ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಘೋಷ ವಾಕ್ಯವೇನು ಗೊತ್ತಾ?

ನವದೆಹಲಿ, ಸೋಮವಾರ, 10 ಸೆಪ್ಟಂಬರ್ 2018 (09:33 IST)

ನವದೆಹಲಿ: ನವದೆಹಲಿಯಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಹೊಸ ಘೋಷವಾಕ್ಯ ಬಿಡುಗಡೆಗೊಳಿಸಲಾಗಿದೆ.
 
ಕಳೆದ ಬಾರಿ ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂದು ಬಿಜೆಪಿ ಘೋಷ ವಾಕ್ಯ ಮಾಡಿತ್ತು. ಇದು ಭಾರೀ ಜನಪ್ರಿಯವಾಗಿತ್ತು. ಈ ಬಾರಿ ಹಿರಿಯ ನಾಯಕ, ಇತ್ತೀಚೆಗಷ್ಟೇ ನಿಧನರಾದ ಅಟಲ್ ಬಿಹಾರಿ ವಾಜಪೇಯಿ ಹೆಸರಿನೊಂದಿಗೆ ಹೊಸ ಘೋಷವಾಕ್ಯ ಮೊಳಗಿಸಲಿದೆ.
 
‘ಅಜೇಯ ಭಾರತ, ಅಟಲ್ ಭಾಜಪ’ ಎಂಬ ಹೊಸ ಘೋಷವಾಕ್ಯವನ್ನು ನಿನ್ನೆ ಪ್ರಧಾನಿ ಮೋದಿ ಬಹಿರಂಗಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ಮುಂಬರುವ ಲೋಕಸಭೆ ಚುನಾವಣೆ ಗೆಲ್ಲುವುದು ಮಾತ್ರವಲ್ಲ, ಮುಂದಿನ 50 ವರ್ಷಗಳ ಕಾಲ ನಾವೇ ದೇಶವನ್ನು ಆಳುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಣೇಶ ಹಬ್ಬ ಬಳಿಕ ಬಸ್ ಪ್ರಯಾಣಿಕರಿಗೆ ಕಾದಿದೆ ಶಾಕ್

ಬೆಂಗಳೂರು: ಗಣೇಶ ಹಬ್ಬ ಮುಗಿದ ಬಳಿಕ ಬಸ್ ಪ್ರಯಾಣ ದರ ಏರಿಕೆಯಾಗುವ ಸಾಧ‍್ಯತೆಯಿದ್ದು ಪ್ರಯಾಣಿಕರಿಗೆ ಶಾಕ್ ...

news

ಸಚಿವ ಡಿಕೆ ಶಿವಕುಮಾರ್ ಬಂಧನವಾಗುತ್ತಾ? ನಾನು ಹೆದರಲ್ಲ ಎಂದ್ರು ಡಿಕೆಶಿ

ಬೆಂಗಳೂರು: ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ಬಂಧನವಾಗುತ್ತದೆ ಎಂಬ ಸುದ್ದಿ ...

news

ಏರೋ ಇಂಡಿಯಾ ಸ್ಥಳಾಂತರವಾಗುತ್ತೆ ಎಂದವರೆಲ್ಲಾ ಈಗ ಕ್ಷಮೆ ಯಾಚಿಸಲಿ: ಬಿಎಸ್ ವೈ

ಬೆಂಗಳೂರು: ಈ ಬಾರಿ ಏರ್ ಶೋ ಬೆಂಗಳೂರಿನಲ್ಲಿ ನಡೆಯದೇ ಉತ್ತರ ಪ್ರದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಸುದ್ದಿ ...

news

ಕೈಲಾಸ ಯಾತ್ರೆ ಬಳಿಕ ರಾಹುಲ್ ಗಾಂಧಿ ಮುಂದಿನ ಭೇಟಿ ಎಲ್ಲಿಗೆ ಗೊತ್ತಾ?

ನವದೆಹಲಿ: ಇದೀಗ ಪವಿತ್ರ ಯಾತ್ರಾ ಸ್ಥಳ ಕೈಲಾಸ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ‍್ಯಕ್ಷ ರಾಹುಲ್ ಗಾಂಧಿ ...

Widgets Magazine
Widgets Magazine