ತ್ರಿಪುರಾದಿಂದ ಎಡರಂಗ ಮಕ್ತ ಮಾಡಿದ ಬಿಜೆಪಿ

ನವದೆಹಲಿ, ಶನಿವಾರ, 3 ಮಾರ್ಚ್ 2018 (16:19 IST)

ನವದೆಹಲಿ: ತ್ರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿಗೆ ತ್ರಿಪುರಾದಲ್ಲಿ ಭರ್ಜರಿ ಜಯ ದೊರಕಿದ್ದು, ಇದೀಗ ಮೇಘಾಲಯ, ನ್ಯಾಗಾಲ್ಯಾಂಡ್ ನಲ್ಲೂ ಸರ್ಕಾರ ರಚಿಸಲು ಕಸರತ್ತು ನಡೆಸಿದೆ.
 
ತ್ರಿಪುರಾದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷವನ್ನು ಸೋಲಿಸಿರುವ ಬಿಜೆಪಿ ಒಟ್ಟು 60 ಸ್ಥಾನಗಳ ಪೈಕಿ 43 ರಲ್ಲಿ ಗೆಲುವು ದಾಖಲಿಸಿದೆ. ಸಿಪಿಎಂಗೆ ಕೇವಲ 16 ಸ್ಥಾನ ಸಿಕ್ಕಿದೆ. ವಿಶೇಷವೆಂದರೆ ಇಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ.
 
ಮೇಘಾಲಯದಲ್ಲಿ 59 ಸ್ಥಾನಗಳ ಪೈಕಿ 21 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಇಲ್ಲಿ ಎನ್ ಪಿಪಿ ಮತ್ತು ಪಕ್ಷೇತರರು ತಲಾ 19 ಮತ್ತು 11 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಬಿಜೆಪಿಗೆ 2 ಸ್ಥಾನ ಸಿಕ್ಕಿದೆ. ಇಲ್ಲಿ ಕಾಂಗ್ರೆಸ್ ಗೆ ಸರ್ಕಾರ ರಚಿಸಬೇಕಾದರೆ ಇತರರು ಅಥವಾ ಎನ್ ಪಿಪಿ ಬೆಂಬಲ ಬೇಕೇ ಬೇಕು.
 
ನ್ಯಾಗಾಲ್ಯಾಂಡ್ ನಲ್ಲಿ 28 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಎನ್ ಪಿಎಫ್ 26 ಸ್ಥಾನ ಗೆದ್ದುಕೊಂಡಿದೆ. ಸರ್ಕಾರ ರಚಿಸಬೇಕಾದರೆ ಇಲ್ಲಿ ಬಿಜೆಪಿಗೆ ಪಕ್ಷೇತರ 6 ಸದಸ್ಯರ ಬೆಂಬಲ ಬೇಕು. ಹೀಗಾಗಿ ಪಕ್ಷೇತರರು ಇಲ್ಲಿ ನಿರ್ಣಾಯಕರಾಗಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೈಲ್ವೆ ಟಿಕೆಟ್‌ಗಳಲ್ಲಿ ಕನ್ನಡದ ಹವಾ !!

ಸಾಮಾನ್ಯ ಪ್ರಯಾಣದ (ಜನರಲ್‌ ಟಿಕೆಟ್‌) ರೈಲ್ವೆ ಟಿಕೆಟ್‌ಗಳ ಮೇಲೆ ಕನ್ನಡದಲ್ಲಿ ಮಾಹಿತಿ ನೀಡುವುದಾಗಿ ...

news

ವೈದ್ಯರೇ ಸೂಚಿಸಿದರೂ ಆಸ್ಪತ್ರೆಯಿಂದ ಬಿಡುಗಡೆಯಾಗದ ವಿದ್ವತ್!

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ನಿಂದ ಹಲ್ಲೆಗೊಳಗಾಗಿ ಮಲ್ಯ ...

news

ಮೋದಿ, ಅಮಿತ್ ಶಾ ಜೋಡಿಗೆ ಮುಖಭಂಗವಾಗುತ್ತಾ ತ್ರಿರಾಜ್ಯ ಚುನಾವಣೆ ಫಲಿತಾಂಶ?!

ನವದೆಹಲಿ: ತ್ರಿಪುರಾ, ನ್ಯಾಗಲಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಕೆಲ ...

news

ಯಡಿಯೂರಪ್ಪ ನಿರ್ಧಾರಕ್ಕೆ ಕಿಮ್ಮತ್ತಿನ ಬೆಲೆ ಕೊಡದ ಹೈಕಮಾಂಡ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ...

Widgets Magazine
Widgets Magazine