ಮುಂದಿನ 50 ವರ್ಷಗಳವರೆಗೆ ಕೇಂದ್ರದಲ್ಲಿ ಬಿಜೆಪಿಯದ್ದೇ ರಾಜ್ಯಭಾರ: ಅಮಿತ್ ಶಾ

ಭೋಪಾಲ್, ಶನಿವಾರ, 19 ಆಗಸ್ಟ್ 2017 (18:57 IST)

Widgets Magazine

ಬಿಜೆಪಿ ಪಕ್ಷ ಕೇವಲ 5 ಅಥವಾ 10 ವರ್ಷಗಳ ಕಾಲ ಅಧಿಕಾರದ್ಲಲಿರಲು ಕೇಂದ್ರದಲ್ಲಿ ಸರಕಾರ ರಚಿಸಿಲ್ಲ. ಕನಿಷ್ಠ 50 ವರ್ಷಗಳವರೆಗೆ ಕೇಂದ್ರದಲ್ಲಿ ಬಿಜೆಪಿಯದ್ದೇ ರಾಜ್ಯಭಾರ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ದೇಶದ ಮೂಲೆ ಮೂಲೆಗೂ ತೆಗೆದುಕೊಂಡು ಹೋಗಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ಕೇಂದ್ರದಲ್ಲಿ ಬಹುಮತವಿರುವ ಸರ್ಕಾರ, ರಾಜ್ಯಗಳಲ್ಲಿ  1,387 ಶಾಸಕರಿದ್ದರೂ ಬಿಜೆಪಿ ಪಕ್ಷ ಮತ್ತಷ್ಟು ಉತ್ತಂಗಕ್ಕೇರಬೇಕು ಎಂದು ಪಕ್ಷದ ಕಾರ್ಯಕರ್ತರು ಬಯಸುತ್ತಿದ್ದಾರೆಂದು ತಿಳಿಸಿದ್ದಾರೆ.
 
ಇಂದು ನಾವು 330 ಕ್ಕೂ ಅಧಿಕ ಸಂಸತ್ ಸದಸ್ಯರೊಂದಿಗೆ ಕೇಂದ್ರದಲ್ಲಿ ಬಹಮತದ ಸರಕಾರವನ್ನು ಹೊಂದಿದ್ದೇವೆ ಮತ್ತು ವಿವಿಧ ರಾಜ್ಯಗಳಲ್ಲಿ 1,387 ಶಾಸಕರನ್ನು ಹೊಂದಿದ್ದೇವೆ. ದೇಶಾದ್ಯಂತ ಬಿಜೆಪಿ ಧ್ವಜ ಹಾರಬೇಕು ಎಂದು ಹೇಳಿದ್ದಾರೆ. 
 
ಮಧ್ಯಪ್ರದೇಶದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ,  ನಾವು 5-10 ವರ್ಷಗಳ ಕಾಲ ನಡೆಸಲು ಅಧಿಕಾರಕ್ಕೆ ಬಂದಿಲ್ಲ,  ಕನಿಷ್ಠ 50 ವರ್ಷಗಳು ಅಧಿಕಾರದಲ್ಲಿರಬೇಕು ಎಂದು ಬಯಸಿದ್ದೇವೆ. ನಾವು 40-50 ವರ್ಷಗಳ ಅವಧಿಯಲ್ಲಿ ಅಧಿಕಾರ ಬಲದಿಂದ ದೇಶದಲ್ಲಿ ಪ್ರಮುಖ ಬದಲಾವಣೆಗಳನ್ನು ತರಬೇಕಾಗಿದೆ ಎಂದು ತಿಳಿಸಿದ್ದಾರೆ.
 
ಮಧ್ಯಪ್ರದೇಶ ಬಿಜೆಪಿಯ ಕೋರ್ ಗುಂಪಿನ ಸದಸ್ಯರು, ಕಚೇರಿ ಅಧಿಕಾರಿಗಳು, ಸಂಸದರು, ಎಂಎಲ್ಎಗಳು ಮತ್ತು ಜಿಲ್ಲಾ ಮುಖ್ಯಸ್ಥರನ್ನು ಅವರು ಉಪಸ್ಥಿತರಿದ್ದರು.
 
110 ದಿನಗಳ ರಾಷ್ಟ್ರೀಯ ಪ್ರವಾಸದ ಭಾಗವಾಗಿ ಹಲವು ನಗರಗಳಲ್ಲಿ ವಿವಿಧ ಕಾರ್ಯಸೂಚಿಗಳಲ್ಲಿ ಪಾಲ್ಗೊಂಡು ನಗರಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿರುವ ಅಮಿತ್ ಶಾ, ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ.  
 
ಬಿಜೆಪಿ ಪಕ್ಷವನ್ನು ಬಲಪಡಿಸಿದ್ದರ ಹಿಂದೆ ಸಾವಿರಾರು ಹಿರಿಯ ನಾಯಕರ ಪರಿಶ್ರಮ, ತ್ಯಾಗ, ಬಲಿದಾನ ಅಡಗಿದೆ. ಅದರ ಪ್ರತಿಫಲವಾಗಿ ಬಿಜೆಪಿ ಪಕ್ಷ ಇಂದು 10-12 ಕೋಟಿ ಸದಸ್ಯರನ್ನು ಹೊಂದಿದೆ ಎನ್ನುವುದನ್ನು ಮರೆಯಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಲಹೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಅಮಿತ್ ಶಾ ಮಧ್ಯಪ್ರದೇಶ ಅಧಿಕಾರ Bjp Power Madhya Pradesh Long Haul Amit Shah

Widgets Magazine

ಸುದ್ದಿಗಳು

news

ಅಮಿತ್ ಶಾ ತಂತ್ರ ಸಫಲ: ಎನ್‌ಡಿಎದೊಂದಿಗೆ ವಿಲೀನವಾದ ಜೆಡಿಯು ಪಕ್ಷ

ಪಾಟ್ನಾ : ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಇಂದು ಸಭೆ ನಡೆಸಿ ಎನ್‌ಡಿಎ ...

news

ಅನೈತಿಕ ಸಂಬಂಧ: ಪತ್ನಿಯ ಹತ್ಯೆಗೈದ ಪತಿ ಮಹಾಶಯ

ಬೆಳಗಾವಿ: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಹತ್ಯೆಗೈದ ಪತಿಯನ್ನು ಪೊಲೀಸರು ...

news

ಸಿಎಂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಈಶ್ವರಪ್ಪ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಅಧಿಕಾರಿಗಳ ಮೇಲೆ ...

news

ಹೈಕೋರ್ಟ್ ಮೆಟ್ಟಿಲೇರಿದ ಯಡಿಯೂರಪ್ಪ

ಶಿವರಾಮ ಕಾರಂತ ಲೇಔಟ್ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯಲ್ಲಿ ದಾಖಲಾಗಿರುವ 2 ಎಫ್ಐಆರ್ ...

Widgets Magazine