ಸರ್ಜಿಕಲ್ ಸ್ಟ್ರೈಕ್ ಸೇನೆ ಮಾಡ್ತಿರೋ ನಾಟಕ ಸ್ವಾಮೀ.. ಎಂದ ಕಾಂಗ್ರೆಸ್ ನಾಯಕ!

ನವದೆಹಲಿ, ಮಂಗಳವಾರ, 2 ಜನವರಿ 2018 (08:47 IST)

ನವದೆಹಲಿ: ಭಾರತೀಯ ಸೇನೆ ಪಾಕ್ ಗಡಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ನಾಟಕ ಎಂದಿದ್ದಾರೆ.
 

ಸರ್ಜಿಕಲ್ ಸ್ಟ್ರೈಕ್ ಸೇನೆಯ ನಾಟಕವಷ್ಟೇ ಎಂದು ಕಾಂಗ್ರೆಸ್ ನಾಯಕನ ಹೇಳಿಕೆ ನೀಡಿದ್ದು, ಇದಕ್ಕೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 2016 ರ ಸೆಪ್ಟೆಂಬರ್ 28,29 ರಂದು ಭಾರತೀಯ ಸೇನೆ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆಬಡಿದಿತ್ತು. ಇದರಲ್ಲಿ ಪಾಕ್ ಸೈನಿಕರೂ ಸಾವನ್ನಪ್ಪಿದ್ದರು. ಅದರ ಬಗ್ಗೆ ದೇಶವೇ ಹೆಮ್ಮೆ ಪಡುತ್ತಿದ್ದರೆ ಕಾಂಗ್ರೆಸ್ ನಾಯಕ ಮಾತ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
‘ಒಂದು ವಿಷಯವಂತೂ ಸ್ಪಷ್ಟ. ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಕೇವಲ ಡ್ರಾಮಾ, ಅದರಿಂದ ಯಾವ ಪರಿಣಾಮವೂ ಆಗಿಲ್ಲ. ನಮ್ಮ ದ್ವಿಪಕ್ಷೀಯ ನೀತಿಯ ಕುರಿತು ನಾವು ಪುನರಾಲೋಚನೆ ನಡೆಸಬೇಕಿದೆ’ ಎಂದು ದೀಕ್ಷಿತ್ ಹೇಳಿದ್ದಾರೆ.
 
ಇದಕ್ಕೆ ತೀವ್ರವಾಗಿ ಟೀಕಿಸಿರುವ ಬಿಜೆಪಿ, ಸಂದೀಪ್ ದೀಕ್ಷಿತ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಹುಲ್ ಗಾಂಧಿ ಬೆಳೆಸುತ್ತಿರುವ ಕೂಸು. ಇವರು ಮತ್ತೊಬ್ಬ ಮಣಿಶಂಕರ್ ಅಯ್ಯರ್ ಎಂದು ಜರೆದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣೆ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ ರಮ್ಯಾ ನಡುವೆ ನಡೆದ ಒಪ್ಪಂದ ಏನು ಗೊತ್ತಾ?!

ಬೆಂಗಳೂರು: ನಟಿ ರಮ್ಯಾ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಯಶಸ್ಸು ಕಂಡ ಬಳಿಕ ರಾಜ್ಯ ...

news

ರಜನಿಕಾಂತ್ ಪಕ್ಷದ ಲೋಗೋ, ವೆಬ್ ಸೈಟ್ ಬಿಡುಗಡೆ ಮಾಡಿದ್ದು ಯಾಕೆ ಗೊತ್ತಾ?

ಚೆನ್ನೈ: ರಜನಿಕಾಂತ್ ಅವರು ತಮ್ಮ ಪಕ್ಷಕ್ಕೆ ಲೋಗೋ, ಆ್ಯಪ್ ಹಾಗು ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ.

news

ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ– ಸಿದ್ದರಾಮಯ್ಯ

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ...

news

ಬಿಜೆಪಿ ವಕ್ತಾರ ಸ್ಥಾನದಿಂದ ಗೋ.ಮಧುಸೂದನ್ ವಜಾ?

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗೋ ಮಧುಸೂದನ್ ಅವರನ್ನು ...

Widgets Magazine
Widgets Magazine