ಮೇಘಾಲಯದಲ್ಲಿ ಗೆದ್ದರೂ ಕಾಂಗ್ರೆಸ್ ಗೆ ಗದ್ದುಗೆಯಿಲ್ಲ!

ನವದೆಹಲಿ, ಸೋಮವಾರ, 5 ಮಾರ್ಚ್ 2018 (08:29 IST)

Widgets Magazine

ನವದೆಹಲಿ: ತ್ರಿರಾಜ್ಯ ವಿಧಾನ ಸಭಾ ಚುನಾವಣೆಗಳ ಪೈಕಿ ಮೇಘಾಲಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಬಿಜೆಪಿ ದೊಡ್ಡ ಶಾಕ್ ನೀಡಿದೆ.
 
21 ಶಾಸಕರ ಬಲವಿದ್ದ ಕಾಂಗ್ರೆಸ್ ನಾಯಕರು ಮೊನ್ನೆಯೇ ರಾಜ್ಯ ಪಾಲರನ್ನು ಭೇಟಿಯಾಗಿ ಅಧಿಕಾರ ವಹಿಸಲು ಅವಕಾಶ ಕೇಳಿದ್ದರು. ಆದರೆ ಕಾಂಗ್ರೆಸ್ ಗೆ ಬಹುಮತವಿಲ್ಲ. ಹೀಗಾಗಿ ಎನ್ ಪಿಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಯೋಜೆನ ಹಾಕಿತ್ತು.
 
ಆದರೆ ಕಾಂಗ್ರೆಸ್ ಲೆಕ್ಕಾಚಾರ ಹಾಕುವ ವೇಳೆಗೆ ಇತ್ತ 4 ಸ್ಥಾನಗಳ ಬಲವುಳ್ಳ ಬಿಜೆಪಿ ಎನ್ ಪಿಪಿ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅಧಿಕಾರದತ್ತ ಹೆಜ್ಜೆ ಇಟ್ಟಿದೆ. ಇದು ಮತ್ತೊಮ್ಮೆ ಗೋವಾದಲ್ಲಿ ನಡೆದಿದ್ದ ವಿದ್ಯಮಾನವನ್ನು ನೆನಪಿಸಿದೆ. ಅಲ್ಲೂ ಕಾಂಗ್ರೆಸ್  ಅತೀಹೆಚ್ಚು ಸ್ಥಾನಗಳನ್ನು ಗೆದ್ದರೂ ಇತರರ ಸಹಾಯದಿಂದ ಬಿಜೆಪಿ ಅಧಿಕಾರ ವಹಿಸಿಕೊಂಡಿದೆ.
 
ಇದೀಗ ಮೇಘಾಲಯದಲ್ಲಿ ಅಂತಹ ಪರಿಸ್ಥಿತಿ ಬಾರದೇ ಇರಲು ಕಾಂಗ್ರೆಸ್ ನಾಯಕರು ಯತ್ನಿಸಿದರು ಅದು ಕೈ ಗೂಡಿಲ್ಲ. ಹೀಗಾಗಿ ಈಶಾನ್ಯದ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದೆ. ಕಾಂಗ್ರೆಸ್ ಬೆಪ್ಪಾಗಿ ಕುಳಿತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮೇಘಾಲಯ ಚುನಾವಣೆ ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಸುದ್ದಿಗಳು Congress Bjp Meghalaya Election National News

Widgets Magazine

ಸುದ್ದಿಗಳು

news

ಹೆಂಡತಿಯೊಂದಿಗೆ ಜಗಳ; ಹಸುಗೂಸನ್ನು ಎದೆಗವಚಿಕೊಂಡು ತಂದೆ ಆತ್ಮಹತ್ಯೆ

ಕಲಬುರಗಿ: ಎರಡೂವರೆ ತಿಂಗಳು ಹೆಣ್ಣು ಮಗುವನ್ನು ಎದೆಗವಚಿಕೊಂಡು ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ...

news

ಪಾಕಿಸ್ತಾನದಲ್ಲಿ ಸೆನೆಟ್ ಗೆ ಹಿಂದೂ ಮಹಿಳೆ ಆಯ್ಕೆ!

ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಸಂಸದೆಯೊಬ್ಬರು ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಆ ಸ್ಥಾನಕ್ಕೇರಿದ ಹಿಂದೂ ...

news

‘ನಾನು ಹಲವು ಭಾಗ್ಯಗಳನ್ನು ಕೊಟ್ಟೆ, ಯಡಿಯೂರಪ್ಪ ಸೈಕಲ್ ಸೀರೆ ಮಾತ್ರ ಕೊಟ್ಟಿದ್ದಾರೆ’

ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ನಾನು ರಾಜ್ಯದ ಜನತೆಗೆ ಹಲವು ...

news

ಮೇಘಾಲಯದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಕಸರತ್ತು

ನವದೆಹಲಿ: ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ 21 ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ...

Widgets Magazine