ಡಿಆರ್ ಡಿಒದಿಂದ ಸೈನಿಕರಿಗಾಗಿ ಚಿಕನ್ ಬಿಸ್ಕೆಟ್, ಮಟನ್ ಬಾಲ್

ನವದೆಹಲಿ, ಶನಿವಾರ, 22 ಜುಲೈ 2017 (09:16 IST)

ನವದೆಹಲಿ: ದೇಶದ ಗಡಿ ಭಾಗದಲ್ಲಿ ಹಗಲಿರುಳೆನ್ನದೆ, ಸುಡು ಬಿಸಿಲು-ಮೈಕೊರೆವ ಚಳಿಯನ್ನೂ ಗಮನಿಸದೇ ಕಾಯುವ ಸೈನಿಕರಿಗಾಗಿ ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್ ಡಿಒ) ಪ್ರೋಟಿನ್ ಸಮೃದ್ಧ ಆಹಾರಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
 
ಅಭಿವೃದ್ಧಿ ಪಡಿಸುವ ಆಹಾರ ಪದಾರ್ಥಗಳಲ್ಲಿ ಚಿಕನ್ ಬಿಸ್ಕೆಟ್ ಗಳು, ಪ್ರೋಟೀನ್ ಸಮೃದ್ಧ ಮಟನ್ ಬಾಲ್ ಗಳು, ಮಿಶ್ರ ಧಾನ್ಯಗಳ ತುಂಡುಗಳು, ಮೊಟ್ಟೆ ಪ್ರೋಟೀನ್ ಬಿಸ್ಕೆಟ್ ಗಳು, ಕಬ್ಬಿಣಾಂಶ ಮತ್ತು ಪ್ರೋಟೀನ್ ಯುಕ್ತ ಬಾರ್ ಗಳು, ಚಿಕನ್ ಕಟ್ಟಿ ರೋಲ್ ಗಳು, ಆಯಾಸ ನಿವಾರಿಸುವ ತುಳಸಿ ಬಾರ್ ಗಳು ಇರಲಿವೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸಂಸತ್ ಗೆ ಮಾಹಿತಿ ನೀಡಿದ್ದಾರೆ.
 
ಡಿಆರ್ ಡಿಒದಲ್ಲಿ ಯಾವುದೇ ಆಹಾರ ಉತ್ಪನ್ನ ಘಟಕಗಳಿಲ್ಲ. ಇದೀಗ ತಯಾರಿಸುವುದರಿಂದ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಲು ಹಲವಾರು ಉದ್ಯಮಗಳಿಗೆ ವಹಿಸಲಾಗಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಡಿಆರ್ ಡಿಒ ಸೈನಿಕರು ವಿಶೇಷ ಆಹಾರ Chiken Biscuits Tulsi Bars Developed By Drdo

ಸುದ್ದಿಗಳು

news

ಮಹಿಳೆ ಜೊತೆ ಕಾಮದಾಟವಾಡಿ ಆತ್ಮಹತ್ಯೆಗೆ ಪ್ರೇರೇಪಿಸಿದನಾ ಆ ಶಾಸಕ..?

ಕೇರಳದ ಕಾಂಗ್ರೆಸ್ ಶಾಸಕ ವಿನ್ಸೆಂಟ್ ವಿರುದ್ಧ 51 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಆತ್ಮಹತ್ಯೆಗೆ ...

news

ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕಾ, ಚೀನಾ ಮಧ್ಯಸ್ಥಿಕೆಗೆ ಮನವಿ ಮಾಡಬೇಕು: ಫಾರೂಕ್ ಅಬ್ದುಲ್ಲಾ

ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಚೀನಾದಂತಹ ದೇಶಗಳನ್ನು ಭಾರತ ಮಧ್ಯಸ್ಥಿಕೆಗಾಗಿ ...

news

ಯಡಿಯೂರಪ್ಪ ಕಚಡಾ ಮುಖ್ಯಮಂತ್ರಿ: ಮಧು ಬಂಗಾರಪ್ಪ ಕಿಡಿ

ಶಿವಮೊಗ್ಗ ಜಿಲ್ಲೆಯಿಂದ ಯಡಿಯೂರಪ್ಪನಂತಹ ಕಚಡಾ ಮುಖ್ಯಮಂತ್ರಿಯನ್ನ ಕೊಟ್ಟಿದ್ದಕ್ಕೆ ನಾಚಿಕೆ ಆಗುತ್ತಿದೆ. ...

news

ಸುನಂದಾ ಪುಷ್ಕರ್ ಸಾವಿನ ರಹಸ್ಯ ಶೀಘ್ರ ಬಹಿರಂಗ..?

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ನವದೆಹಲಿ ಹೋಟೆಲ್`ನಲ್ಲಿ ...

Widgets Magazine