ಬಿಹಾರ್‌ನಲ್ಲಿ ವಿಶ್ವಾಸಮತ ಗೆದ್ದ ಸಿಎಂ ನಿತೀಶ್ ಕುಮಾರ್

ಪಾಟ್ನಾ, ಶುಕ್ರವಾರ, 28 ಜುಲೈ 2017 (13:13 IST)

ಬಿಹಾರ್ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಯಗಳಿಸಿದ್ದಾರೆ.
 
ಸದನದಲ್ಲಿ ಧ್ವನಿಮತದ ಮೂಲಕ ನಡೆದ ಮತಯಾಚನೆಯಲ್ಲಿ ನಿತೀಶ್ ಕುಮಾರ್ ಪರವಾಗಿ 131 ಸದಸ್ಯರು ಮತಚಲಾಯಿಸಿದ್ದಾರೆ. ಆರ್‌ಜೆಡಿ ಮೈತ್ರಿಕೂಟದ ಪರವಾಗಿ 108 ಮತಗಳು ಬಂದಿವೆ.
 
ಇನ್ನು ಕೆಲವೇ ಕ್ಷಣಗಳಲ್ಲಿ ಸಿಎಂ ನಿತೀಶ್ ಕುಮಾರ್ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು ಬಿಜೆಪಿಯ 14 ಶಾಸಕರು ಮತ್ತು ಜೆಡಿಯು ಪಕ್ಷದ 14 ಶಾಸಕರು ಸಚಿವರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಕೇವಲ 15 ಗಂಟೆಯೊಳಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬಿಹಾರ್ ನಿತೀಶ್ ಕುಮಾರ್ ಲಾಲು ಯಾದವ್ ತೇಜಸ್ವಿ ಯಾದವ್ Bihar Nitish Kumar Tejaswi Yadav Lalu Prasad Yadav

ಸುದ್ದಿಗಳು

news

ಪಾಕ್ ಪ್ರಧಾನಿ ನವಾಜ್ ದೋಷಿ, ಪಿಎಂ ಹುದ್ದೆಯಿಂದ ವಜಾ: ಸುಪ್ರೀಂಕೋರ್ಟ್

ಇಸ್ಪಾಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಪನಾಮಾ ಪ್ರಕರಣದಲ್ಲಿ ಭ್ರಷ್ಟಾಚಾರವೆಸಗಿರುವುದು ...

news

ಕಾಂಗ್ರೆಸ್ ಪಕ್ಷ ತೊರೆದಿರುವುದಕ್ಕೆ ಹಲವು ಕಾರಣಗಳಿವೆ: ಎಚ್.ವಿಶ್ವನಾಥ್

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ತೊರೆದಿರುವುದಕ್ಕೆ ಹಲವು ಕಾರಣಗಳಿವೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ...

news

ರಾಜ್ಯಸಭೆ ಚುನಾವಣೆ: ಅಮಿತ್ ಶಾ ನಾಮಪತ್ರ ಸಲ್ಲಿಕೆ

ಗುಜರಾತ್‌ನಿಂದ ನಡೆಯುವ ರಾಜ್ಯ ಸಭಾ ಚುನಾವಣೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಮಪತ್ರ ...

news

ನೀವೇ ನಮ್ಮ ಪ್ರಧಾನಿಯಾಗಬೇಕಿತ್ತು ಎಂದು ಸಚಿವೆ ಸುಷ್ಮಾಗೆ ಆ ಮಹಿಳೆ ಹೇಳಿದ್ದೇಕೆ?

ನವದೆಹಲಿ: ಕಷ್ಟದಲ್ಲಿರುವವರ ನೆರವಿಗೆ ಬರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜಪ್ರಿಯತೆ ವಿದೇಶದಲ್ಲೂ ...

Widgets Magazine