Widgets Magazine
Widgets Magazine

ಕಾವೇರಿ ವಿವಾದ: ಆದೇಶ ಮಾರ್ಪಾಡು ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ, ಶುಕ್ರವಾರ, 7 ಏಪ್ರಿಲ್ 2017 (15:09 IST)

Widgets Magazine

ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಾಡುಗೊಳಿಸುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗಳಿಸಿದೆ.
 
ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.
 
ಸುಪ್ರೀಂಕೋರ್ಟ್, 2016 ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 30 ರವರೆಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸರಕಾರಕ್ಕೆ ಆದೇಶಿಸಿತ್ತು. ಆದರೆ, ಕಾವೇರಿ ಜಲಾನಯನದಲ್ಲಿ ಕುಡಿಯುವ ನೀರಿಗೆ ಕೊರತೆ ಎದುರಾಗಿದ್ದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎನ್ನುವುದು ರಾಜ್ಯದ ವಾದವಾಗಿತ್ತು. 
 
ರಾಜ್ಯದ ಕಾವೇರಿ ಕಣಿವೆಯಲ್ಲಿ ನೀರಿಲ್ಲದ ಕಾರಣ ಆದೇಶ ಮಾರ್ಪಾಡು ಮಾಡುವಂತೆ ಕರ್ನಾಟಕ ಸರಕಾರ ಅರ್ಜಿ ಸಲ್ಲಿಸಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಮತ್ತೆ ರಾಜ್ಯಕ್ಕೆ ಬರೆ ನೀಡಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಯಾವುದೇ ಸಂಚಾರಿ ನಿರ್ಬಂಧ ಹೇರದೆ ಟ್ರಾಫಿಕ್`ನಲ್ಲೇ ಶೇಖ್ ಹಸೀನಾ ಸ್ವಾಗತಕ್ಕೆ ತೆರಳಿದ ಮೋದಿ

ಪ್ರಧಾನಮಂತ್ರಿ ನರೇಂದ್ರಮೋದಿ ಯಾವುದೇ ಸಂಚಾರ ನಿರ್ಬಂಧ ಹೇರದೇ ಮಧ್ಯಾಹ್ನದ ಗಿಜಿ ಗಿಜಿ ಟ್ರಾಫಿಕ್`ನಲ್ಲೇ ...

news

ಶ್ರೀನಿವಾಸ್ ಪ್ರಸಾದ್ ಸಮಯ ಸಾಧಕ ರಾಜಕಾರಣಿ: ಸಂಸದ ಧೃವನಾರಾಯಣ್

ನಂಜನಗೂಡು: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸಮಯ ಸಾಧಕ ರಾಜಕಾರಣಿ ಎಂದು ಕಾಂಗ್ರೆಸ್ ಸಂಸದ ಆರ್. ...

news

ಚೆನ್ನೈ: ಐಟಿ ದಾಳಿ ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ: ಎಐಎಡಿಎಂಕೆ

ಚೆನ್ನೈ: ನಗರದಲ್ಲಿ ಇಂದು 32 ಕಡೆ ನಡೆದ ಐಟಿ ದಾಳಿಯ ಹಿಂದೆ ಬಿಜೆಪಿ, ಆರೆಸ್ಸೆಸ್ ಕೈವಾಡವಿದೆ ಎಂದು ...

news

ಉಪಚುನಾವಣೆ ಪ್ರಚಾರ: ಜೆಡಿಎಸ್ ಬಂಡಾಯ ಶಾಸಕರಲ್ಲಿಯೇ ಭಿನ್ನಮತ

ಮೈಸೂರು: ಉಪಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುವ ಕುರಿತಂತೆ ಜೆಡಿಎಸ್ ಬಂಡಾಯ ...

Widgets Magazine Widgets Magazine Widgets Magazine