ಮತ್ತೊಂದು ದೋಸ್ತಿಗೆ ಪ್ರಧಾನಿ ಮೋದಿ ಭರ್ಜರಿ ಪ್ಲ್ಯಾನ್

ನವದೆಹಲಿ, ಶುಕ್ರವಾರ, 10 ಆಗಸ್ಟ್ 2018 (09:41 IST)

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ತನ್ನ ಕಡೆಗೆ ಹೆಚ್ಚು ರಾಜಕೀಯ ಪಕ್ಷಗಳನ್ನು ಸೇರಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ.
 
ಇತ್ತೀಚೆಗಷ್ಟೇ ಬಿಜೆಪಿಗೆ ಲೋಕಸಭೆ ಚುನಾವಣೆ ನಂತರ ಬೆಂಬಲ ಕೊಡುವುದಾಗಿ ತೆಲಂಗಾಣ ಸಿಎಂ, ಟಿಆರ್ ಎಸ್ ಮುಖಂಡ ಚಂದ್ರಶೇಖರ್ ರಾವ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೊಂದು ಪಕ್ಷದ ಜತೆಗೆ ಬಿಜೆಪಿ ಮೈತ್ರಿ ಗಟ್ಟಿಗೊಳ್ಳುತ್ತಿದೆ.
 
ಇದೀಗ ರಾಜ್ಯಸಭೆ ಉಪಸಭಾಪತಿ ಸ್ಥಾನದ ಚುನಾವಣೆಯಲ್ಲಿ ಬಿಜು ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ) ಪಕ್ಷ ಎನ್ ಡಿಎ ಕೂಟಕ್ಕೆ ಬೆಂಬಲ ಕೊಡುವ ಮೂಲಕ ಎರಡೂ ಪಕ್ಷಗಳ ನಡುವೆ ಮೈತ್ರಿ ಮತ್ತಷ್ಟು ಗಟ್ಟಿಗೊಳ‍್ಳುವ ಲಕ್ಷಣ ತೋರುತ್ತಿದೆ. ಇದು ಲೋಕಸಭೆ ಚುನಾವಣೆವರೆಗೂ ಮುಂದುವರಿಯುವ ಸೂಚನೆ ದೊರೆತಿದೆ.
 
ಕಳೆದ ಜೂನ್ ನಲ್ಲಿ ಪ್ರಧಾನಿ ಮೋದಿ ಬಿಜು ಪಟ್ನಾಯಕ್ ಅವರಿಗೆ ಕರೆ ಮಾಡಿ ದೇಶದಾದ್ಯಂತ ನಡೆಯುವ ಉಪ ಚುನಾವಣೆ ಸಂದರ್ಭದಲ್ಲಿ ಬೆಂಬಲ ಕೊಡುವಂತೆ ಕೋರಿದ್ದರು. ಅದಾದ ಬಳಿಕ ಎರಡೂ ಪಕ್ಷಗಳ ನಡುವಿನ ಬಾಂಧವ್ಯ ದಿನೇ ದಿನೇ ಗಟ್ಟಿಯಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಬಿಜೆಪಿ ಬಿಜು ಪಟ್ನಾಯಕ್ ಬಿಜೆಡಿ ರಾಷ್ಟ್ರೀಯ ಸುದ್ದಿಗಳು Bjp Bjd Biju Patnayak Pm Modi National News

ಸುದ್ದಿಗಳು

news

ಪ್ರಧಾನಿ ಮೋದಿಯದ್ದು ದಲಿತ ವಿರೋಧ ಮನಸ್ಥಿತಿ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿಯದ್ದು ದಲಿತ ವಿರೋಧಿ ಮನಸ್ಥಿತಿ. ಆದರೆ ನಮ್ಮ ಪಕ್ಷ ದೇಶದ ಎಲ್ಲಾ ವರ್ಗದ ಜನರಿಗೆ ...

news

ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದ ಸಿದ್ದರಾಮಯ್ಯ

ಬೆಂಗಳೂರು: ಆಗಾಗ ಕೆಲವು ಕಾಂಗ್ರೆಸ್ ಶಾಸಕರು ನಮ್ಮ ಸಂಪಕರ್ದಲ್ಲಿದ್ದಾರೆ ಎಂದು ಶಾಕ್ ನೀಡುವ ಬಿಜೆಪಿಗೆ ...

news

ಬಾಲಿಗೆ ಭೇಟಿ ನೀಡುವುದು ಸುರಕ್ಷಿತವೇ? ಎಂದು ಕೇಳಿದವನಿಗೆ ಸಚಿವೆ ಸುಷ್ಮಾ ಕೊಟ್ಟ ಉತ್ತರವೇನು ಗೊತ್ತಾ?

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಾಗ ಟ್ವಿಟರ್ ನಲ್ಲಿ ಮಾಡುವ ಟ್ವೀಟ್ ಗಳಿಂದಲೇ ...

news

ಕೆಲವನ್ನು ಸೋಲ್ತೀವಿ, ಕೆಲವು ಬಾರಿ ಗೆಲ್ತೀವಿ, ಅದರಲ್ಲೇನಿದೆ? ಸೋನಿಯಾ ಗಾಂಧಿ ಪ್ರಶ್ನೆ

ನವದೆಹಲಿ: ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಸೋತ ಬಳಿಕ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಮಾಧ್ಯಮಗಳ ...

Widgets Magazine
Widgets Magazine