ಕಾರು ಅಪಘಾತದಲ್ಲಿ ಪ್ರಧಾನಿ ಮೋದಿ ಪತ್ನಿಗೆ ಗಾಯ

ರಾಜಸ್ತಾನ, ಬುಧವಾರ, 7 ಫೆಬ್ರವರಿ 2018 (12:56 IST)

ರಾಜಸ್ತಾನ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್‌ ಮತ್ತು ಇಬ್ಬರು ಮಹಿಳೆಯರು ಪಯಣಿಸುತ್ತಿದ್ದ ಕಾರು ಇಂದು ಬೆಳಿಗ್ಗೆ ಅಪಘಾತಕ್ಕೀಡಾಗಿದ್ದು, ಜಶೋದಾಬೆನ್‌ ಅವರು ಗಾಯಗೊಂಡಿದ್ದು ಅವರನ್ನು ಚಿತ್ತೋರ್‌ಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮೋದಿ ಪತ್ನಿ ಜಶೋದಾಬೆನ್‌ ಅವರು ಕೋಟ ಸಮೀಪದ ಬಾರಾನ್‌ ಜಿಲ್ಲೆಯಲ್ಲಿನ ತಮ್ಮ ಬಂಧುಗಳನ್ನು ಭೇಟಿಯಾಗಿ ಗುಜರಾತ್‌ಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತಕ್ಕೆ ಕಾರಣವೇನು ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. ಬೆಳಗ್ಗೆ 10 ಗಂಟೆ ಸುಮಾರಿಗೆ ಟ್ರೈಲರ್‌ ಟ್ರಕ್‌ಗೆ ಡಿಕ್ಕಿ ಹೊಡೆಯಿತು ಎಂದು ಮೂಲಗಳು ತಿಳಿಸಿವೆ. ಅಪರಿಚಿತ ಟ್ರಕ್‌ ಚಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ! ಮೋದಿ ರೋಷಾವೇಷ!

ನವದೆಹಲಿ: ಸಂಸತ್ತಿನಲ್ಲಿ ಇಂದು ಪ್ರಧಾನಿ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ...

news

ರಮ್ಯಾ ಪರವಾಗಿ ಹೆಚ್ ಆಂಜನೇಯ ಬ್ಯಾಟಿಂಗ್!

ಬೆಂಗಳೂರು : ‘ಕೈ’ ಕಾರ್ಯಕರ್ತರಿಗೆ ಫೇಕ್ ಅಕೌಂಟ್ ಪಾಠ ವಿಚಾರಕ್ಕೆ ಸಂಬಂಧಿಸಿದಂತೆ ಇದೆಲ್ಲಾ ಸೃಷ್ಠಿ, ಆ ...

news

ಕುಡಿದ ಅಮಲಿನಲ್ಲಿ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ತಂದೆ

ಕಾರವಾರ : ಕುಡಿದ ಅಮಲಿನಲ್ಲಿ ತಂದೆಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಸಿದ ಘಟನೆ ...

news

ತಾರಕಕ್ಕೇರಿದ ತಾರೆಗಳ ಜಗಳ: ನಶೆ ರಾಣಿ ರಮ್ಯಾ ಅಂದ್ರು ಶಿಲ್ಪಾ ಗಣೇಶ್, ಅರ್ಧಬೆಂದ ಮಡಕೆ ಎಂದರು ಜಗ್ಗೇಶ್! (ವಿಡಿಯೋ)

ಬೆಂಗಳೂರು: ನಟಿ ರಮ್ಯಾ ಮತ್ತು ಬಿಜೆಪಿ ನಾಯಕರ ನಡುವಿನ ಟ್ವಿಟರ್ ವಾರ್ ಇನ್ನೂ ಮುಂದುವರಿದಿದೆ. ರಮ್ಯಾ ...

Widgets Magazine
Widgets Magazine