ಯುಪಿ, ಉತ್ತರಾಖಂಡ್`ನಲ್ಲಿ ಅರಳಿದ ಕಮಲ, ಪಂಜಾಬ್, ಗೋವಾದಲ್ಲಿ `ಕೈ’ ಕಮಾಲ್

Newdelhi, ಶನಿವಾರ, 11 ಮಾರ್ಚ್ 2017 (10:25 IST)

Widgets Magazine

ಉತ್ತರಪ್ರದೇಶದಲ್ಲಿ ಮತ್ತೆ ಪ್ರಧಾನಮಂತ್ರಿ ನರೇಂದ್ರಮೋದಿ ಹವಾ ಕಂಡುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿ, ವಿಧಾನಸಭಾ ಚುನಾವಣೆಯಲ್ಲೂ ಅಧಿಕಾರದ ಗದ್ದುಗೆ ಏರುವ ಸೂಚನೆ ಸಿಕ್ಕಿದೆ. ಸುಮಾರು 290 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಪ್ರಚಂಡ ಬಹುಮತದ ಸೂಚನೆ ಸಿಕ್ಕಿದೆ. 403 ಕ್ಷೇತ್ರಗಳಿರುವ ತ್ತರಪ್ರದೇಶದಲ್ಲಿ ಸರ್ಕಾರ  ರಚನೆಗೆ 204 ಸ್ಥಾನ ಸಾಕು.


ಇತ್ತ, ಪಂಜಾಬ್`ನಲ್ಲಿ ಕಾಂಗ್ರೆಸ್ ಕಮಾಲ್ ಮಾಡಿದೆ. ಆಡಳಿತಾರೂಢ ಅಕಾಲಿದಳ-ಬಿಜೆಪಿ ಮೈತ್ರಿಕೂಟವನ್ನ ಧೂಳೀಪಟ ಮಾಡಿರುವ ಕಾಂಗ್ರೆಸ್ 65ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದು, ಗದ್ದುಗೆ ಏರುವ ಸೂಚನೆ ಸಿಕ್ಕಿದೆ. ಆಮ್ ಅದ್ಮಿ ಸಮಾನ ಹೋರಾಟದ ನಿರೀಕ್ಷೆ ಹುಸಿಯಾಗಿದೆ.

ಇತ್ತ, ಉತ್ತರಾಖಂಡ್`ನಲ್ಲೂ ಕಮಲ ಅರಳುತ್ತಿದೆ. 70 ಕ್ಷೇತ್ರಗಳ ಪೈಕಿ 52ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಹರೀಶ್ ರಾವತ್ ಸರ್ಕಾರಕ್ಕೆ ಮುಖಭಂಗವಾಗಿದ್ದು, ತೀವ್ರ ಹಿನ್ನಡೆ ಅನುಭವಿಸಿದೆ.

ಗೋವಾದಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಮಣಿಪುರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ.
 
 ಸದ್ಯದ ಟ್ರೆಂಡ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೋವಾ ಸಿಎಂಗೇ ಸೋಲಿನ ರುಚಿ ತೋರಿಸಿದ ಮತದಾರ

ಪಣಜಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ...

news

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಯಾರಾಗ್ತರೆ ಸಿಎಂ..?

ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಬಹುಮತದತ್ತ ಮುನ್ನುಗ್ಗುತ್ತಿದೆ. 300ಕ್ಕೂ ಅಧಿಕ ಸ್ಥಾನಗಳಲ್ಲಿ ...

news

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿರುವ ಅಖಿಲೇಶ್ ಯಾದವ್

ನವದೆಹಲಿ: ಚುನಾವಣೆ ಫಲಿತಾಂಶಗಳು ಬಿಜೆಪಿಗೆ ಸ್ಪಷ್ಟ ಮುನ್ನಡೆ ತೋರಿಸುತ್ತಿದ್ದಂತೆ, ಇತ್ತ ಸಿಎಂ ಅಖಿಲೇಶ್ ...

news

ಮದರ್ ಡೈರಿ ಕೊಳ್ಳುಗರೇ? ಈ ಸುದ್ದಿ ತಪ್ಪದೇ ಓದಿ

ನವದೆಹಲಿ: ನೀವು ಮದರ್ ಡೈರಿ ಉತ್ಪನ್ನ ಕೊಳ್ಳುವವರೇ? ಹಾಗಿದ್ದರೆ ಇದನ್ನು ತಪ್ಪದೇ ಗಮನಿಸಿ. ಮದರ್ ಡೈರಿ ...

Widgets Magazine