ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ಅಪಘಾತ: 16 ಯಾತ್ರಿಕರ ಸಾವು

ಜಮ್ಮು ಕಾಶ್ಮಿರ, ಭಾನುವಾರ, 16 ಜುಲೈ 2017 (16:33 IST)

ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಬಸ್ ರಾಮಬನ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದರಿಂದ 16 ಯಾತ್ರಿಕರು ಸಾವನ್ನಪ್ಪಿದ್ದು, 35 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ಕಾರ್ಯಾಚರಣೆಗೆ ಮುಂದಾಗಿದ್ದು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಕೆಲ ದಿನಗಳ ಹಿಂದೆ ಅಮರನಾಥ್ ಯಾತ್ರಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದಾಗ ಎಂಟು ಮಂದಿ ಹತರಾಗಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು ಸ್ಮರಿಸಬಹುದು.
 
ಖಾಸಗಿ ಬಸ್ ಚಾಲಕ ಸಲೀಂ ತೋರಿದ ಅಪ್ರತಿಮ ಧೈರ್ಯದಿಂದಾಗಿ ಪ್ರಯಾಣಿಕರು ಉಗ್ರರ ಕಪಿಮುಷ್ಠಿಯಿಂದ ಪಾರಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಂದಕಕ್ಕೆ ಉರುಳಿದ ಬಸ್: 11 ಅಮರನಾಥ ಯಾತ್ರಿಕರ ದಾರುಣ ಸಾವು

ಅಮರನಾಥ ಯಾತ್ರಿಕರು ತೆರಳುತ್ತಿದ್ದ ಖಾಸಗಿ ಬಸ್ಸೊಂದು ಕಣಿವೆಗೆ ಉರುಳಿ ಬಿದ್ದ ಪರಿಣಾಮ 11 ಮಂದಿ ...

news

ಈಶ್ವರಪ್ಪ ಪಿಎ ಅಪಹರಣದಲ್ಲಿ ಸಂತೋಷ್ ಪಾತ್ರವಿಲ್ಲ: ಆಯಕ್ತರಿಗೆ ಬಿಎಸ್‌ವೈ ಪತ್ರ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ...

news

ರಾಷ್ಟ್ರಧ್ವಜದ ಮೇಲೆ ಮೂತ್ರ ಮಾಡಿ ವಿಡಿಯೋ ಪೋಸ್ಟ್ ಮಾಡಿದ ಅಮೆರಿಕ ಮಹಿಳೆ

ವಾಷಿಂಗ್ಟನ್: ರಾಷ್ಟ್ರಧ್ವಜದ ಮೇಲೆ ಮೂತ್ರ ಮಾಡುತ್ತಿದ್ದ ಚಿತ್ರವನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ...

news

ಗೆಳೆಯರನ್ನು ಕರೆಸಿ ಪತ್ನಿಯ ಮೇಲೆ ರೇಪ್ ಮಾಡುವಂತೆ ಒತ್ತಾಯಿಸುತ್ತಿದ್ದ ಪತಿ ಅರೆಸ್ಚ್

ಪಾಟ್ನಾ: ಪತಿ ಮತ್ತು ಆತನ ಗೆಳೆಯರು ಹಲವಾರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿರುವುದನ್ನು ...

Widgets Magazine