ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಉಪವಾಸ ಅಂತ್ಯ

ಭೋಪಾಲ್, ಭಾನುವಾರ, 11 ಜೂನ್ 2017 (17:33 IST)

Widgets Magazine

ಮಧ್ಯಪ್ರದೇಶದ ಮಂಡ್ ಸೌರ್ ನಲ್ಲಿ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಹಿನ್ನಲೆಯಲ್ಲಿ ಶಾಂತಿ ಮರುಸ್ಥಾಪನೆಗೆ ಒತ್ತಾಯಿಸಿ ಅಮರಣಾಂತ ಉಪವಾಸ ಪ್ರಾರಂಭಿಸಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಪವಾಸ ಅಂತ್ಯಗೊಳಿಸಿದ್ದಾರೆ.
 
ದಸರಾ ಮೈದಾನದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದ ಉಪವಾಸಕ್ಕೆ ಅಂತ್ಯ ಹಾಡಲು ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿ ಚೌಹಾಣ್ ಅವರಿಗೆ ಎಳನೀರು ನೀಡಿದ್ದಾರೆ. ಏಳನೀರು ಕುಡಿದು ಚೌಹ್ವಾಣ್ ಉಪವಾಸ ಅಂತ್ಯಗೊಳಿಸಿದರು. 
 
ಸಾಲ ಮನ್ನಾ ಮತ್ತು ರೈತರ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆಗಾಗಿ ರೈತರು ಜೂನ್ 1 ರಿಂದ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕೆ ಜೂನ್ 6 ರಂದು ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಐವರು ರೈತರು ಮೃತಪಟ್ಟಿದ್ದರು. ಇದು ರೈತರ ಪ್ರತಿಭಟನೆಯನ್ನು ಹಿಂಸೆಗೆ ತಿರುಗಿಸಿತ್ತು. ನಂತರ ಶಾಂತಿಗೆ ಮನವಿ ಮಾಡಿ ಶಿವರಾಜ್ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಸ್ ತಡೆಯುತ್ತೇವೆ, ಹೋಟೆಲ್ ಮುಚ್ಚಿಸುತ್ತೇವೆ: ವಾಟಾಳ್ ನಾಗರಾಜ್

ನಾಳೆ ಕರ್ನಾಟಕ ಬಂದ್ ನಡೆಸಿಯೇ ತೀರುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ...

news

ಬೆಂಗಳೂರು ಮಹಿಳೆ ಕಿವಿಯಲ್ಲಿ ಇತ್ತು ಜೇಡ..

ಜೇಡ ಕಿವಿಯೊಳಗೆ ಹೊಕ್ಕು ಗೂಡು ಕಟ್ಟಲು ಆರಂಭಿಸಿದರೆ ಪರಿಸ್ಥಿತಿ ಹೇಗಿರಬೇಡ ಹೇಳಿ. ಇಂತದ್ದೊಂದು ಘಟನೆ ...

news

ಕುಮಟಾ ಬಳಿ ಗುಡ್ಡ ಕುಸಿದು ಮೂರು ಮಕ್ಕಳು ಬಲಿ

ಉತ್ತರಕನ್ನಡ ಜಿಲ್ಲೆ ಕರಾವಳಿಯಾದ್ಯಂತ ಕಳೆದ ಎರಡುದಿನಗಳಿಂದ ಎಡೆಬಿಡದೆ ಮಳೆಸುರಿಯುತ್ತಿದ್ದು, ಪರಿಣಾಮ ...

news

ರಾಯಣ್ಣ ಬ್ರಿಗೇಡ್`ಗೆ ಗುಡ್ ಬೈ ಹೇಳಿದ ಈಶ್ವರಪ್ಪ

ಮಿಶನ್ 150 ಯೋಜನೆ ರೂಪಿಸಿರುವ ಬಿಜೆಪಿ ಕೊನೆಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರನ್ನ ರಾಯಣ್ಣ ...

Widgets Magazine