ರಾಜ್ಯಸಭೆ ಚುನಾವಣೆ: ಅಮಿತ್ ಶಾ ನಾಮಪತ್ರ ಸಲ್ಲಿಕೆ

ಅಹ್ಮದಾಬಾದ್, ಶುಕ್ರವಾರ, 28 ಜುಲೈ 2017 (12:12 IST)

ಅಹ್ಮದಾಬಾದ್: ಗುಜರಾತ್‌ನಿಂದ ನಡೆಯುವ ರಾಜ್ಯ ಸಭಾ ಚುನಾವಣೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಮಪತ್ರ ಸಲ್ಲಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಮಾಜಿ ಸಿಎಂ ಆನಂದಿ ಬೆನ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿ ಶಾ ರಾಜ್ಯಸಭಾ ಚುನಾವಣೆಗೆ  ನಾಮಪತ್ರ ಸಲ್ಲಿಸಿದ್ದಾರೆ.
 
ಪ್ರಸ್ತುತ ಅಮಿತ್ ಶಾ ಸದ್ಯ ಗುಜರಾತ್‌ ನಲ್ಲಿ ಬಿಜೆಪಿ ಶಾಸಕರಾಗಿದ್ದು, ಸರ್ಕೇಜ್  ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಇದೇ ಮೊದಲ ಬಾರಿಗೆ ಅಮಿತ್ ಶಾ ರಾಜ್ಯಸಭೆ ಪ್ರವೇಶಿಸುವ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅಮಿತ್ ಶಾ ಅವರೊಂದಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಲ್ವಂತ್ ಸಿಂಗ್ ರಜಪೂತ್ ಅವರೂ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
 
ಹಾಲಿ ರಾಜ್ಯಸಭೆ ಸದಸ್ಯರಾಗಿರುವ ಸ್ಮೃತಿ ಇರಾನಿ ಅವರ ಅವಧಿ ಆಗಸ್ಟ್ 18ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ  ಮತ್ತೊಂದು ಅವಧಿಗೆ ರಾಜ್ಯಸಭೆ ಸದಸ್ಯರಾಗಲು ಕಣಕ್ಕಿಳಿಯುತ್ತಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ರಾಜ್ಯಸಭಾ ಚುನಾವಣೆ ಅಮಿತ್ ಶಾ ನಾಮಪತ್ರ ಸಲ್ಲಿಕೆ Files Nomination Rajya Sabha Elections Bjp Chief Amit Shah

ಸುದ್ದಿಗಳು

news

ನೀವೇ ನಮ್ಮ ಪ್ರಧಾನಿಯಾಗಬೇಕಿತ್ತು ಎಂದು ಸಚಿವೆ ಸುಷ್ಮಾಗೆ ಆ ಮಹಿಳೆ ಹೇಳಿದ್ದೇಕೆ?

ನವದೆಹಲಿ: ಕಷ್ಟದಲ್ಲಿರುವವರ ನೆರವಿಗೆ ಬರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜಪ್ರಿಯತೆ ವಿದೇಶದಲ್ಲೂ ...

news

ಬಿಹಾರ ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ

ಪಾಟ್ನಾ: ಆರ್ ಜೆಡಿಗೆ ಸಡ್ಡು ಹೊಡೆದು ಬಿಜೆಪಿ ಜತೆ ಸಖ್ಯ ಬೆಳೆಸಿ ಸರ್ಕಾರ ರಚಿಸಿರುವ ಜೆಡಿಯು ನಾಯಕ ಸಿಎಂ ...

news

ಪರಪ್ಪನ ಅಗ್ರಹಾರ ಕರ್ಮಕಾಂಡಕ್ಕೆ ಬಿಗ್ ಟ್ವಿಸ್ಟ್!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಮತ್ತು ಶಶಿಕಲಾ ನಟರಾಜನ್ ರಿಂದ ಲಂಚ ...

news

2002 ರಲ್ಲಿ ಭಾರತ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಲು ಪ್ಲ್ಯಾನ್ ಮಾಡಿದ್ದ ಮುಷರಫ್!

ಲಾಹೋರ್: ಕಾರ್ಗಿಲ್ ಯುದ್ಧ ಹೇರಲು ಪ್ರಮುಖ ಕಾರಣರಾಗಿದ್ದ ಪಾಕಿಸ್ತಾನದ ಅಂದಿನ ಮಿಲಿಟರಿ ಮುಖ್ಯಸ್ಥ ಹಾಗೂ ...

Widgets Magazine