ಉತ್ತರಾಖಂಡದ ಬಾರಾಹುತಿ ಗಡಿ ದಾಟಿ ಒಳನುಗ್ಗಿದ ಚೀನಾ ಸೇನೆ

ಉತ್ತರಾಖಂಡ, ಸೋಮವಾರ, 31 ಜುಲೈ 2017 (17:20 IST)

ಚಮೋಲಿ:ಇತ್ತ ಸಿಕ್ಕಿಂನ ಡೋಕ್ಲಾಂ ಗಡಿಯಲ್ಲಿ ಖ್ಯಾತೆ ಮುಂದುವರೆಸಿರುವ ಚೀನಾ ಅತ್ತ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಾಹುತಿ ಗಡಿ ಬಳಿ ಚೀನಾ ಸೇನೆ 1 ಕಿ.ಮೀ ಭಾರತದ ಗಡಿಯೊಳಗೆ ನುಗ್ಗಿಬಂದಿದೆ.
 
ಇದು ಎರಡನೆ ಸಲ ಚೀನಾ ಭಾರತದ ಗಡಿ ಉಲ್ಲಂಘಿಸುತ್ತಿರುವುದಾಗಿದ್ದು, ಜು 25ರಂದು ಬೆಳಿಗ್ಗೆ 9 ಗಂಟೆಗೆ ಭಾರತದ ಗಡಿ ಉಲ್ಲಂಘಿಸಿರುವ ಚೀನಾ ಸೇನೆ ಸುಮಾರು 800 ಮೀಟರ್ ಗಳಿಂದ 1 ಕಿ.ಮೀ ವರೆಗೆ ಒಳನುಗ್ಗಿ ಬಂದಿದೆ
 
ಜು.19ರಂದು ಕೂಡ ಚೀನ ಸೇನೆ ಚಮೋಲಿ ಜಿಲ್ಲೆಯಲ್ಲಿ ಭಾರತದ ಗಡಿಯನ್ನು ಅತಿಕ್ರಮಿಸಿ ಒಳಬಂದಿತ್ತು ಮತ್ತು ತನ್ನ ಶಸ್ತ್ರಾಸ್ತ್ರಗಳೊಂದಿಗೆ ಡೇರೆ ಹಾಕಿಕೊಂಡಿತ್ತು. ಅಗ ಬಾರಾಹುತಿ ಮೈದಾನದಲ್ಲಿ ಸರ್ವೇ ಕಾರ್ಯ ನಡೆಸಲು ಹೋಗಿದ್ದ ಚಮೋಲಿ ಜಿಲ್ಲಾಧಿಕಾರಿ ಮತ್ತು ಐಟಿಬಿಪಿಯ ಇತರ ಅಧಿಕಾರಿಗಳನ್ನು ಚೀನ ಸೇನೆ ಹಿಂದಕ್ಕೆ ಕಳುಹಿಸಿತ್ತು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಸಲೆಹೆಗಾರ ಅಜಿತ್ ದೋವಲ್ ಚೀನಾಗೆ ಭೇಟಿ ನೀಡಿದ ಈ ಸಂದರ್ಭದಲ್ಲೇ ಚೀನಾ ತನ್ನ ಹಳೇ ಚಾಳಿ ಮುಂದುವರೆಸಿರುವುದು ಉಭಯ ದೇಶಗಳ ನಡುವಿನ ಸಂಭಂಧಕ್ಕೆ ಮತ್ತಷ್ಟು ಧಕ್ಕೆಯುಂಟಾಗಲಿದೆ ಎನ್ನಲಾಗಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

13 ಗಂಟೆಗಳ ಕಾಲ ಪ್ರವಾಹದೊಂದಿಗೆ ಹೋರಾಡಿ ಬದುಕಿದ 62ರ ಮಹಿಳೆ

ಬುರ್ದವಾನ್: ದಾಮೋದರ್ ನದಿಯ ಪ್ರವಾಹ ಹೆಚ್ಚುತ್ತಿರುವುದನ್ನು ನೋಡುವ ಆಸಕ್ತಿಯಿಂದ ತೆರಳಿದ್ದ ಪೂರ್ವ ...

news

ಬಿಹಾರ್‌ನಲ್ಲಿ ಜೆಡಿಯು-ಬಿಜೆಪಿ ಮೈತ್ರಿ ದುರದೃಷ್ಟಕರ: ಶರದ್ ಯಾದವ್ ಕಿಡಿ

ನವೆದಹಲಿ: ಬಿಜೆಪಿಯೊಂದಿಗೆ ಮೈತ್ರಿಯಾಗಿ ಬಿಹಾರ್‌ ರಾಜ್ಯದಲ್ಲಿ ಸರಕಾರ ರಚಿಸಿರುವ ಬಗ್ಗೆ ...

news

ಕನ್ನಡ ಭಾಷೆಯ ಮೇಲಿನ ಯಾವುದೇ ದಾಳಿ ಸಹಿಸೋಲ್ಲ: ಸಿಎಂ ಗುಡುಗು

ಬೆಂಗಳೂರು: ಕನ್ನಡ ಭಾಷೆಯ ಪರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ, ಕನ್ನಡ ಭಾಷೆಯ ಮೇಲೆ ...

news

ಗೋ ರಕ್ಷಕರ ಹೆಸರಲ್ಲಿ ಗೂಂಡಾಗಿರಿ: ಕೇಂದ್ರದ ಪರೋಕ್ಷ ಬೆಂಬಲ: ಖರ್ಗೆ ವಾಗ್ದಾಳಿ

ಗೋ ರಕ್ಷಕರ ಹೆಸರಲ್ಲಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ದೇಶದಲ್ಲಿ ...

Widgets Magazine