ಯುದ್ಧಕ್ಕೆ ಸನ್ನದ್ಧ: ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸೇನೆಗೆ ಹಣಕಾಸು ಅಧಿಕಾರ ನೀಡಿದ ಕೇಂದ್ರ

ನವದೆಹಲಿ, ಗುರುವಾರ, 13 ಜುಲೈ 2017 (10:28 IST)

ನವದೆಹಲಿ: ಒಂದೆಡೆ ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಕೂದ ನಡೆಯುತ್ತಿರುವ ಹಿನ್ನಲೆಯಲ್ಲಿ ಯುದ್ಧ ಸನ್ನದ್ಧ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಸೇನೆಗೆ ಸೂಚನೆ ನೀಡಿದೆ. 
 
46 ವಿಧದ ಮದ್ದುಗುಂಡುಗಳು ಮತ್ತು 10 ಬಗೆಯ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಸೇನೆಗೆ ಪೂರ್ಣ ಹಣಕಾಸು ಅಧಿಕಾರ ನೀಡಲಾಗಿದೆ. ಪೂರ್ಣ ಪ್ರಮಾಣದ ಶಸ್ತ್ರಾಸ್ತ್ರ ವ್ಯವಸ್ಥೆಗಾಗಿ ರೂ.40,000 ಕೋಟಿ ವೆಚ್ಚವಾಗಬಹುದು ಎನ್ನಲಾಗಿದೆ. 
 
ಸೇನೆಯಲ್ಲಿ ಮದ್ದುಗುಂಡುಗಳ ಭಾರೀ ಕೊರತೆ ಇದೆ ಎಂದು 2015ರಲ್ಲಿಯೇ ಸಿಎಜಿ ವರದಿಯಲ್ಲಿ ತಿಳಿಸಿತ್ತು. 40 ದಿನಗಳ ಯುದ್ಧಕ್ಕೆ ಸಾಕಾಗುವಷ್ಟು ಮದ್ದುಗುಂಡು ಸಂಗ್ರಹದಲ್ಲಿ ಇರಬೇಕು ಎಂಬುದು ನಿಯಮ. ಆದರೆ, ಮದ್ದುಗುಂಡುಗಳ ಭಾರೀ ಕೊರತೆಯಿಂದಾಗಿ ಈ ನಿಯಮವನ್ನು 20 ದಿನಗಳ ಮದ್ದುಗುಡುಗಳಿಗೆ ಇಳಿಸಲಾಗಿತ್ತು. ಸೇನೆಯ ಯುದ್ಧ ಸನ್ನದ್ಧತೆಯ ಸ್ಥಿತಿಯ ಬಗ್ಗೆ ಸಿಎಜಿ ಮತ್ತು ಸಂಸದೀಯ ಸಮಿತಿ ಕೂಡ ಪ್ರಶ್ನೆಗಳನ್ನು ಎತ್ತಿದ್ದವು. ಮದ್ದು ಗುಂಡು ಮತ್ತಿ ಶಸ್ತ್ರಾಸ್ತ್ರಗಳ ತ್ವರಿತ ಖರೀದಿಗೆ ವ್ಯವಸ್ಥೆ ಮಾಡಬೇಕೆಂದು ಸೇನೆ ಈ ಹಿಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಹಾಗೂ ಚೀನಾ-ಪಾಕಿಸ್ತಾನ-ಭಾರತ ನಡುವೆ ಉಂಟಾಗಿರುವ ಉದ್ವಿಗ್ನ ವಾತಾವರಣ ಹಿನ್ನಲೆಯಲ್ಲಿ ಇದೀಗ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿಸಲು ಸೇನೆಗೆ ಅಧಿಕಾರ ನೀಡಿದೆ. 
 ಇದರಲ್ಲಿ ಇನ್ನಷ್ಟು ಓದಿ :  
ಶಸ್ತ್ರಾಸ್ತ್ರ ಸಂಗ್ರಹ ಸೇನೆ ಕೇಂದ್ರ ಸರ್ಕಾರ ಸೂಚನೆ Weapons Indian Army Centre Government

ಸುದ್ದಿಗಳು

news

ಶಶಿಕಲಾಗೆ ವಿಶೇಷ ಕಿಚನ್, ವಿಐಪಿ ಸೌಲಭ್ಯ: ಜೈಲಿನ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ..?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಣ್ಣ ಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ...

news

ಹೆರಿಗೆಗೆ ಆಯ್ತು, ಇದೀಗ ಮಹಿಳೆಯದ ಆ ದಿನಕ್ಕೂ ರಜೆ!

ಮುಂಬೈ: ಮಹಿಳೆಯರಿಗೆ ಹೆರಿಗೆ ರಜೆಯೆಂದು ಎಲ್ಲಾ ಖಾಸಗಿ, ಸರ್ಕಾರಿ ಸಂಸ್ಥೆಗಳು ತಿಂಗಳುಗಟ್ಟಲೆ ವೇತನ ಸಹಿತ ...

news

ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಫೇಸ್ಬುಕ್`ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್ ಪತ್ನಿ

ದಲಿತರ ಮೇಲೆ ಪ್ರೀತಿ ಇದ್ದರೆ ದಲಿತರಿಗೆ ನಿಮ್ಮ ಹೆಣ್ಣುಮಕ್ಕಳನ್ನ ಕೊಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ...

news

ನನಗೆ ಮದುವೆಯಾಗಿ ಹಲವು ವರ್ಷ ಕಳೆದಿವೆ, ನಿಮಗೆ ಮದುವೆಯಾಗುವ ಅವಕಾಶ ಇದೆ: ಶೋಭಾ ಕರಂದ್ಲಾಜೆಗೆ ದಿನೇಶ್ ತಿರುಗೇಟು

ದಲಿತ ಯುವತಿ ನನಗೆ ಇಷ್ಟವಾಗಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ. ನನಗೆ ಯಾವುದೇ ಕಟ್ಟುಪಾಡುಗಳಿರಲಿಲ್ಲ ...

Widgets Magazine