ಬುಲೆಟ್ ರೈಲು ಯೋಜನೆ ನೋಟು ನಿಷೇಧದಂತೆ ವಿನಾಶಕಾರಿ: ಚಿದಂಬರಂ

ನವದೆಹಲಿ, ಶನಿವಾರ, 30 ಸೆಪ್ಟಂಬರ್ 2017 (17:16 IST)

ಕೇಂದ್ರ ಸರಕಾರದ ಬುಲೆಟ್ ರೈಲು ಯೋಜನೆ ಕೂಡಾ ನೋಟು ನಿಷೇಧದಂತಹ ನಡೆಯಾಗಿದ್ದು ಸರ್ವನಾಶ ಮಾಡಲಿದೆ. ಬುಲೆಟ್ ರೈಲು ಯೋಜನೆ ಕೈ ಬಿಟ್ಟು  ರೈಲು ಸುರಕ್ಷತೆಗೆ ಹೆಚ್ಚಿನ ಹಣ ವ್ಯಯ ಮಾಡುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪರೇಲ್ ಮತ್ತು ಎಲ್ಫಿನ್‌ಸ್ಟೋನ್ ರೈಲ್ವೆ ನಿಲ್ದಾಣಗಳಲ್ಲಿ ನಡೆದ ಕಾಲ್ತುಳಿತದಲ್ಲಿ 23 ಜನರು ಸಾವನ್ನಪ್ಪಿದ ಘಟನೆ ನಂತರ ಚಿದಂಬರಂ ಹೇಳಿಕೆ ಹೊರಬಿದ್ದಿದೆ.
 
ಮುಂಬೈ ಮತ್ತು ಅಹ್ಮದಾಬಾದ್‌ ನಗರಗಳನ್ನು ಸಂಪರ್ಕಿಸುವ ಬುಲೆಟ್ ರೈಲು ಯೋಜನೆ ಸಾಮಾನ್ಯ ಜನರಿಗೆ ಅಲ್ಲ, ಆದರೆ "ಉನ್ನತ ಮತ್ತು ಪ್ರಬಲರ ಪ್ರತಿಷ್ಠೆಯ ಪ್ರವಾಸವಾಗಿದೆ ಎಂದು ಆರೋಪಿಸಿದ್ದಾರೆ.
 
ಕೇಂದ್ರದ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಬುಲೆಟ್ ರೈಲಿಗೆ ಮೀಸಲಾಗಿಟ್ಟ ಒಂದು ಲಕ್ಷ ಕೋಟಿ ಹಣವನ್ನು ರೈಲ್ವೆ ಸುರಕ್ಷತೆಗಾಗಿ ಬಳಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. 
 
"ಬುಲೆಟ್ ಟ್ರೈನ್ ಯೋಜನೆ ನೋಟು ನಿಷೇಧದಂತೆ. ಅದು ಸುರಕ್ಷತೆ ಸೇರಿದಂತೆ ಎಲ್ಲವನ್ನೂ ಕೊಲ್ಲುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಮಿಳುನಾಡು ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

ನವದೆಹಲಿ: ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಐವರು ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ

news

ಗೋವು ರಕ್ಷಣೆಗಾಗಿ ಮುಸ್ಲಿಮರೂ ಪ್ರಾಣ ತ್ಯಾಗ ಮಾಡಿದ್ದಾರೆ: ಭಾಗವತ್

ಮುಂಬೈ: ಗೋವು ರಕ್ಷಣೆಯಲ್ಲಿ ಕೆಲ ಮುಸ್ಲಿಮರು ಕೂಡಾ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ...

news

ಜಂಬೂಸವಾರಿ ಮೆರವಣಿಗೆ ರಂಗು ನೀಡಿದ ಸ್ತಬ್ದಚಿತ್ರಗಳು

ಮೈಸೂರು: ಜಂಬೂಸವಾರಿ ದಸರಾದ ಪ್ರಮುಖ ಆಕರ್ಷಣೆ. ರಾಜ್ಯದ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತುಶಿಲ್ಪ ಮತ್ತು ...

news

ರೈಲು ದುರಂತ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪದೇ ಪದೇ ಸಂಭವಿಸುತ್ತಿರುವ ರೈಲು ದುರಂತದ ಬಗ್ಗೆ ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಪ್ರಧಾನಿ ಮೋದಿ ...

Widgets Magazine
Widgets Magazine