ಚೆನ್ನೈ ಮೆಟ್ರೋ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಚೆನ್ನೈ, ಶುಕ್ರವಾರ, 28 ಜುಲೈ 2017 (13:55 IST)

ಮೆಟ್ರೋ ರೈಲ್ವೆ ನಿಲ್ದಾಣವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಅರುಂಬಾಕಂ ಮೆಟ್ರೋ ರೈಲ್ವೆ ನಿಲ್ದಾಣವನ್ನು ಬಾಂಬ್‌ನಿಂದ ಉಡಾಯಿಸುವುದಾಗಿ ಬೆದರಿಕೆ ಹಾಕಿದ 60 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
 
ಇಂದು ಬೆಳಿಗ್ಗೆ 7 ಗಂಟೆಗೆ ವ್ಯಕ್ತಿಯೊಬ್ಬ ಅರುಂಬಾಕಂ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಬಂದು ರೈಲು ನಿಲ್ದಾಣವನ್ನು ಬಾಂಬ್‌ನಿಂದ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ.
 
ಅಪರಿಚಿತ ವ್ಯಕ್ತಿಯ ಹೇಳಿಕೆಯಿಂದ ಕಂಗಾಲಾದ ಮೆಟ್ರೋ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ರೈಲ್ವೆ ನಿಲ್ದಾಣದ ತಪಾಸಣೆ ನಡೆಸಿದಾಗ ಯಾವುದೇ ಬಾಂಬ್ ಇಲ್ಲವೆನ್ನುವುದು ಖಚಿತವಾಗಿದೆ.
 
ಪೊಲೀಸರು ಶಂಕಿತ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಚೆನ್ನೈ ಮೆಟ್ರೋ ನಿಲ್ದಾಣ ಬಾಂಬ್ ಬೆದರಿಕೆ ಅರುಂಬಾಕಂ ಚೆನ್ನೈ ಮೆಟ್ರೋ Chennai Metro Metro Station Bomb Threat Arumbakkam Metro Rail Station

ಸುದ್ದಿಗಳು

news

ವರದಕ್ಷಿಣೆ ಪ್ರಕರಣ: ನೈಜತೆ ಪರಿಶೀಲಿಸದೇ ಆರೋಪಿಗಳನ್ನು ಬಂಧಿಸುವಂತಿಲ್ಲ-ಸುಪ್ರೀಂ

ವರದಕ್ಷಿಣೆ ಕಿರುಕುಳ ಪ್ರಕರನಕ್ಕೆ ಸಂಬಂಧಿಸಿದಂತೆ ಪ್ರಕರಣದ ನೈಜತೆ ಪರಿಶೀಲಿಸದೇ ಆರೋಪಿಗಳನ್ನು ...

news

ಬಿಹಾರ್‌ನಲ್ಲಿ ವಿಶ್ವಾಸಮತ ಗೆದ್ದ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಬಿಹಾರ್ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ...

news

ಪಾಕ್ ಪ್ರಧಾನಿ ನವಾಜ್ ದೋಷಿ, ಪಿಎಂ ಹುದ್ದೆಯಿಂದ ವಜಾ: ಸುಪ್ರೀಂಕೋರ್ಟ್

ಇಸ್ಪಾಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಪನಾಮಾ ಪ್ರಕರಣದಲ್ಲಿ ಭ್ರಷ್ಟಾಚಾರವೆಸಗಿರುವುದು ...

news

ಕಾಂಗ್ರೆಸ್ ಪಕ್ಷ ತೊರೆದಿರುವುದಕ್ಕೆ ಹಲವು ಕಾರಣಗಳಿವೆ: ಎಚ್.ವಿಶ್ವನಾಥ್

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ತೊರೆದಿರುವುದಕ್ಕೆ ಹಲವು ಕಾರಣಗಳಿವೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ...

Widgets Magazine