ಮಹಿಳಾ ನ್ಯಾಯಮೂರ್ತಿಯನ್ನೇ ಅಪಹರಿಸಲು ಯತ್ನಿಸಿದ ಕ್ಯಾಬ್ ಚಾಲಕ

ನವದೆಹಲಿ, ಮಂಗಳವಾರ, 28 ನವೆಂಬರ್ 2017 (13:10 IST)

ಮಹಿಳಾ ನ್ಯಾಯಮೂರ್ತಿಯನ್ನು ಅಪಹರಿಸಲು ಯತ್ನಿಸಿದ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
 
ನನ್ನನ್ನು ಕಾರ್ಕರ್‌ಡೊಮಾ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ಬದಲಿಗೆ ಎನ್‌ಎಚ್ 24 ರಸ್ತೆಯಲ್ಲಿರುವ ಹಾಪುರ್‌ನತ್ತ ಕರೆದುಕೊಂಡು ಹೋಗಿದ್ದಾನೆ ಎಂದು ಮಹಿಳಾ ನ್ಯಾಯಮೂರ್ತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.   
 
ಕ್ಯಾಬ್ ಚಾಲಕ ಬೇರೆ ರಸ್ತೆಯತ್ತ ಕಾರು ಚಾಲನೆ ಮಾಡತೊಡಗುತ್ತಿದ್ದಂತೆ ಮಹಿಳಾ ನ್ಯಾಯಮೂರ್ತಿ, ಪೊಲೀಸರಿಗೆ ಮತ್ತುತಮ್ಮ ಸಹದ್ಯೋಗಿಗಳಿಗೆ ಮೊಬೈಲ್ ಕರೆ ಮಾಡಿ ಎಚ್ಚರಿಸಿದ್ದಾರೆ ಎನ್ನಲಾಗಿದೆ.
 
ಕ್ಯಾಬ್ ಚಾಲಕ ವೇಗವಾಗಿ ಕಾರು ಚಾಲನೆ ಮಾಡುತ್ತಿರುವಂತೆ ಪೊಲೀಸರು ಗಾಜಿಪುರ್ ಟೋಲ್ ಪ್ಲಾಜಾ ಬಳಿ ಕಾರನ್ನು ತಡೆದು ಆರೋಪಿಯನ್ನು ಬಂಧಿಸಿದ್ದಾರೆ.  
 
ಕ್ಯಾಬ್ ಚಾಲಕ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ಘಟನೆಯ ಹಿಂದಿರುವ ಸಂಚಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಗೌತಮ್ ಬುದ್ಧರಂತೆ: ಪರೇಶ್ ರಾವಲ್

ವಡೋದರಾ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೌತಮ ಬುದ್ಧರಂತಿರುವ ಪ್ರಧಾನಿ ನರೇಂದ್ರ ಮೋದಿ ತವರಿನಲ್ಲಿ ...

news

ಗುಜರಾತ್ ಚುನಾವಣೆ ಪ್ರಚಾರಕ್ಕೆ ನಾನು ಹೋಗಲ್ಲ: ಸಿಎಂ

ಬೆಂಗಳೂರು: ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನಾನು ಹೋಗುವುದಿಲ್ಲ. ಹೈಕಮಾಂಡ್‌ನಿಂದ ಯಾವುದೇ ...

news

ಕತ್ತೆಯೂ ಜೈಲಿಗೆ ಹೋಗಿ ಬಂತು!

ಲಕ್ನೋ: ತಪ್ಪು ಮಾಡಿದವರಿಗೆ ಜೈಲು ಶಿಕ್ಷೆ ಗ್ಯಾರಂಟಿ. ಅದು ನಮ್ಮ ದೇಶದ ಕಾನೂನು. ಆದರೆ ಉತ್ತರ ಪ್ರದೇಶದ ...

news

ಸಿಕ್ಕ ಸಿಕ್ಕಲೆಲ್ಲಾ ಕೈ ಹಾಕುತ್ತಿದ್ದ ಕಾಮುಕ ಟೀಂ ಲೀಡರ್!

ಬೆಂಗಳೂರು: ಐಟಿ ಕೇಂದ್ರವೆನಿಸಿರುವ ಪ್ರತಿಷ್ಠಿತ ಟೆಕ್ ಪಾರ್ಕ್ ನಲ್ಲಿ ಮಹಿಳಾ ಉದ್ಯೋಗಿಗೆ ಟೀಂ ಲೀಡರ್ ...

Widgets Magazine
Widgets Magazine