Widgets Magazine Widgets Magazine

ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ಯೋಧ ತೇಜ್ ಬಹದ್ದೂರ್ ಸೇವೆಯಿಂದ ವಜಾ

ನವದೆಹಲಿ, ಗುರುವಾರ, 20 ಏಪ್ರಿಲ್ 2017 (11:45 IST)

Widgets Magazine

ಬಿಎಸ್`ಎಫ್`ನಲ್ಲಿ ಯೋಧರಿಗೆ ನೀಡಲಾಗುತ್ತಿದ್ದ ಅನಾರೋಗ್ಯಕರ ಆಹಾರ ಸೇರಿದಂತೆ ಸೇನಾ ಅಕ್ರಮಗಳ ಬಗ್ಗೆ ಫೇಸ್ಬುಕ್`ನಲ್ಲಿ ಬಟಾ ಬಯಲು ಮಾಡಿದ್ದ ಬಿಎಸ್`ಎಫ್ ತೇಜ್ ಬಹದ್ದೂರ್ ಅವರನ್ನ ಸೇನೆಯಿಂದ ಉಚ್ಚಾಟಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾದಲ್ಲಿ ಸತತ 3 ತಿಂಗಳಿನಿಂದ ನಡೆದ ಕೋರ್ಟ್ ಮಾರ್ಷಲ್ ವಿಚಾರಣೆ ಬಳಿಕ ಸಮ್ಮರಿ ಸೆಕ್ಯೂರಿಟಿ ಕೋರ್ಟ್ ಸೇವೆಯಿಂದ ವಜಾಗೊಳಿಸಿದೆ.


ಕಳಪೆ ಆಹಾರದ ವಿಡಿಯೋವನ್ನ ಫೇಸ್ಬುಕ್`ಗೆ ಅಪ್ಲೋಡ್ ಮಾಡುವ ಮೂಲಕ ತೇಜ್ ಬಹದ್ದೂರ್ ಬಿಎಸ್ಎಫ್ ಘನತೆಗೆ ಧಕ್ಕೆಯುಂಟುಮಾಡಿರುವುದು ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಸೇನಾ ಕೋರ್ಟ್ ಹೇಳಿದೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ತೇಜ್ ಬಹದ್ದೂರ್, ಈ ಮೊದಲು ನಿವೃತ್ತಿ ಮತ್ತು ಪೆನ್ಷನ್ ದಾಖಲೆ ಸಿದ್ಧಪಡಿಸಿಕೊಳ್ಳಲು ಹೇಳಲಾಗಿತ್ತು. ಇದೀಗ, ಏಕಾಏಕಿ ಸೇವೆಯಿಂದ ವಜಾಗೊಳಿಸಲಾಗಿದೆ. ಇದು ಪೂರ್ವ ಯೋಜಿತ ವಿಚಾರಣೆ. ಈಗ ನನಗೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವುದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಭ್ರಷ್ಟಾಚಾರ ಬಯಲಿಗೆ ನಾನು ಮುಂದಾಗಿದ್ದೆ. ಆದರೆ, ನನ್ನ ಮಾತು ಯಾರಿಗೂ ಕೇಳಿಸಿಲ್ಲ. ಯೋಧರನ್ನ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ..?

ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಯಾರಾದರೂ ವಾಮಾಚಾರ ...

news

ಅಂಬರೀಷ್ ಮನೆಗೆ ಸಿಎಂ ದಿಢೀರ್ ಭೇಟಿ: ಕುತೂಹಲ ಕೆರಳಿಸಿದ ಮಾತುಕತೆ

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ಮಾಜಿ ಸಚಿವ ಅಂಬರೀಷ್ ಮನೆಗೆ ತೆರಳಿ ...

news

ದಿನಕರನ್`ಗೆ ಮಧ್ಯರಾತ್ರಿ ದೆಹಲಿ ಪೊಲೀಸರ ಸಮನ್ಸ್

ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಸಮನ್ಸ್ ಜಾರಿಮಾಡಿದ್ದಾರೆ. ಪಕ್ಷದ ...

news

ಎಚ್.ಡಿ. ಕುಮಾರಸ್ವಾಮಿ ಮೇಲೆ ನೋಟಿನ ದಾಳಿ

ಮಂಡ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೇಲೆ ಕಾರ್ಯಕರ್ತನೊಬ್ಬ ನೋಟುಗಳ ಕಂತೆ ಕಂತೆಯನ್ನು ...

Widgets Magazine Widgets Magazine