ಚಿದಂಬರಂ ಕುಟುಂಬ ತಿಹಾರ್ ಜೈಲು ಸೇರಲಿದೆ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ, ಶನಿವಾರ, 23 ಸೆಪ್ಟಂಬರ್ 2017 (09:14 IST)

ನವದೆಹಲಿ: ಚಿದಂಬರಂ ಅವರದ್ದು ವಂಚಕ ಕುಟುಂಬ. ಶೀಘ್ರದಲ್ಲೇ ಇಡೀ ಕುಟುಂಬ ತಿಹಾರ್ ಜೈಲು ಪಾಲಾಗಲಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.


ದೆಹಲಿಯಲ್ಲಿ ಮಾತನಾಡಿದ ಅವರು, ಚಿದಂಬರಂ ಪುತ್ರ ಕಾರ್ತಿ ಮಹಾವಂಚಕ. ಕಾರ್ತಿಗೆ ಸರಿಯಾದ ಶಿಕ್ಷಣವಿಲ್ಲ, ಉದ್ಯೋಗವಿಲ್ಲ. ಆದರೂ ಅಷ್ಟೊಂದು ಸಂಪತ್ತು ಹೇಗೆ ಬಂತು. ಇದೆಲ್ಲವೂ ವಂಚನೆಯಿಂದ ಸಂಪಾದಿಸಿದ್ದು. ತಂದೆ ಚಿದಂಬರಂ ಅಕ್ರಮ ವ್ಯವಹಾರಗಳನ್ನು ಮಾಡುತ್ತಿದ್ದು, ಇದರಿಂದ ಮಗ ಹಣ ಗಳಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಚಿದಂಬರಂ ಪತ್ನಿ ನಳಿನಿ ಸಹ ಇದರಿಂದ ಹೊರತಾಗಿಲ್ಲ. ಹೀಗಾಗಿ ಎಲ್ಲಾ ಅಕ್ರಮಗಳು ಬಯಲಿಗೆ ಬರಲಿದ್ದು, ಶೀಘ್ರವೇ ಇಡೀ ಕುಟುಂಬ ತಿಹಾರ್ ಜೈಲು ಸೇರಲಿದೆ ಎಂದಿದ್ದಾರೆ.

ಇನ್ನು ಕಾರ್ತಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. 2007ರಲ್ಲಿ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ಒಡೆತನದ ಐಎನ್ಎಕ್ಸ್ ಮೀಡಿಯಾಗೆ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಿಂದ ಅನುಮತಿ ಪಡೆಯುವಲ್ಲಿ ಅಕ್ರಮವೆಸಗಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ಸಿಬಿಐ ಕಾರ್ತಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಈ ಸಂಬಂಧ ಕಾರ್ತಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ವಿದೇಶಿ ಬ್ಯಾಂಕ್ ಗಳ ಅಕೌಂಟ್ ಗಳನ್ನು ಕ್ಲೋಸ್ ಮಾಡಿ, ದೇಶಬಿಟ್ಟು ಹೊರಡದಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಭಿಮಾನಿಗಳಿಗೆ ಸುದೀಪ್, ಪುನೀತ್ ಕೊಟ್ಟ ಸ್ವೀಟ್ ನ್ಯೂಸ್ ಏನ್ ಗೊತ್ತಾ…?

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಒಟ್ಟಿಗೆ ತೆರೆ ಮೇಲೆ ...

news

ನೀವು ಏನಾದ್ರೂ ಮಾಡ್ಕೊಳ್ಳಿ, ಕಾಶ್ಮೀರ ವಿಷ್ಯದಲ್ಲಿ ನಾವು ಬರಲ್ಲ ಎಂದ ಚೀನಾ

ನವದೆಹಲಿ: ಕಾಶ್ಮೀರ ಗಡಿ ವಿವಾದ ವಿಚಾರದಲ್ಲಿ ಚೀನಾವನ್ನು ಎಳೆದು ತರಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ...

news

ಕಾಂಗ್ರೆಸ್, ಮಹಾತ್ಮಾ ಗಾಂಧಿ ಎಲ್ಲರೂ ಎನ್ ಆರ್ ಐಗಳಂತೆ! ರಾಹುಲ್ ಗಾಂಧಿ ಬಣ್ಣನೆ!

ನ್ಯೂಯಾರ್ಕ್: ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ...

news

ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆ!

ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಂ ಸ್ಥಾನಕ್ಕಲ್ಲ. ತಮ್ಮ ...

Widgets Magazine