Widgets Magazine

100ಕ್ಕೂ ಅಧಿಕ ಜನರಿಂದ ಅತ್ಯಾಚಾರಕ್ಕೊಳಗಾಗಿದ್ದಾರೆನ್ನಲಾದ ಡೆಲ್ಲಿ ಮಾಡೆಲ್ ಪತ್ತೆಗೆ ಕೋರ್ಟ್ ಆದೇಶ

bengaluru, ಗುರುವಾರ, 16 ಮಾರ್ಚ್ 2017 (13:17 IST)

Widgets Magazine

ಪೊಲೀಸರು ಸೇರಿದಂತೆ 100ಕ್ಕೂ ಅಧಿಕ ಜನರಿಂದ ಅತ್ಯಾಚಾರ.. ನಿರಂತರ ಲೈಂಗಿಕ ದೌರ್ಜನ್ಯ ಹೀಗೊಂದು ಆರೋಪ ಮಾಡಿದ್ದ 24 ವರ್ಷದ ಮಾಡೆಲ್ ಮತ್ತು ನೇಪಾಳದ ಹದಿಹರೆಯದ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದು, ಪತ್ತೆಗೆ ಬಾಂಬೆ ಹೈಕೋರ್ಟ್ ಪುಣೆ ಪೊಲೀಸರಿಗೆ ಅದೇಶಿಸಿದೆ.
 


ಆರೋಪಗಳು ತೀರಾ ಗಂಭೀರವಾಗಿವೆ. ಸಂತ್ರಸ್ತರ ಬಗ್ಗೆ ನ್ಯಾಯಾಲಯ ಕಳವಳಗೊಂಡಿದ್ದು, ಅವರ ಪತ್ತೆಗೆ ಗಂಭೀರ ಪ್ರಯತ್ನ ನಡೆಸಿ ಎಂದು ಜಸ್ಟೀಸ್ ರಂಜಿತ್ ಮೋರ್ ಮತ್ತು ರೇವತಿ ದೆರೆ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.
 
ಪ್ರಕರಣದ ಸಿಬಿಐ ತನಿಖೆಗೆ ಕೋರಿದ್ದ ಅಡ್ವೋಕೇಟ್ ಅರ್ಜುನ್ ಕಪೂರ್, 6 ತಿಂಗಳಿಂದ ಸಂತ್ರಸ್ತರು ನಾಪತ್ತೆಯಾಗಿದ್ದು, ಆರೋಪಿಗಳ ಪಟ್ಟಿಯಲ್ಲಿ ಪೊಲೀಸರು ಇರುವುದರಿಂದ ಏನಾದರೂ ತೊಂದರೆಯಾಗಿರಬಹುದೆಂದು ಆತಂಕ ವ್ಯಕ್ತಪಡಿಸಿದ್ದರು.
 
ಇದೇವೇಳೆ, ತನಿಖಾಧಿಕಾರಿ ಕೋರ್ಟಿಗೆ ಹಾಜರಾಗದಿರುವ ಬಗ್ಗೆ ಮತ್ತು ಸಂತ್ರಸ್ತರು ತಮ್ಮ ದೂರಿನಲ್ಲಿ ಸೂಚಿಸಿದ್ದ ಪೊಲಿಸರು ವಕೀಲರಿಗೆ ಸೂಚನೆ ನೀಡುತ್ತಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೋರ್ಟ್, ಆಪಾದಿತರು ಡಿಫೆನ್ಸ್ ವಕೀಲರಿಗೆ ಸೂಚನೆ ನೀಡುವಂತಿಲ್ಲ ೆಂದು ತಾಕೀತು ಮ಻ಡಿದೆ.

ಇದೇವೇಳೆ, ಮಾರ್ಚ್ 31ರ ಮುಂದಿನ ವಿಚಾರಣೆ ವೇಳೆಗೆ ಕೋರ್ಟ್`ಗೆ ಹಾಜರಾಗುವಂತೆ ಪುಣೆ ಕಮೀಷನರ್, ಸರ್ಕಾರದ ಪರವಾಗಿ ಹಾಜರಾಗುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿದೆ.
 
 
ಮಾರ್ಚ್ 2016ರಂದು ನವದೆಹಲಿಯ ಮಾಡೆಲ್ ಸುಟ್ಟ ಗಾಯಗಳಿಂದ ಅಸ್ಪತ್ರೆಗೆ ದಾಖಲಾದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಸಿನಿಮಾದಲ್ಲಿ ನಟನೆಯ ಚಾನ್ಸ್ ಕೊಡಿಸುವುದಾಗಿ ನನ್ನನ್ನು ಮನೆಗೆ ಕರೆಸಿದ್ದ ರೋಹಿತ್ ಭಂಡಾರಿ ತನ್ನ ಸಹಚರರೊಡನೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಬೆಂಕಿ ಹಚ್ಚಿದ ಎಂದು ಆರೋಪಿಸಿದ್ದಳು. ಜೊತೆಗೆ ತಾನು ಮತ್ತು ತನ್ನ ಜೊತೆ ನೇಪಾಳಿ ಯುವತಿಯೊಬ್ಬಳನ್ನ ಮುಂಬೈ, ಭೋಪಾಲ್, ಬೆಂಗಲೂರು ಸೇರಿದಂತೆ ಇತರೆಡೆ ಸುತ್ತಿಸಿ ನೂರಾರು ಜನರಿಂದ ಅತ್ಯಾಚಾರ ನಡೆಸಿದ್ದಾಗಿ ಹೇಳಿಕೊಂಡಿದ್ದಳು.
 
 
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಧಾನಸಭೆಯಲ್ಲಿ ಡೈರಿ ಗಲಾಟೆ: ಕಲಾಪ ಮುಂದೂಡಿಕೆ

ಬೆಂಗಳೂರು: ಸದನದಲ್ಲಿ ಡೈರಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯಾಗಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ ...

news

ವಿಶ್ವಾಸ ಮತ ಗೆದ್ದ ಮನೋಹರ್ ಪರಿಕ್ಕರ್

ಪಣಜಿ: ಮನೋಹರ್ ಪರಿಕ್ಕರ್ 48 ಗಂಟೆಗಳ ಮುಖ್ಯಮಂತ್ರಿ ಎಂದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗೆ ...

news

ನಮ್ಮ ಕ್ಯಾಂಟೀನ್ ಆಹಾರ ಎಲ್ಲಿಂದ ಬರುತ್ತೆ ಗೊತ್ತಾ..?

ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್`ನಲ್ಲಿ ಜನಪ್ರಿಯ ನಮ್ಮ ಕ್ಯಾಂಟೀನ್ ಯೋಜನೆ ಘೋಷಿಸಿದ್ದಾರೆ. ಬೆಂಗಳೂರಿನ ...

news

ಪಂಜಾಬ್ ಸಿಎಂ ಆಗಿ ಅಮರೀಂದರ್ ಸಿಂಗ್ ಪದಗ್ರಹಣ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿ ...

Widgets Magazine Widgets Magazine