುವ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿಯಿಂದ ಹೊರ ಬಂದಿದ್ದಾರೆ.


ರಾಜೀನಾಮೆ ಬಳಿಕ ಮಾತನಾಡಿದ ನಿತೀಶ್ ಕುಮಾರ್, ಬಿಹಾರ ರಾಜ್ಯದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಇದೀಗ, ಆರ್`ಜೆಡಿ ಜೊತೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಮೈತ್ರಿ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇನೆ. ರಾಹುಲ್ ಗಾಂಧಿ ಜೊತೆಯೂ ಮಾತುಕತೆ ನಡೆಸಿದ್ದೇನೆ. ಹೀಗಾಗಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಡಿಸಿಎಂ ತೇಜಸ್ವಿ ಯಾದವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಿ ಶುದ್ಧರಾಗಿ ಬರಬೇಕು ಎಂದಿದ್ದಾರೆ. 
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡಿಐಜಿ ಡಿ.ರೂಪಾ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಸತ್ಯನಾರಾಯಣ್ ರಾವ್

ಬೆಂಗಳೂರು: ಡಿಐಜಿ ಡಿ.ರೂಪಾ ಮೂರು ದಿನಗಳೊಳಗಾಗಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ರೆ 50 ಕೋಟಿ ...

news

ಲಿಂಗಾಯುತ ಧರ್ಮಕ್ಕೆ ಸರಕಾರ ಓ.ಕೆ....?

ಬೆಂಗಳೂರು: ಲಿಂಗಾಯುತ ಧರ್ಮಕ್ಕೆ ಸ್ವತಂತ್ರ ಧರ್ಮ ಎಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ವೀರಶೈವ ...

news

ಕೆರೆಗಳ ರಕ್ಷಣೆಗೆ ಧಾವಿಸುವಂತೆ ರಾಜ್ಯಪಾಲರಿಗೆ ಸಂಸದೆ ಶೋಭಾ ಮನವಿ

ಬೆಂಗಳೂರು: ರಾಜ್ಯ ಸರಕಾರ 1500 ಕೆರೆಗಳ ಡಿನೋಟಿಫಿಕೇಶನ್‌ಗೆ ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ...

news

ರೈಗೆ ಗೃಹಸಚಿವ ಸ್ಥಾನ ನೀಡಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ: ಆರ್. ಅಶೋಕ್

ಬೆಂಗಳೂರು: ಮಂಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಿದಲ್ಲಿ ...

Widgets Magazine