Widgets Magazine
Widgets Magazine

ಮಾನನಷ್ದ ಮೊಕದ್ದಮೆಗೆ ಸರ್ಕಾರದ ಹಣ ದುರ್ಬಳಕೆ ಮಾಡಿದ ಆರೋಪದಲ್ಲಿ ಸಿಎಂ ಕೇಜ್ರಿವಾಲ್

NewDelhi, ಮಂಗಳವಾರ, 4 ಏಪ್ರಿಲ್ 2017 (11:04 IST)

Widgets Magazine

ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್ ರ ಮೇಲೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿ ವಿಚಾರಣೆ ನ್ಯಾಯಾಲಯದಲ್ಲಿದೆ. ಆದರೆ ಇದರ ವಿಚಾರಣೆಗಾಗಿ ಕೇಜ್ರಿವಾಲ್ ಗೆ ವಕೀಲ ರಾಮ್ ಜೇಠ್ಮಲಾನಿಗೆ ಕೊಡಬೇಕಿರುವ 3 ಕೋಟಿ ಮೊತ್ತದ ಬಿಲ್ ಗೆ ಸರ್ಕಾರದ ಹಣ ಬಳಸಿಕೊಳ್ಳಲು ಮುಂದಾಗಿದ್ದಾರೆಂಬ ವಿವಾದವೆಬ್ಬಿದೆ.  
ಐಟಿ ದಾಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ವಿರುದ್ಧ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯ ವಿಚಾರಣೆ ನ್ಯಾಯಾಲಯದಲ್ಲಿದೆ. ಇದರ ವಿಚಾರಣೆಗಾಗಿ ಕೇಜ್ರಿವಾಲ್ ತಮ್ಮ ಪರ ವಾದ ಮಂಡಿಸಲು ಖ್ಯಾತ ವಕೀಲ ಬಿಜೆಪಿಯವರೇ ಆದ ರಾಮ್ ಜೇಠ್ಮಲಾನಿ ಅವರನ್ನು ನೇಮಿಸಿದ್ದಾರೆ. ಜೇಠ್ಮಲಾನಿ ಈ ಪ್ರಕರಣದ ವಿಚಾರಣೆಗೆ 1 ಕೋಟಿ ರೂ. ಹಾಗೂ ಪ್ರತೀ ವಿಚಾರಣೆಗೆ 3.42 ಕೋಟಿ ರೂ.ಗಳಂತೆ ಬಿಲ್ ನೀಡಿದ್ದರು.


ಈ ಬಿಲ್ ಪಾವತಿಸಲು ಹಸಿರು ನಿಶಾನೆ ತೋರುವಂತೆ ಕೇಜ್ರಿವಾಲ್ ಸರ್ಕಾರದ ಸಚಿವ ಮನೀಶ್ ಸಿಸೋಡಿಯಾ ದೆಹಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಗೆ ಪತ್ರ ಬರೆದಿರುವುದನ್ನು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಕೇಜ್ರಿವಾಲ್ ರ ವೈಯಕ್ತಿಕ ಕಾನೂನು ಹೋರಾಟಕ್ಕೆ ಸರ್ಕಾರದ ಹಣ ಬಳಸಿಕೊಳ್ಳುವುದಕ್ಕೆ ಕಾನೂನು ಸಚಿವಾಲಯ ತಗಾದೆ ತೆಗೆದಿದೆ. ಇದೀಗ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಸಜ್ಜಾಗುತ್ತಿರುವ ಕೇಜ್ರಿವಾಲ್ ಗೆ ಉರುಳಾಗುವ ಸಾಧ್ಯತೆಯಿದೆ. 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿದ್ಧರಾಮಯ್ಯ ತಲಾಖ್ ರಾಜಕಾರಣಿ: ಕೆಎಸ್ ಈಶ್ವರಪ್ಪ

ಬೆಂಗಳೂರು: ನನ್ನ ಬಗ್ಗೆ ಟೀಕೆ ಮಾಡುವ ಅಧಿಕಾರ ಸಿಎಂ ಸಿದ್ಧರಾಮಯ್ಯ ಅವರಿಗಿಲ್ಲ. ಅವರೊಬ್ಬ ತಲಾಖ್ ...

news

ಸೆಕ್ಸ್ ಗೆ ಕರೀತಾರೆ! ದುಡ್ಡು ದೋಚುತ್ತಾರೆ! ಬೆಂಗಳೂರಿನಲ್ಲಿ ಹೊಸದೊಂದು ಹನಿಟ್ರ್ಯಾಪ್!

ಬೆಂಗಳೂರು: ಇಂದಿರಾನಗರದಲ್ಲಿ ಸುಲಿಗೆ ಮಾಡುವ ಯುವತಿಯರ ಗುಂಪೊಂದು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ...

news

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೋ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕ

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೊ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕನೊಬ್ಬ ...

news

ಗೋ ಮಾಂಸ ತಿನ್ನದಂತೆ ಅಜ್ಮೀರ್ ದರ್ಗಾದಿಂದ ಮುಸ್ಲಿಮರಿಗೆ ಹುಕುಂ!

ಶ್ರೀನಗರ: ಒಂದೆಡೆ ಗೋ ಹತ್ಯೆ ನಿಷೇಧಿಸುವ ಪರ ವಿರೋಧ ಚರ್ಚೆಯಾಗುತ್ತಿದ್ದರೆ, ಇತ್ತ ಅಜ್ಮೀರ್ ನ ದರ್ಗಾವೊಂದು ...

Widgets Magazine Widgets Magazine Widgets Magazine