12 ವರ್ಷದ ಮಗಳ ಮೇಲೆ 5 ವರ್ಷಗಳಿಂದ ತಂದೆಯಿಂದ ನಿರಂತರ ಅತ್ಯಾಚಾರ

ಭೋಪಾಲ್, ಸೋಮವಾರ, 8 ಜನವರಿ 2018 (21:59 IST)

5 ವರ್ಷಗಳ ಕಾಲ ತಂದೆಯೇ 12 ವರ್ಷದ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

ಛತ್ತರ್ಪುರ್ ನಗರದಲ್ಲಿ ಘಟನೆ ನಡೆದಿದ್ದು, ಮಗಳ ಮೇಲೆ ಪತಿ ಅತ್ಯಾಚಾರ ನಡೆಸುತ್ತಿರುವ ವಿಷಯ ತಾಯಿಗೆ ಗೊತ್ತಿದ್ದರೂ ಆಕೆ ಹೀನಕೃತ್ಯಕ್ಕೆ ಅಡ್ಡಿಪಡಿಸಿಲ್ಲ. ಅತ್ಯಾಚಾರ ಎಸಗಲು ಸಹಾಯ ಕೂಡ ಮಾಡಿದ್ದಾಳೆ ಎನ್ನಲಾಗಿದೆ.

ಬಾಲಕಿ ಮನೆಯಿಂದ ತಪ್ಪಿಸಿಕೊಂಡು ಬಂದ ಸಂದರ್ಭದಲ್ಲಿ ತಂದೆಯ ಕೃತ್ಯದ ಕುರಿತು ತನ್ನ ಸಂಬಂಧಿಯೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ವಿಚಾರ ತಿಳಿದು ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ.

ಕೃತ್ಯದ ಬಗ್ಗೆ ತಿಳಿದ ಬಾಲಕಿಯ ಸಹೋದರ ಒಂದು ವರ್ಷದ ಹಿಂದೆಯೇ ವಿರೋಧ ವ್ಯಕ್ತಪಡಿಸಲು ಮುಂದಾಗ ಆತನಿಗೆ ಸುಮ್ಮನಿರುವಂತೆ ತಂದೆ ಧಮ್ಕಿ ಹಾಕಿ ಸುಮ್ಮನಿರುವಂತೆ ಹೇಳಿದ್ದ.

ಬಾಲಕಿಯ ಹೇಳಿಕೆ ಪಡೆದ ಪೊಲೀಸರು ತಂದೆ ಹಾಗೂ ತಾಯಿ ಇಬ್ಬರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾಲಕಿಯ ಮೇಲೆ ಅತ್ಯಾಚಾರ, ಆರೋಪಿಯ ಸ್ನೇಹಿತನಿಂದ ವಿಡಿಯೋ ಚಿತ್ರೀಕರಣ

ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಅತ್ಯಾಚಾರದ ವಿಡಿಯೋವನ್ನು ಸ್ನೇಹಿತನಿಂದ ಚಿತ್ರೀಕರಿಸಿರುವ ಘಟನೆ ...

news

ಗೋಹತ್ಯೆ ಮಾತ್ರವಲ್ಲ ಎಲ್ಲ ಪ್ರಾಣಿಗಳ ಹತ್ಯೆ ನಿಷೇಧಿಸಲಿ- ರೆಡ್ಡಿ

ಗೋ ಹತ್ಯೆ ಮಾತ್ರವಲ್ಲ, ದೇಶದಲ್ಲಿರುವ ಎಲ್ಲ ಪ್ರಾಣಿಗಳ ಹತ್ಯೆ ಮಾಡುವುದು ನಿಷೇಧ ಮಾಡಲಿ ಎಂದು ಗೃಹ ಸಚಿವ ...

news

ದೀಪಕ್ ಕೊಲೆಗೆ 50ಲಕ್ಷ ಸುಪಾರಿ- ಆರ್.ಅಶೋಕ್

ಮಂಗಳೂರಲ್ಲಿ ಕೊಲೆಯಾದ ದೀಪಕ್ ರಾವ್ ಹತ್ಯೆಗೆ 50 ಲಕ್ಷ ರೂಪಾಯಿ ಸುಪಾರ ನೀಡಲಾಗಿದೆ ಎಂದು ಮಾಜಿ ಉಪ ...

news

ಜೆಡಿಎಸ್ ಪಕ್ಷಕ್ಕೆ ಅಲ್ಪಸಂಖ್ಯಾತರು ಮತ ಹಾಕಬೇಡಿ- ಪರಂ

ಅಲ್ಪಸಂಖ್ಯಾತರು ಜೆಡಿಎಸ್‍ಗೆ ಮತ ಹಾಕಬೇಡಿ, ಒಂದುವೇಳ ಹಾಕಿದರೂ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ...

Widgets Magazine