ಅಬ್ಬಾ..! ಇಲಿ ಕಚ್ಚಿದ್ದಕ್ಕೂ ಇಷ್ಟು ದುಬಾರಿ ಮೊತ್ತದ ಪರಿಹಾರ!

ಸೇಲಂ, ಗುರುವಾರ, 30 ಆಗಸ್ಟ್ 2018 (09:31 IST)

ಸೇಲಂ: ಕೆಲವೊಮ್ಮೆ ಎಂತೆಂತಹಾ ವಿಚಿತ್ರಗಳು ನಡೆಯುತ್ತವೆ ನೋಡಿ..! ಇಲಿ ಕಚ್ಚಿದ್ದಕ್ಕೆ ಗ್ರಾಹಕ ವೇದಿಕೆಯೊಂದು ದುಬಾರಿ ಮೊತ್ತದ ಪರಿಹಾರ ನೀಡುವಂತೆ ರೈಲ್ವೇಗೆ ಆದೇಶಿಸಿದೆ.
 
ಇದು ನಡೆದಿರುವುದು ತಮಿಳುನಾಡಿನಲ್ಲಿ. ರೈಲಿನಲ್ಲಿ ಇಲಿ ಕಚ್ಚಿ ಆದ ಮಾನಸಿಕ ಕಿರಿ ಕಿರಿ ಮತ್ತು ಗಾಯಕ್ಕೆ ಪರಿಹಾರ ನೀಡುವಂತೆ ವೆಂಕಟಾಚಲಂ ಎಂಬವರು ಗ್ರಾಹಕ ವೇದಿಕೆಗೆ ದೂರು ನೀಡಿದ್ದರು.
 
ಇದರ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಇಲಿ ಕಚ್ಚಿದ ವ್ಯಕ್ತಿಗೆ ಪರಿಹಾರ ರೂಪವಾಗಿ 25 ಸಾವಿರ ರೂ. ಮತ್ತು ವೈದ್ಯಕೀಯ ಚಿಕಿತ್ಸೆಗೆ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಆದೇಶಿಸಿದೆ. ಈಗಾಗಲೇ ವೆಂಕಟಾಚಲಂ ವೈದ್ಯಕೀಯ ಚಿಕಿತ್ಸೆಗೆ 5000 ರೂ. ಖರ್ಚು ಮಾಡಿದ್ದು, ಅದನ್ನು ಭರಿಸಲೂ ವೇದಿಕೆ ಆದೇಶಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವೆ ಜಯಮಾಲಾರನ್ನು ಗ್ಲಾಮರಸ್ ಸಚಿವೆ ಎಂದವರು ಯಾರು ಗೊತ್ತೇ?

ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ನಟಿ, ...

news

ಆಂಟಿ ಬಯೋಟಿಕ್ ಔಷಧಿಗಳನ್ನು ಎಸೆಯುತ್ತಿದ್ದೀರಾ? ಹಾಗಿದ್ದರೆ ಈ ಶಾಕಿಂಗ್ ಸುದ್ದಿ ಓದಿ!

ನವದೆಹಲಿ: ಆಂಟಿಬಯೋಟಿಕೆ ಔಷಧಗಳು ಇನ್ನು ಉಪಯೋಗವಿಲ್ಲ ಎಂದು ಸಿಕ್ಕ ಸಿಕ್ಕಲ್ಲಿ ಎಸೆಯುತ್ತಿದ್ದೀರಾ? ...

news

ಇನ್ಮುಂದೆ ಬಿಎಂಟಿಸಿ ಬಸ್ ಗೂ ಬುಕಿಂಗ್ ಸೌಲಭ್ಯ?!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ನಲ್ಲಿ ಯಾವತ್ತೂ ರಶ್. ಹೇಗಪ್ಪಾ ಆರಾಮವಾಗಿ ...

news

ಕೈಲಾಸ ಯಾತ್ರೆಗೆ ಹೊರಟ ರಾಹುಲ್ ಗಾಂಧಿ

ನವದೆಹಲಿ: ಕೊನೆಗೂ ಕಾಂಗ್ರೆಸ್ ಅಧ್ಯಕ್ಷ ಕೈಲಾಸ ಯಾತ್ರೆ ಕೈಗೊಳ್ಳುವ ದಿನ ಪ್ರಕಟಿಸಿದ್ದಾರೆ. ಇದಕ್ಕೂ ಮೊದಲು ...

Widgets Magazine