ಅಂದು ವಾಜಪೇಯಿ ಹಾಕಿದ ಸವಾಲು ಇಂದು ನಿಜವಾಗಿದೆ!

ನವದೆಹಲಿ, ಮಂಗಳವಾರ, 6 ಮಾರ್ಚ್ 2018 (08:55 IST)

ನವದೆಹಲಿ: 1997 ರಲ್ಲಿ ಕೇವಲ 2 ಮತಗಳ ಅಂತರದಲ್ಲಿ  ತಮ್ಮ ಸರ್ಕಾರ ಬಿದ್ದು ಹೋದಾಗ ತಮ್ಮನ್ನು ಅಪಹಾಸ್ಯ ಮಾಡಿದವರಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಕಿದ್ದ ಸವಾಲು ಇಂದು ನಿಜವಾಯಿತೇ?!
 
ಇಂತಹದ್ದೊಂದು ಟ್ವೀಟ್ ನ್ನು ಬಿಜೆಪಿ ನಾಯಕರು ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅಂದು ಸರ್ಕಾರ ಬಿದ್ದು ಹೋದಾಗ ವಾಜಪೇಯಿ ‘ಇಂದು ನಾವು ಸಂಖ್ಯಾ ಬಲದಲ್ಲಿ ಕಡಿಮೆ ಇದ್ದೇವೆ ಎಂದು ಅಪಹಾಸ್ಯ ಮಾಡುತ್ತಿದ್ದೀರಾ. ಮುಂದೊಂದು ದಿನ ಇಡೀ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅಂದು ಇಡೀ ದೇಶ ನಿಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತದೆ’ ಎಂದು ವಾಜಪೇಯಿ ಹೇಳಿದ್ದರು ಎಂದು ಬಿಜೆಪಿ ನಾಯಕರು ಮೆಸೇಜ್ ಹರಿಯಬಿಟ್ಟಿದ್ದಾರೆ.
 
ಈಶಾನ್ಯ ರಾಜ್ಯಗಳ ಚುನಾವಣೆಯಲ್ಲೂ ಗೆಲುವು ಸಾಧಿಸಿದ ನಂತರ ಇದೀಗ ಕಾಂಗ್ರೆಸ್ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಂಡಿದೆ. ಇದೇ ವಿಚಾರಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಈ ರೀತಿ ಲೇವಡಿ ಮಾಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಮತ್ತೆ ಅಧಿಕಾರಕ್ಕೇರಲ್ಲ ಎಂಬ ಭಯಕ್ಕೆ ಸಿಎಂ ರಿಬ್ಬನ್ ಕಟ್ ಮಾಡ್ತಿದ್ದಾರೆ’

ಬೆಂಗಳೂರು: ನಗರದ ಕೆಲವೆಡೆ ತರಾತುರಿಯಲ್ಲಿ ರಸ್ತೆ, ಮೇಲ್ಸೇತುವೆ ಉದ್ಘಾಟನೆ ಮಾಡುತ್ತಿರುವ ಸಿಎಂ ...

news

ರಾಜ್ಯ ಬಿಜೆಪಿಗೆ ಮೋದಿ ಬಲವೊಂದೇ ಸಾಕೇ?

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿಗೆ ...

news

ರಾಹುಲ್ ಗಾಂಧಿ ಬಲಹೀನತೆಯೇ ಇದು!

ನವದೆಹಲಿ: ರಾಜಕೀಯಕ್ಕಿಳಿದ ಮೇಲೆ ಸದಾ ರಾಜಕಾರಣಿಯಾಗಿಯೇ ಇರಬೇಕು. ಒಂದು ದೊಡ್ಡ ಪಕ್ಷದ ಚುಕ್ಕಾಣಿ ಹಿಡಿದ ...

news

ವೈಯಕ್ತಿಕ ವಿಚಾರಕ್ಕೆ ಬಿಜೆಪಿ ಬಿಟ್ಟಿಲ್ಲ- ಆನಂದಸಿಂಗ್

ಸ್ವಾರ್ಥಿಯಾಗಿದ್ದರೆ ಬಿಜೆಪಿಯಲ್ಲೇ ಇರುತ್ತಿದ್ದೆ, ನಾನು ವೈಯಕ್ತಿಕ ವಿಚಾರಗಳಿಗಾಗಿ ಪಕ್ಷ ಬಿಟ್ಟಿಲ್ಲ ಎಂದು ...

Widgets Magazine
Widgets Magazine