ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಹುಲ್ ಗಾಂಧಿ ಸೀಟಿನ ವಿವಾದದ ಬಗ್ಗೆ ಬಿಜೆಪಿ ಹೇಳಿದ್ದೇನು?

ನವದೆಹಲಿ, ಶನಿವಾರ, 27 ಜನವರಿ 2018 (09:34 IST)

ನವದೆಹಲಿ: ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿಂದಿನ ಸಾಲಿನಲ್ಲಿ ಸೀಟು ನೀಡಿದ್ದನ್ನೇ ವಿವಾದ ಮಾಡುತ್ತಿರುವುದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದೆ.
 

‘ಕೇಂದ್ರ ಸರ್ಕಾರ ದುರಹಂಕಾರಿ ವ್ಯಕ್ತಿಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮೊದಲು ನಾಲ್ಕನೇ ಸಾಲಿನಲ್ಲಿ ಸೀಟು ನೀಡಿ ಕೊನೆಗೆ ಆರನೇ ಸಾಲಿನಲ್ಲಿ ಸೀಟು ನೀಡಿದರು. ಇದು ಕೇಂದ್ರದ ದುರಹಂಕಾರಕ್ಕೆ ಸಾಕ್ಷಿ. ಆದರೆ ನಮಗೆ ಗಣರಾಜ್ಯೋತ್ಸವವನ್ನು ಆಚರಿಸುವುದೇ ಎಲ್ಲಕ್ಕಿಂತ ದೊಡ್ಡ ಸಂಭ್ರಮ’ ಎಂದು ಕಾಂಗ್ರೆಸ್ ಹೇಳಿತ್ತು.
 
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ‘ಅವರ ಕಾಲದ ಆಡಳಿತದಲ್ಲಿ ಪ್ರತಿಪಕ್ಷವಾಗಿದ್ದ ನಮಗೆ ವಿಐಪಿ ಏರಿಯಾದಲ್ಲಿ ಸ್ಥಾನವೇ ಸಿಗುತ್ತಿರಲಿಲ್ಲ. ಈಗ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಜೆಪಿ ಆಡಳಿತ ಸರ್ಕಾರ ವಿಶೇಷ ಸ್ಥಾನ ಮೀಸಲಿಟ್ಟಿತ್ತು. ಆದರೂ ಅದನ್ನೇ ದೊಡ್ಡ ವಿಷಯ ಮಾಡುತ್ತಿದೆ’ ಎಂದು ಬಿಜೆಪಿ ತಿರುಗೇಟು ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಿಂದೂಗಳ ಹತ್ಯೆಗೆ ಸರ್ಕಾರದ ಕುಮ್ಮಕ್ಕು- ಶಾಸಕ ಸುನೀಲ್ ಕುಮಾರ

ಮುಸ್ಲಿಂ ತುಷ್ಠೀಕರಣದ ಪರಕಾಷ್ಟೇ ತಲುಪಿದ ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ...

news

ಶಾಸಕ ಸುನೀಲ್ ಕುಮಾರ ಉಗ್ರಗಾಮಿ- ವಿವಾದ ಹುಟ್ಟುಹಾಕಿದ ರಮನಾಥ ರೈ

ಬಿಜೆಪಿ ಶಾಸಕ ಸುನೀಲ್ ಕುಮಾರ ಉಗ್ರಗಾಮಿ ಎಂದು ಸಚಿವ ರಮಾನಾಥ ರೈ ಅವರು ವಿವಾದ ಹುಟ್ಟುಹಾಕಿದ್ದಾರೆ.

news

ಪ್ರಾಣ ತೆಗೆಯುವ ಪಾಕಿಸ್ತಾನಿಯರಿಗೆ ಸಿಹಿ ಕೊಡದ ಭಾರತೀಯ ಯೋಧರು

ನವದೆಹಲಿ: ಸದಾ ಗಡಿಯಲ್ಲಿ ಅಪ್ರಚೋದಿತ ಗುಂಡಿನ ಮಳೆಗರೆಗೈದು ಪ್ರಾಣ ತೆಗೆಯುವ ಪಾಕಿಸ್ತಾನ ಯೋಧರಿಗೆ ...

news

ಗಣರಾಜ್ಯೋತ್ಸವ ದಿನಕ್ಕೂ ಕೇಂದ್ರಕ್ಕೆ ಟಾಂಗ್ ಕೊಡುವುದನ್ನು ಬಿಡಲಿಲ್ಲ ಪ್ರಕಾಶ್ ರೈ

ಬೆಂಗಳೂರು: ಗಣರಾಜ್ಯೋತ್ಸವ ದಿನವೂ ನಟ ಪ್ರಕಾಶ್ ರೈ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುವುದನ್ನು ...

Widgets Magazine
Widgets Magazine