Widgets Magazine
Widgets Magazine

ಬಿಎಸ್ಎಫ್ ಯೋಧನ ವಿಡಿಯೋ ಆರೋಪ; ತನಿಖೆಗೆ ಆದೇಶ

ನವದೆಹಲಿ, ಮಂಗಳವಾರ, 10 ಜನವರಿ 2017 (14:56 IST)

Widgets Magazine

ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತದೆ ಎಂದು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಬಿಎಸ್​ಎಫ್ ಇನ್​ಸ್ಪೆಕ್ಟರ್ ಜನರಲ್ ಡಿ.ಕೆ. ಉಪಾಧ್ಯಾಯ ಮತ್ತು ಡಿಐಜಿ ಎಂಡಿಎಸ್ ಮಾನ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

 
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ತನಿಖೆ ನಡೆಸಲಾಗುವುದು. ಆರೋಪದಲ್ಲಿ ಹುರುಳಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
 
ಜತೆಗೆ ಕರ್ತವ್ಯ ನಿರತರಾಗಿದ್ದಾಗ ಮೊಬೈಲ್ ಇಟ್ಟುಕೊಳ್ಳುವುದು ನಿಯಮಬಾಹಿರ. ಈ ಕುರಿತು ಸಹ ತನಿಖೆ ನಡೆಸಲಾಗುವುದು. 
ನಿಷ್ಪಕ್ಷಪಾತ ತನಿಖೆಗಾಗಿ ಸೈನಿಕನನ್ನು ಬೇರೆ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೊಳಪಡಿಸಲಾಗುವುದು ಎಂದಿದ್ದಾರೆ  ಡಿ.ಕೆ. ಉಪಾಧ್ಯಾಯ. 
 
ಬಿಎಸ್ಎಫ್ 29 ನೇ ಬೆಟಾಲಿಯನ್ ಯೋಧ ತೇಜ್ ಬಹಾದ್ದೂರ್ ಯಾದವ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮ್ಮ ದುಃಸ್ಥಿತಿಯನ್ನು ಬಿಚ್ಚಿಟ್ಟಿದ್ದು ಈ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ. 
 
ಬೆಳಗಿಂದ ಸಂಜೆಯವರೆಗೂ 11-12 ಗಂಟೆಗಳ ಕಾಲ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ನಿರಂತರವಾಗಿ ಗಡಿ ಕಾಯುತ್ತೇವೆ. ಆದರೆ ನಮಗೆ ನೀಡುವ ಬೆಳಗಿನ ಉಪಹಾರ ಅರಿಶಿಣ ಮಿಶ್ರಿತ ದಾಲ್, ಒಣಗಿದ ಪರೋಟಾ. ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಬೆಳಗಿನ ಉಪಹಾರಕ್ಕೆ ಸೀದು ಹೋಗಿರುವ ಆಹಾರವನ್ನು ನೀಡಲಾಗುತ್ತದೆ. ನಮಗೆ ಸಿಗುವ ರೇಷನ್‌ನಲ್ಲೂ ಮೇಲಾಧಿಕಾರಿಗಳ ಗೋಲ್ ಮಾಲ್ ಇರುತ್ತದೆ. ನಮ್ಮ ಪರಿಸ್ಥಿತಿ ಬಗ್ಗೆ ಯಾವುದೇ ಮಾಧ್ಯಮಗಳಲ್ಲಿ ತೋರಿಸಲಾಗುವುದಿಲ್ಲ, ಎಂದು ಸ್ಪೋಟಕ ಸತ್ಯವನ್ನು ಹೊರಹಾಕುವ ಧೈರ್ಯ ತೋರಿದ್ದಾನೆ ಸೈನಿಕ. ಈ ಕುರಿತು ಗಮನ ನೀಡುವಂತೆ ಅವರು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ಎಫ್ ಯಾದವ್ ಮದ್ಯವ್ಯಸನಿಯಾಗಿದ್ದು, ಅವರಿಗೆ ನಿಯಮಿತ ಆಪ್ತಸಮಾಲೋಚನೆ ಅಗತ್ಯವಿದೆ ಎಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಎಸ್ಎಫ್ ಯೋಧ ವಿಡಿಯೋ ತನಿಖೆ Jawan Food 'soldier Alcoholic Tej Bahadur Bsf Respond

Widgets Magazine

ಸುದ್ದಿಗಳು

news

ಬಿಜೆಪಿ ಅಧಿಕಾರಕ್ಕೇ ಬಂದಿಲ್ಲ, ಅದಾಗಲೇ ಸಿಎಂ ಸ್ಥಾನಕ್ಕಾಗಿ ಯಡ್ಡಿ, ಈಶು ಪೈಪೋಟಿ

ರಾಜ್ಯದಲ್ಲಿ ಇನ್ನೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿಲ್ಲ. ಈಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ...

news

ದೊಡ್ಡ ಮನಸ್ಸು ಮಾಡಿ ತಾಯಿಯನ್ನು ಜತೆಗಿಟ್ಟುಕೊಳ್ಳಿ: ಮೋದಿಗೆ ಕೇಜ್ರಿ ಸಲಹೆ

ಪ್ರಧಾನಿ ನಿವಾಸ ಸಾಕಷ್ಟು ದೊಡ್ಡದಿದೆ, ದೊಡ್ಡ ಮನಸ್ಸು ಮಾಡಿ ನಿಮ್ಮ ತಾಯಿಯನ್ನು ಜತೆಗಿಟ್ಟುಕೊಳ್ಳಿ ಎಂದು ...

news

ವೈದ್ಯರ ಮೇಲೆ ಹಲ್ಲೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಚಿವ ರಮೇಶ್ ಕುಮಾರ್

ವೈದ್ಯರು ನನ್ನ ಇಲಾಖೆ ಕುಟುಂಬದವರು. ಅವರ ಮೇಲೆ ಹಲ್ಲೆ ಸಡೆಸಿದರೆ ನಾನು ಸುಮ್ಮನೆ ಕೂರಲು ಸಾಧ್ಯವಿಲ್ಲ. ...

news

ಬ್ರಿಗೇಡ್ ದೊಡ್ಡ ನಾಯಕರಿಗೆ ಸಂಬಂಧಿಸಿದ ವಿಷಯ: ಶೋಭಾ ಕರಂದ್ಲಾಜೆ ಟಾಂಗ್

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಮಾತನಾಡುವುದಿಲ್ಲ. ಇದು ದೊಡ್ಡ ನಾಯಕರಿಗೆ ಸಂಬಂಧಿಸಿದ ವಿಷಯ ಎಂದು ...

Widgets Magazine Widgets Magazine Widgets Magazine