ನಿತೀನ್ ಪಟೇಲ್‌ಗೆ ಬೆಂಬಲ ಘೋಷಿಸಿ ಭಿನ್ನಮತದ ಲಾಭ ಪಡೆಯಲು ಯತ್ನಿಸಿದ ಕಾಂಗ್ರೆಸ್

ಅಹಮದಾಬಾದ್, ಭಾನುವಾರ, 31 ಡಿಸೆಂಬರ್ 2017 (13:53 IST)

Widgets Magazine

ಗುಜರಾತ್‌ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತದ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸಿದ್ದು, ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಅವರು ಸರ್ಕಾರ ರಚಿಸಿದರೆ ಅವರಿಗೆ ಬೆಂಬಲ ನೀಡಲಾಗುವುದು ಎಂದು ಗುಜರಾತ್ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ಘೋಷಿಸಿದ್ದಾರೆ.
 
ಕಾಂಗ್ರೆಸ್ ಹಿರಿಯ ಶಾಸಕ ವೀರ್ಜಿ ಥುಮ್ಮರ್ ಹಾಗೂ ವಕ್ತಾರ ಮನೀಷ್‌ ಜೋಷಿ ಅವರು ನಿತಿನ್ ಪಟೇಲ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಯಿಂದ ಹೊರಬಂದು ಸರ್ಕಾರ ರಚನೆ ಮಾಡಿದರೆ ಅವರಿಗೆ ಕಾಂಗ್ರೆಸ್ ಪಕ್ಷದ ಶಾಸಕರಿಂದ ಬಾಹ್ಯ ಬೆಂಬಲ ನೀಡಲಾಗುವುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.
 
ಅಗತ್ಯ ಪ್ರಮಾಣದ ಶಾಸಕರೊಂದಿಗೆ ಬಿಜೆಪಿಯಿಂದ ಹೊರಬಂದರೆ ಗುಜರಾತ್ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಬಹುದು ಎಂದಿದ್ದಾರೆ. ಈಗಾಗಲೇ ಹಾರ್ದಿಕ್ ಪಟೇಲ್ ಕೂಡ ನಿತೀನ್ ಪಟೇಲ್ ಅವರಿಗೆ ಆಹ್ವಾನ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಿಯು ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಕಾಲೇಜಿನ ...

news

ಪ್ರಧಾನಿ ಮೋದಿ, ಅಮಿತ್ ಶಾಗೆ ತವರಿನಲ್ಲಿ ಎದುರಾಗಿದ್ದ ತಲೆನೋವು ವಾಸಿಯಾಯ್ತು!

ಅಹಮ್ಮದಾಬಾದ್: ಗುಜರಾತ್ ನಲ್ಲಿ ನೂತನ ಸರ್ಕಾರ ರಚಿಸಲು ಹೊರಟಿದ್ದ ಬಿಜೆಪಿಗೆ ಉಪ ಮುಖ್ಯಮಂತ್ರಿ ನಿತಿನ್ ...

news

ರಜನಿ ರಾಜಕೀಯ ಪ್ರವೇಶದ ಬಗ್ಗೆ ರಾಜ್ಯ ನಾಯಕರು ಏನಂತಾರೆ?

ಬೆಂಗಳೂರು:ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪಕ್ಷ ಘೋಷಣೆ ಮಾಡಿದ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಾದ ...

news

ರಜನೀಕಾಂತ್ ಅನಕ್ಷರಸ್ಥ ಎಂದ ಸುಬ್ರಮಣಿಯನ್ ಸ್ವಾಮಿ

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಹೊಸ ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಸಂಸದ ಸುಬ್ರಮಣಿಯನ್ ...

Widgets Magazine