Widgets Magazine
Widgets Magazine

ವಿಶ್ವದ ಅತಿ ಕಿರಿಯ ವಯಸ್ಸಿನ ಬೋಯಿಂಗ್ 777 ಕಮಾಂಡರ್ ಆದ ಆ್ಯನಿ

ಹೈದ್ರಾಬಾದ್, ಭಾನುವಾರ, 9 ಜುಲೈ 2017 (15:08 IST)

Widgets Magazine

ಹೈದ್ರಾಬಾದ್:ದೈತ್ಯ ಬೋಯಿಂಗ್ 777 ವಿಮಾನದ ಕಮಾಂಡರ್ ಆಗುವ ಮೂಲಕ ಭಾರತೀಯ ಮೂಲದ ಆ್ಯನಿ ದಿವ್ಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ದೇಶದ ಕೀರ್ತಿ ಮೆರೆದಿದ್ದಾರೆ. ತಮ್ಮ 30ನೇ ವಯಸ್ಸಿನಲ್ಲಿ ದಿವ್ಯಾ ಪೈಲಟ್ ಆಗಿದ್ದು, ಬೋಯಿಂಗ್ 777 ವಿಮಾನದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
 
ಆ್ಯನಿ ದಿವ್ಯಾ ಜನಿಸಿದ್ದು ಪಂಜಾಬ್ ಪಠಾಣ್ ಕೋಟ್ ನಲ್ಲಿ. ಅವರ ತಂದೆ ನಿವೃತ್ತ ಸೈನಿಕರಾಗಿದ್ದು, ಅವರು ಸೇನೆಯಿಂದ ನಿವೃತ್ತರಾದ ಬಳಿಕ ಅವರ ಕುಟುಂಬ ಆಂಧ್ರ ಪ್ರದೇಶದ ವಿಜಯವಾಡಕ್ಕೆ ಸ್ಥಳಾಂತರವಾಗಿತ್ತು. ಆಗಿನ್ನೂ ದಿವ್ಯಾ ಚಿಕ್ಕವಳು. ಚಿಕ್ಕವಯಸ್ಸಿನಿಂದಲೇ ಆಂಧ್ರ ಪ್ರದೇಶದಲ್ಲಿ ಬೆಳೆದ ದಿವ್ಯಾಗೆ ಪೈಲಟ್ ಆಗಬೇಕು ಎಂಬ ಮಹದಾಸೆ ಇತ್ತಂತೆ.  ಅದೇ ನಿಟ್ಟಿನಲ್ಲಿ ಅಭ್ಯಾಸ ಮಾಡಿದ ದಿವ್ಯಾ ಕೊನೆಗೂ ಪೈಲಟ್ ಆಗುವ ಮೂಲಕ ಕನಸನ್ನು ನನಸಾಗಿಸಿಕೊಂಡಿದ್ದಾರೆ.
 
ಮಧ್ಯಮವರ್ಗದ ಕುಟುಂಬದಿಂದ ಯುವತಿ ಹಲವಾರು ಏಳುಬೀಳುಗಳನ್ನು ಎದುರಿಸಿ ಇಂದು ಬೋಯಿಂಗ್ ವಿಮಾನದ ಕಮಾಂಡರ್ ಆಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಕೀರ್ತಿತಂದಿದ್ದಾರೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೋಮು ಗಲಭೆಗೆ ಪ್ರಚೋದನೆ ನೀಡುವ ಫೇಕ್ ಇಮೇಜ್ ಶೇರ್: ಬಿಜೆಪಿ ಬೆಂಬಲಿಗ ಅರೆಸ್ಟ್

ಪಶ್ಚಿಮ ಬಂಗಾಳದ ಬದುರಿಯಾ ಮತ್ತು ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ...

news

ಚೀನಾಗೆ ಮತ್ತಷ್ಟು ಶಾಕ್ ಕೊಡಲು ಮುಂದಾದ ಭಾರತ

ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ದೊಕ್ಲಾಮ್ ವಿಚಾರವಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವ ...

news

ಮಧ್ಯರಾತ್ರಿಯಾದ್ರೆ ಮೆಟ್ರೋ ರೈಲಿಗೆ ಹತ್ತಕ್ಕೂ ಭಯ..!

ಬೆಂಗಳೂರು: ಮೆಟ್ರೋ ರೈಲು ಬೆಂಗಳೂರಿನಲ್ಲಿ ಓಡಾಡಲು ಪ್ರಾರಂಭಿಸಿದ ಮೇಲೆ ನಮ್ಮ ರಾಜಧಾನಿಗೊಂದು ಗರಿಮೆ ಎಂದು ...

news

ಬಂಟ್ವಾಳ ಈಗ ಬೂದಿ ಮುಚ್ಚಿದ ಕೆಂಡ

ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವಿನಿಂದಾಗಿ ಉದ್ವಿಗ್ನ ಸ್ಥಿತಿಗೆ ತಲುಪಿರುವ ದ. ಕನ್ನಡ ...

Widgets Magazine Widgets Magazine Widgets Magazine